ವರ್ಷಗಳ ರಾಜಪ್ರಭುತ್ವ ಮತ್ತು ಗುಲಾಮಗಿರಿಯಿಂದ ಸ್ವಾತಂತ್ರ್ಯ ಪಡೆದ ನಂತರ, ಪ್ರಪಂಚದ ಕಣ್ಣುಗಳು ಭಾರತದತ್ತ ನೆಟ್ಟಿದ್ದವು. ಸ್ವಾತಂತ್ರ್ಯದ ನಂತರ, ಆಂತರಿಕ ಸರ್ಕಾರ ರಚನೆಯಾಯಿತು, ಆದರೆ ಜನರಿಂದ ಆಯ್ಕೆಯಾದ ಸರ್ಕಾರಕ್ಕಾಗಿ ಕೆಲವು ವರ್ಷ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು. 1951-52ರಲ್ಲಿ ದೇಶದ ಮೊದಲ ಸಾರ್ವತ್ರಿಕ ಚುನಾವಣೆಗಳು ನಡೆದಾಗ ಈ ಕಾಯುವಿಕೆ ಕೊನೆಗೊಂಡಿತು.
ಕೇವಲ ಐದು ವರ್ಷಗಳ ಕಾಲ ಸ್ವತಂತ್ರವಾಗಿದ್ದ ಮತ್ತು ಶಿಕ್ಷಣದ ಮಟ್ಟವು ಕೇವಲ 20% ರಷ್ಟಿದ್ದ ದೇಶದಲ್ಲಿ, ಜನಸಂಖ್ಯೆಯು ತಮ್ಮದೇ ಆದ ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕನ್ನು ಪಡೆಯುವುದು ಇಡೀ ಜಗತ್ತಿಗೆ ಆ ವರ್ಷದ ದೊಡ್ಡ ಘಟನೆಯಾಗಿತ್ತು.
ಇತಿಹಾಸಕಾರ ರಾಮಚಂದ್ರ ಗುಹಾ ಅವರ ‘ಇಂಡಿಯಾ ಆಫ್ಟರ್ ಗಾಂಧಿ’ ಪುಸ್ತಕದ ಪ್ರಕಾರ, ಮೊದಲ ಸಾರ್ವತ್ರಿಕ ಚುನಾವಣೆಯು ಸಾರ್ವಜನಿಕ ನಂಬಿಕೆಯನ್ನು ಗೆಲ್ಲುವ ಯುದ್ಧವಾಗಿತ್ತು. ಯುರೋಪ್ ಮತ್ತು ಅಮೆರಿಕಾದಲ್ಲಿ, ಆರಂಭದಲ್ಲಿ ಮಹಿಳೆಯರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದರು. ಆದರೆ ಭಾರತದಲ್ಲಿ ಎಲ್ಲಾ ವಯಸ್ಕರಿಗೆ ಮತದಾನದ ಹಕ್ಕನ್ನು ನೀಡಲಾಗಿದೆ. ಆದರೆ ಆ ಕಾಲದಲ್ಲಿ, ಅಶಿಕ್ಷಿತ ಮಹಿಳೆಯರು ತಮ್ಮ ಹೆಸರನ್ನು ಬಹಿರಂಗಪಡಿಸುವುದು ಸರಿಯಲ್ಲ ಎಂದು ಪರಗಣಿಸಿದ್ದರು.
ಜನಗಣತಿಯ ಸಮಯದಲ್ಲಿ ಅವರು ತಮ್ಮ ಹೆಸರನ್ನು ಯಾರೊಬ್ಬರ ತಾಯಿ ಅಥವಾ ಹೆಂಡತಿ, ಮಗಳು ಎಂದು ಹೇಳಿಕೊಂಡರೇ ವಿನಃ ಎಲ್ಲಿಯೂ ತಮ್ಮ ಹೆಸರನ್ನೇ ಹೇಳಿರಲಿಲ್ಲ ಹೀಗಾಗಿ ಲಕ್ಷಾಂತರ ಮಹಿಳೆಯರು ಮತದಾನದಿಂದ ವಂಚಿತರಾಗಿದ್ದರು.
ಸೋವಿಯತ್ ರಷ್ಯಾದ ರೇಡಿಯೋ ಕಮ್ಯುನಿಸ್ಟ್ ಪಕ್ಷದ ಅಜೆಂಡಾವನ್ನು ಜನರಿಗೆ ಹರಡುತ್ತಿತ್ತು. ದೇಶದ ಹಿತಕ್ಕಾಗಿ ಮತ ಕೇಳುವ ನೆಹರೂವನ್ನು ಭಿಕ್ಷುಕ ಎಂದು ಕರೆದರು. ಪ್ರಚಾರಕ್ಕಾಗಿ ಕೆಲವೆಡೆ ಹಸುಗಳ ಬೆನ್ನ ಮೇಲೆ ಬರೆ ಎಳೆದು ಮತ ಕೇಳಿದರು.
ಚುನಾವಣೆಯ ಸಮಯದಲ್ಲಿ ನೆಹರೂ ಅವರು ಇಡೀ ದೇಶವನ್ನು ವ್ಯಾಪಕವಾಗಿ ಸುತ್ತಿದರು. ಒಂದು ಲಕ್ಷ ಕಿಲೋಮೀಟರ್ ಪ್ರಯಾಣ ಮಾಡಿದ್ದರು. ಚುನಾವಣೆಗಳು 25 ಅಕ್ಟೋಬರ್ 1951 ರಿಂದ ಫೆಬ್ರವರಿ 1952 ರವರೆಗೆ ನಡೆದವು, 1952 ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.
ಒಟ್ಟು ಸ್ಥಾನಗಳು 489, ಚಲಾವಣೆಯಾದ ಒಟ್ಟು ಮತಗಳು 364. ಒಟ್ಟು ಚಲಾವಣೆಯಾದ ಮತಗಳು 44.87%. ಚಲಾವಣೆಯಾದ ಮತಗಳಲ್ಲಿ ಕಾಂಗ್ರೆಸ್ 75.99% ಗಳಿಸಿತ್ತು. 1951ರಲ್ಲಿ ದೇಶದ ಜನಸಂಖ್ಯೆ 36 ಕೋಟಿ. ಈ ಪೈಕಿ 17.32 ಕೋಟಿ ಮತದಾರರಿದ್ದರು. ಆಗ ಒಟ್ಟು 2,619 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು.
14 ರಾಷ್ಟ್ರೀಯ ಪಕ್ಷಗಳು ಮತ್ತು 39 ರಾಜ್ಯ ಮಟ್ಟದ ಪಕ್ಷಗಳು ಚುನಾವಣೆಯಲ್ಲಿ ಭಾಗವಹಿಸಿದ್ದವು. ರಾಷ್ಟ್ರೀಯ ಪಕ್ಷಗಳು 418 ಸ್ಥಾನಗಳನ್ನು ಪಡೆದಿವೆ. ರಾಜ್ಯ ಮಟ್ಟದ ಪಕ್ಷಗಳು 34 ಸ್ಥಾನಗಳನ್ನು ಪಡೆದಿದ್ದವು. 2024ರ ಲೋಕಸಭೆ ಚುನಾವಣೆಯಲ್ಲಿ 97 ಕೋಟಿ ಜನರು ಮತ ಚಲಾಯಿಸಲಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ