Manmohan Singh ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು
AIIMS ಉಸಿರಾಟದ ತೊಂದರೆ ಮತ್ತು ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಅವರನ್ನು ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ಹೃದ್ರೋಗ ವಿಭಾಗದಲ್ಲಿ ದಾಖಲಿಸಲಾಗಿದೆ. ಸಿಂಗ್ ಅವರು ಎರಡು ವಾರಗಳ ಹಿಂದೆ ಅಂದರೆ ಸೆಪ್ಟೆಂಬರ್ 26 ರಂದು 89 ನೇ ವರ್ಷಕ್ಕೆ ಕಾಲಿಟ್ಟಿದ್ದರು. ಏಪ್ರಿಲ್‌ನಲ್ಲಿ ಮಾಜಿ ಪ್ರಧಾನಿಗೆ ಕೊವಿಡ್ -19 ತಗುಲಿ ಏಮ್ಸ್ ಗೆ ದಾಖಲಾಗಿದ್ದರು.
Get Well Soon Dr ManMohan Singh ji
Sources:
Former Prime Minister Dr Manmohan Singh ji was having some difficulty in breathing and was complaining of chest congestion
He has been admitted to AIIMS pic.twitter.com/nTGCZ7XAaG
— Supriya Bhardwaj (@Supriya23bh) October 13, 2021
ಬುಧುವಾರ ಸಂಜೆ ಸಿಂಗ್ ಅವರಿಗೆ ಜ್ವರ ಮತ್ತು ಸುಸ್ತು ಕಂಡು ಬಂದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ನಿನ್ನೆಯಿಂದಲೇ ಜ್ವರ ಇತ್ತು. ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಮಾಜಿ ಪ್ರಧಾನಿ 2009 ರಲ್ಲಿ ಏಮ್ಸ್ ನಲ್ಲಿ ಕೊರೊನರಿ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರಿಗೆ ಮುಂಬೈ ಮೂಲದ ಪ್ರಸಿದ್ಧ ಕಾರ್ಡಿಯೊವ್ಯಾಸ್ಕುಲಾರ್ ಥೊರಾಸಿಕ್ ಸರ್ಜನ್ ಮತ್ತು ಏಷ್ಯನ್ ಹಾರ್ಟ್ ಇನ್ಸಿಟ್ಯೂಟ್ (AHI) ಉಪಾಧ್ಯಕ್ಷ ರಮಾಕಾಂತ ಪಾಂಡ ನೇತೃತ್ವದ ವೈದ್ಯರ ತಂಡದಿಂದ ರೆಡೋ ಕಾರ್ಡಿಯಾಕ್ ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಿತ್ತು. ವರದಿಗಳ ಪ್ರಕಾರ 1990 ರಲ್ಲಿ ಬೈಪಾಸ್ ಆಪರೇಷನ್ ಮತ್ತು 2004 ರಲ್ಲಿ ಸ್ಟೆಂಟಿಂಗ್ ಚಿಕಿತ್ಸೆಗೆ ಒಳಗಾದ ನಂತರ ಸಿಂಗ್ ಅವರಿಗೆ ಐದು ಬೈಪಾಸ್ ಮಾಡಲಾಗಿದೆ.
There are some unsubstantiated rumours with regards to former PM, Dr Manmohan Singh ji’s health. His condition is stable. He is undergoing routine treatment. We will share any updates as needed. We thank our friends in media for their concern.
— pranav jha (@pranavINC) October 13, 2021
ಮನಮೋಹನ್ ಸಿಂಗ್ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಟ್ವೀಟ್ ಮಾಡಿದ ಕಾಂಗ್ರೆಸ್ ಪಕ್ಷದ ವಕ್ತಾರ ಪ್ರಣವ್ ಝಾ, ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಜಿ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ಆಧಾರರಹಿತ ವದಂತಿ ಹರಿದಾಡುತ್ತಿದೆ. ಅವರ ಸ್ಥಿತಿ ಸ್ಥಿರವಾಗಿದೆ. ಅವರು ರೊಟೀನ್ ಚೆಕಪ್ಗೆ ಒಳಗಾಗುತ್ತಿದ್ದಾರೆ. ಅಗತ್ಯ ಬಂದರೆ ಹೆಚ್ಚಿನ ಮಾಹಿತಿಗಳನ್ನು ನಾವು ಶೇರ್ ಮಾಡುತ್ತೇವೆ. ಮಾಧ್ಯಮದಲ್ಲಿರುವ ನಮ್ಮ ಸ್ನೇಹಿತರ ಕಾಳಜಿಗೆ ನಾವು ಧನ್ಯವಾದ ಹೇಳುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: PM Gatishakti ಗತಿಶಕ್ತಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
Published On - 7:18 pm, Wed, 13 October 21