Terrorist Attack: ಕಾಶ್ಮೀರದ ಬಂಡಿಪೊರದಲ್ಲಿ ಉಗ್ರರ ದಾಳಿ; ಇಬ್ಬರು ಪೊಲೀಸರ ಸಾವು

|

Updated on: Dec 10, 2021 | 8:04 PM

ಬಂಡಿಪೋರಾ ಟೌನ್‌ಶಿಪ್‌ನ ಗುಲ್ಶನ್ ಚೌಕ್‌ನಲ್ಲಿ ಉಗ್ರರು ನಡೆಸಿದ ಹಠಾತ್ ದಾಳಿಯಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Terrorist Attack: ಕಾಶ್ಮೀರದ ಬಂಡಿಪೊರದಲ್ಲಿ ಉಗ್ರರ ದಾಳಿ; ಇಬ್ಬರು ಪೊಲೀಸರ ಸಾವು
ಪ್ರಾತಿನಿಧಿಕ ಚಿತ್ರ
Follow us on

ಶ್ರೀನಗರ: ಜಮ್ಮು ಕಾಶ್ಮೀರದ ಬಂಡೀಪೊರ ಜಿಲ್ಲೆಯ ಗುಲ್​ಶಾನ್ ಚೌಕ್ ಬಳಿ ಮುಸುಕುಧಾರಿ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಪೊಲೀಸ್‌ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಜಮ್ಮು-ಕಾಶ್ಮೀರದ ಗುಲ್ಶನ್ ಚೌಕ್‌ನಲ್ಲಿ ಉಗ್ರರ ದಾಳಿ ನಡೆದಿದ್ದು, ಮೊಹಮದ್ ಸುಲ್ತಾನ್, ಫಯಾಜ್ ಅಹ್ಮದ್‌ ಸಾವನ್ನಪ್ಪಿದ್ದಾರೆ. ಪೊಲೀಸರನ್ನು ಗುರಿಯಾಗಿಸಿ ಫೈರಿಂಗ್ ನಡೆಸಿದ್ದ ಉಗ್ರರು ಲಷ್ಕರ್ ಸಂಘಟನೆಯ ಭಯೋತ್ಪಾದಕರೆಂಬ ಅನುಮಾನ ವ್ಯಕ್ತವಾಗಿದೆ.

ಬಂಡಿಪೋರಾ ಟೌನ್‌ಶಿಪ್‌ನ ಗುಲ್ಶನ್ ಚೌಕ್‌ನಲ್ಲಿ ಉಗ್ರರು ನಡೆಸಿದ ಹಠಾತ್ ದಾಳಿಯಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಪೊಲೀಸರು ಕರ್ತವ್ಯದಲ್ಲಿದ್ದಾಗ ಅವರ ಮೇಲೆ ಗುಂಡು ಹಾರಿಸಲಾಗಿದೆ. ತಕ್ಷಣ ಆ ಇಬ್ಬರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಈ ಘಟನೆಯ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದ್ದಾರೆ.

ಇಂದು ನಡೆದ ದಾಳಿಯನ್ನು ಖಂಡಿಸಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ. ಉತ್ತರ ಕಾಶ್ಮೀರದ ಬಂಡಿಪೋರ್ ಪ್ರದೇಶದಲ್ಲಿ ಇಂದು ಮುಂಜಾನೆ ಪೊಲೀಸರ ಮೇಲೆ ಉಗ್ರಗಾಮಿ ದಾಳಿಯನ್ನು ನಾನು ಖಂಡಿಸುತ್ತೇನೆ,ಈ ಘಟನೆಯಲ್ಲಿ ಜಮ್ಮು ಕಾಶ್ಮೀರದ ಪೊಲೀಸ್ ಸಿಬ್ಬಂದಿಯಾದ ಮೊಹಮ್ಮದ್ ಸುಲ್ತಾನ್ ಮತ್ತು ಫಯಾಜ್ ಅಹ್ಮದ್ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.

ಕೆಲವು ವಾರಗಳ ಹಿಂದೆ ನಾಗರಿಕನೊಬ್ಬನ ಹತ್ಯೆಯನ್ನು ಹೊರತುಪಡಿಸಿ ಬಂಡಿಪೋರ್ ಕಳೆದ ವರ್ಷದಿಂದ ಕೊಂಚ ಶಾಂತಿಯುತವಾಗಿದೆ. ಬಂಡಿಪೋರ್ ಟೌನ್‌ಶಿಪ್‌ನಲ್ಲಿ ನಡೆದ ಕೊನೆಯ ದಾಳಿಯಲ್ಲಿ ಜುಲೈ 2020ರಲ್ಲಿ ಬಿಜೆಪಿ ನಾಯಕ ವಸೀಂ ಬಾರಿ, ಅವರ ತಂದೆ ಮತ್ತು ಸಹೋದರನನ್ನು ಕೊಲ್ಲಲಾಗಿತ್ತು.

ಇದನ್ನೂ ಓದಿ: ಶೋಪಿಯಾನ್​​ನಲ್ಲಿ ಇಬ್ಬರು ಎಲ್​ಇಟಿ ಉಗ್ರರ ಬಂಧನ; ಅವರ ಬಳಿಯಿದ್ದ ಚೈನೀಸ್​ ಪಿಸ್ತೂಲ್, ಗ್ರೆನೇಡ್​ ವಶ​

Pulwama Encounter: ಪುಲ್ವಾಮಾದಲ್ಲಿ ಕಾರ್ಯಾಚರಣೆ; ಜೈಷ್​ ಎ ಮೊಹಮ್ಮದ್​ ಉನ್ನತ ಕಮಾಂಡರ್ ಸೇರಿ ಇಬ್ಬರು ಉಗ್ರರ ಸಾವು

Published On - 8:02 pm, Fri, 10 December 21