ನಾನು ಗೋಮಾಂಸ ಸೇವಿಸುವುದಿಲ್ಲ, ನಾನು ‘ಹೆಮ್ಮೆಯ ಹಿಂದೂ’ : ಕಂಗನಾ ರಣಾವತ್

ಕಂಗನಾ ತಮ್ಮ ಎಕ್ಸ್​​​ ಖಾತೆಯಲ್ಲಿ ಗೋಮಾಂಸ ಅಥವಾ ಇತರ ಯಾವುದೇ ರೀತಿಯ ಕೆಂಪು ಮಾಂಸವನ್ನು ಸೇವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್‌ನ ವಿಜಯ್ ವಾಡೆಟ್ಟಿವಾರ್ ಅವರು ಕಂಗನಾ ಅವರು ಗೋಮಾಂಸವನ್ನು ಇಷ್ಟಪಡುತ್ತಾರೆ ಹಾಗೂ ಸೇವನೆ ಮಾಡುತ್ತಾರೆ ಎಂದು ಎಕ್ಸ್​​ನಲ್ಲಿ ಹೇಳಿಕೆ ನೀಡಿದರು.

ನಾನು ಗೋಮಾಂಸ ಸೇವಿಸುವುದಿಲ್ಲ, ನಾನು 'ಹೆಮ್ಮೆಯ ಹಿಂದೂ' : ಕಂಗನಾ ರಣಾವತ್
ಕಂಗನಾ ರಣಾವತ್
Follow us
ಅಕ್ಷಯ್​ ಪಲ್ಲಮಜಲು​​
|

Updated on:Apr 08, 2024 | 11:04 AM

ದೆಹಲಿ, ಎ.8: ನಟಿ ಕಂಗನಾ ರಣಾವತ್ (Kangana Ranaut) ಹಿಮಾಚಲ ಪ್ರದೇಶದ ಲೋಕಸಭೆ ಕ್ಷೇತ್ರ ಮಂಡಿಯ ಅಭ್ಯರ್ಥಿಯಾಗಿ ಸ್ವರ್ಧಿಸುತ್ತಿದ್ದಾರೆ. ಈ ಹಿಂದೆಯೂ ಅವರು ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಚಾರಗಳಿಂದ ಸುದ್ದಿಯಾಗಿತ್ತಿದ್ದರು. ಇದೀಗ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆಯಲ್ಲಿ ಸ್ಪರ್ಧಿಸುತ್ತಿರುವ ಕಾರಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸುದ್ದಿಯಾಗುತ್ತಿದ್ದಾರೆ. ಕಂಗನಾ ತಮ್ಮ ಎಕ್ಸ್​​​ ಖಾತೆಯಲ್ಲಿ ಗೋಮಾಂಸ ಅಥವಾ ಇತರ ಯಾವುದೇ ರೀತಿಯ ಕೆಂಪು ಮಾಂಸವನ್ನು ಸೇವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್‌ನ ವಿಜಯ್ ವಾಡೆಟ್ಟಿವಾರ್ ಅವರು ಕಂಗನಾ ಅವರು ಗೋಮಾಂಸವನ್ನು ಇಷ್ಟಪಡುತ್ತಾರೆ ಹಾಗೂ ಸೇವನೆ ಮಾಡುತ್ತಾರೆ ಎಂದು ಎಕ್ಸ್​​ನಲ್ಲಿ ಹೇಳಿಕೆ ನೀಡಿದರು. ಈ ಹೇಳಿಕೆಯಿಂದ ಎಕ್ಸ್​​ನಲ್ಲಿ​​​ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಅವರ ಹೇಳಿಕೆಗೆ ಎಕ್ಸ್​ನಲ್ಲೇ ಕಂಗನಾ ತಿರುಗೇಟು ನೀಡಿದ್ದಾರೆ.

ನನ್ನ ವಿರುದ್ಧ ಸಂಪೂರ್ಣ ಆಧಾರರಹಿತ ವದಂತಿಗಳು ಮಾಡಲಾಗುತ್ತಿದೆ. ಅವುಗಳು ‘ನಾಚಿಕೆಗೇಡಿನ’ ವಿಚಾರ ಎಂದು ಹೇಳಿದ್ದಾರೆ. ನಾನು ದಶಕಗಳಿಂದ ಯೋಗ ಮತ್ತು ಆಯುರ್ವೇದ ಜೀವನ ವಿಧಾನವನ್ನು ಪಾಲಿಸುತ್ತಿದ್ದೇನೆ ಹಾಗೂ ಪ್ರಚಾರ ಮಾಡುತ್ತಿದ್ದೇನೆ. ಆದರೆ ಇದೀಗ ನನ್ನ ಮೇಲೆ ಕೆಟ್ಟ ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ಆರೋಪಗಳಿಂದ ನನ್ನ ಇಮೇಜ್​​​ನ್ನು ಹಾಳು ಮಾಡುವುದಿಲ್ಲ ಎಂದು ಹೇಳಿದ್ದಾರೆ.

ನನ್ನ ಜನರಿಗೆ ನಾನು ‘ಹೆಮ್ಮೆಯ ಹಿಂದೂ’ ಎಂದು ಗೊತ್ತಿದೆ. ನನ್ನ ಮೇಲೆ ಇಂತಹ ಆರೋಪಗಳನ್ನು ಮಾಡಿ ಅವರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ, ‘ಜೈ ಶ್ರೀ ರಾಮ್’ ಎಂದು ನಟಿ ಕಂಗನಾ ರಣಾವತ್ ಎಕ್ಸ್​​ನಲ್ಲಿ ಟ್ವೀಟ್​​​ ಮಾಡಿದ್ದಾರೆ. ಇನ್ನು ಕಾಂಗ್ರೆಸ್‌ನ ವಿಜಯ್ ವಾಡೆಟ್ಟಿವಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿಯ ಶೈನಾ ಎನ್‌ಸಿ ವಿಜಯ್ ವಾಡೆಟ್ಟಿವಾರ್ ಅವರು ಮಹಾರಾಷ್ಟ್ರದ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದು, ಅವರು ಕಂಗನಾ ರಣಾವತ್ ಅವರಿಗೆ ಗೋಮಾಂಸ ತಿನ್ನುವ ಕಾರಣಕ್ಕಾಗಿ ಟಿಕೆಟ್ ನೀಡಲಾಗಿದೆ ಎಂದು ಹೇಳುವ ಧೈರ್ಯವಿದೆ. ಕಾಂಗ್ರೆಸ್ ಇಂತಹ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:45 am, Mon, 8 April 24