ಬಿಜೆಪಿ ಜೊತೆ ವಿಲೀನಗೊಳ್ಳುವ ಚಾನ್ಸೇ ಇಲ್ಲ, ಅವರೊಂದಿಗೆ ಕೇವಲ ಮೈತ್ರಿ ಮಾತ್ರ: ನಿಖಿಲ್ ಕುಮಾರಸ್ವಾಮಿ
ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಒಂದು ಸೌಹಾರ್ದಯುತವಾದ ಸಂಬಂಧವನ್ನು ಕಾಯ್ದುಕೊಂಡಿದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ತನ್ನ ಶಕ್ತಿಯನ್ನು ಬಿಜೆಪಿಗೆ ಧಾರೆಯೆರೆದಿದೆ ಮತ್ತು ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿ ತಮಗೆ ಸಹಾಯ ಮಾಡಿದೆ, ಎರಡು ಪಕ್ಷಗಳ ನಡುವೆ ಮೈತ್ರಿ ಏರ್ಪಟ್ಟ ದಿನದಿಂದ ಅರೋಗ್ಯಕರ ಬಾಂಧವ್ಯ ಇದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಬೆಂಗಳೂರು, ಏಪ್ರಿಲ್ 9: ನಗರದ ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತಾಡಿದ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ, ಪತ್ರಕರ್ತರೊಬ್ಬರು ಬಿಜೆಪಿ ಜೊತೆ ಜೆಡಿಎಸ್ ವಿಲೀನ ಪದ ಬಳಸಿದ್ದಕ್ಕೆ ಅಸಮಾಧಾನಗೊಂಡು ತಮ್ಮ ಪಕ್ಷದ ಬಗ್ಗೆ ವಿಸ್ತೃತವಾಗಿ ಹೇಳಿದರು. ಹೆಚ್ಡಿ ದೇವೇಗೌಡರು (HD Devegowda) ಕಟ್ಟಿದ್ದ ಪಕ್ಷ ಈಗಲೂ ಕರ್ನಾಟಕದಲ್ಲಿ ಬಲಿಷ್ಠವಾಗಿದೆ, ರಾಜ್ಯದಲ್ಲಿ ಪಕ್ಷದ ವೋಟ್ ಶೇರ್ 18ರಿಂದ 20 ಪರ್ಸೆಂಟ್ ನಷ್ಟಿದೆ, ಹಳೆ ಮೈಸೂರು ಭಾಗದಲ್ಲಿ ಅದು ಶೇಕಡ 34 ರಷ್ಟಿದೆ, ಕಿತ್ತೂರು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ದುರ್ಬಲವೇನೂ ಅಲ್ಲ ಎಂದು ಹೇಳಿದರು. ಜೆಡಿಎಸ್ ಪಕ್ಷವು ಬಿಜೆಪಿ ಜತೆ ಮೈತ್ರಿ ಹೊಂದಿದೆಯೇ ಹೊರತು ಅದರ ಜೊತೆ ವಿಲೀನಗೊಳ್ಳುವುದಿಲ್ಲ ಎಂದು ನಿಖಿಲ್ ಹೇಳಿದರು.
ಇದನ್ನೂ ಓದಿ: ಜಿಟಿ ದೇವೇಗೌಡರ ಮುನಿಸಿನ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರಲ್ಲೂ ಸ್ಪಷ್ಟತೆ ಮತ್ತು ಸ್ಪಷ್ಟನೆ ಇಲ್ಲ!
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾನು-ರಾಗಿಣಿ ಜೋಡಿ ಅಲ್ಲ: ಎಲ್ಲರ ಎದುರು ಸ್ಪಷ್ಟಪಡಿಸಿದ ಧರ್ಮ ಕೀರ್ತಿರಾಜ್

ಯುದ್ಧದ ಭೀತಿ; ಎಲ್ಒಸಿಗೆ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭೇಟಿ?

ಧೋನಿ ಸೇರಿದಂತೆ ಒಂದೇ ಓವರ್ನಲ್ಲಿ 4 ವಿಕೆಟ್ ಉರುಳಿಸಿದ ಚಾಹಲ್

ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
