ಸಂಸದರಾಗಿ ಅಣ್ಣಾಮಲೈ ಕೊಯಮತ್ತೂರು ಕ್ಷೇತ್ರಕ್ಕೆ ಅತ್ಯಗತ್ಯವಾಗಿ ಬೇಕಾಗಿದ್ದಾರೆ, ಏಕೆ ಬೇಕು – ಇಲ್ಲಿದೆ ವಿಷ್ಲೇಶಣೆ
ಕೊಯಮತ್ತೂರು ಕ್ಷೇತ್ರ ಮತ್ತು ಅಭ್ಯರ್ಥಿ ಇಬ್ಬರೂ ತಮ್ಮ ಭವಿಷ್ಯದ ಪ್ರಯಾಣದಲ್ಲಿ ಕವಲುದಾರಿಯಲ್ಲಿದ್ದಾರೆ. ಕೊಯಮತ್ತೂರು ಲೋಕಸಭಾ ಸ್ಥಾನಕ್ಕೆ ಕೆ ಅಣ್ಣಾಮಲೈ ಅವರ ಉಮೇದುವಾರಿಕೆ ಸಲ್ಲಿಸಿರುವುದು ನಗರದ ಆರ್ಥಿಕ ಇತಿಹಾಸದಲ್ಲಿ ಆಸಕ್ತಿದಾಯಕ ಘಟ್ಟದಲ್ಲಿ ಬರುತ್ತದೆ. ಕ್ಷೇತ್ರದಲ್ಲಿ ಜವಳಿ ಉದ್ಯಮವು ಶಿಥಿಲಾವಸ್ಥೆಯಲ್ಲಿರುವುದನ್ನು ಆರ್ಥಿಕ ತಜ್ಞರು ಈಗಾಗಲೇ ಗುರುತಿಸಿದ್ದಾರೆ. ಅದರ ಜಾಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಐಟಿ ವಲಯ ಮತ್ತು ರಕ್ಷಣಾ ಕಾರಿಡಾರ್ ಮುಂಬರುವ ವರ್ಷಗಳಲ್ಲಿ ಇಲ್ಲಿ ಪ್ರಗತಿ ಕಾಣಬೇಕಿದೆ ಎಂದು ಆರ್ಥಿಕ ತಜ್ಞರು ಬಯಸಿದ್ದಾರೆ.

ತಮಿಳುನಾಡು ಬಿಜೆಪಿ ಸಾರಥಿ, ಮಾಜಿ ಐಪಿಎಸ್ ಕೆ ಅಣ್ಣಾಮಲೈ ಹಾಲಿ ಲೋಕಸಭೆ ಚುನಾವಣೆಯಲ್ಲಿ ಪ್ರತಿಷ್ಠಿತ ಕೊಯಮತ್ತೂರಿನಿಂದ ಸ್ಪರ್ಧಿಸುತ್ತಿದ್ದಾರೆ. ಕೊಯಮತ್ತೂರು ಕ್ಷೇತ್ರ ಮತ್ತು ಅಭ್ಯರ್ಥಿ ಇಬ್ಬರೂ ತಮ್ಮ ಭವಿಷ್ಯದ ಪ್ರಯಾಣದಲ್ಲಿ ಕವಲುದಾರಿಯಲ್ಲಿದ್ದಾರೆ. ಕೊಯಮತ್ತೂರು ಲೋಕಸಭಾ ಸ್ಥಾನಕ್ಕೆ ಕೆ ಅಣ್ಣಾಮಲೈ ಅವರ ಉಮೇದುವಾರಿಕೆ ಸಲ್ಲಿಸಿರುವುದು ನಗರದ ಆರ್ಥಿಕ ಇತಿಹಾಸದಲ್ಲಿ ಆಸಕ್ತಿದಾಯಕ ಘಟ್ಟದಲ್ಲಿ ಬರುತ್ತದೆ. ಕ್ಷೇತ್ರದಲ್ಲಿ ಜವಳಿ ಉದ್ಯಮವು ಶಿಥಿಲಾವಸ್ಥೆಯಲ್ಲಿರುವುದನ್ನು ಆರ್ಥಿಕ ತಜ್ಞರು ಈಗಾಗಲೇ ಗುರುತಿಸಿದ್ದಾರೆ. ಅದರ ಜಾಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಐಟಿ ವಲಯ ಮತ್ತು ರಕ್ಷಣಾ ಕಾರಿಡಾರ್ ಮುಂಬರುವ ವರ್ಷಗಳಲ್ಲಿ ಇಲ್ಲಿ ಪ್ರಗತಿ ಕಾಣಬೇಕಿದೆ ಎಂದು ಆರ್ಥಿಕ ತಜ್ಞರು ಬಯಸಿದ್ದಾರೆ. ಕೊಯಮತ್ತೂರು ನಗರದ ಸಾಮಾಜಿಕ ಪರಿಸರ ಚೌಕಟ್ಟು ಸಹ ಭಾರಿ ಬದಲಾವಣೆಗೆ ಒಳಗಾಗಿದೆ. ನಗರವು ವಾಸ್ತವದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಜವಳಿ ಕಾರ್ಮಿಕರನ್ನು ಸೃಷ್ಟಿಸಿಲ್ಲ. ಬದಲಿಗೆ ನೂರಾರು ಐಟಿ ಇಂಜಿನಿಯರ್‌ಗಳನ್ನು ಉತ್ಪಾದಿಸುತ್ತಿದೆ. ಇದರರ್ಥ ನಗರದಲ್ಲಿ ದೊಡ್ಡ ದೊಡ್ಡ ಐಟಿ ಕಂಪನಿಗಳ ಸ್ಥಾಪನೆಗೆ ಎಡೆ ಮಾಡಿಕೊಡುತ್ತಿದೆ. ನಗರವು ಪ್ರಸ್ತುತ ಕುಂಠಿತ ವೇಗದಲ್ಲಿ ಬೆಳೆಯಲು ಮತ್ತು ಪ್ರಗತಿ ಸಾಧಿಸಲು ಈಗಿನ ‘ಸ್ವಯಂ ನಿರ್ಮಿತ’ ಮಾದರಿಗೆ ಅಂಟಿಕೊಂಡಿರುವುದು ಗಂಡಾಂತರಕಾರಿಯಾಗಿದೆ. ಪುರೋಭಿವೃದ್ಧಿಗೆ ಸರ್ಕಾರದ ಕಡೆಯಿಂದ ಹೂಡಿಕೆಗಳು ಕಡಿಮೆಯಾಗಿದೆ. ಅದು ಮೂಲಭೂತ ಮೂಲಸೌಕರ್ಯ ಅಭಿವೃದ್ಧಿಗೆ ಸೀಮಿತವಾಗಿವೆ. ಆದರೆ, ಜಾಗತಿಕವಾಗಿ ಇಂದಿನ ಆರ್ಥಿಕತೆ ಸಾಗುತ್ತಿರುವ ವೇಗವನ್ನು ನೋಡಿದರೆ ಕೊಯಮತ್ತೂರು ನಗರದ ಬೆಳವಣಿಗೆ ಎಂದಿನಂತೆ ನಿದ್ರಾವಸ್ಥೆಯಲ್ಲಿರುವುದು ಅನಪೇಕ್ಷಿತವಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಕ್ಷೇತ್ರದ ಸಂಸದರು ನಿಜಕ್ಕೂ ನಗರೋತ್ಥಾನಕ್ಕೆ ಅಪಾರ ಕೊಡುಗೆ ನೀಡಬಹುದು ಎಂಬುದನ್ನು ತಳ್ಳಿಹಾಕಲಾಗದು. ಮೊದಲನೆಯದಾಗಿ, ಪ್ರಪಂಚದಾದ್ಯಂತದ ಸರ್ಕಾರಗಳು ಸ್ಥಳೀಯ ಉತ್ಪಾದನೆಯನ್ನು ಪ್ರೋತ್ಸಾಹಿಸುತ್ತಿವೆ. ದೊಡ್ಡ ಆರ್ಥಿಕತೆಗಳು ಸೆಮಿಕಂಡಕ್ಟರ್ ಚಿಪ್ಸ್, AI...
Published On - 11:32 am, Mon, 8 April 24