TTD: ತಿರುಪತಿ ತಿಮ್ಮಪ್ಪನಿಗೆ ಅನಾಮಧೇಯ ವ್ಯಕ್ತಿಯಿಂದ 3 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಾಣಿಕೆ

ಕೆಲವು ದಿನಗಳ ಹಿಂದೆ ಅನಾಮಧೇಯ ಭಕ್ತರೊಬ್ಬರು ತಿರುಪತಿ ದೇವರಿಗೆ 3 ಕೋಟಿ ರೂ. ಬೆಲೆ ಬಾಳುವ ವಜ್ರ ಮತ್ತು ಚಿನ್ನದಿಂದ ಮಾಡಲಾದ ಕಟಿ-ವರದ ಹಸ್ತವನ್ನು ಕಾಣಿಕೆಯಾಗಿ ನೀಡಿದ್ದಾರೆ.

TTD: ತಿರುಪತಿ ತಿಮ್ಮಪ್ಪನಿಗೆ ಅನಾಮಧೇಯ ವ್ಯಕ್ತಿಯಿಂದ 3 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಾಣಿಕೆ
ತಿರುಪತಿಗೆ ಕಾಣಿಕೆಯಾಗಿ ನೀಡಲಾದ ಚಿನ್ನಾಭರಣ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Dec 10, 2021 | 9:36 PM

ತಿರುಪತಿ: ಕೊರೊನಾದಿಂದಾಗಿ ದೇವಸ್ಥಾನಗಳಿಗೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಆದರೂ ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ದಿನವೂ ಸಾವಿರಾರು ಸಂಖ್ಯೆಯಲ್ಲಿ ಹರಿದುಬರುತ್ತಿರುವ ಜನರ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ. ದೇಶದ ಶ್ರೀಮಂತ ದೇವಸ್ಥಾನದಲ್ಲಿ ಒಂದಾಗಿರುವ ತಿರುಮಲ ತಿರುಪತಿ ದೇವಸ್ಥಾನದ ವೆಂಕಟೇಶ್ವರ ಸ್ವಾಮಿ ದೇವರಿಗೆ ಅನಾಮಧೇಯ ಭಕ್ತರೊಬ್ಬರು 3 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಕೊಡುಗೆಯಾಗಿ ನೀಡಿದ್ದಾರೆ. ಕೊರೊನಾದಿಂದ ಸಾಕಷ್ಟು ನಿಯಮಗಳನ್ನು ಅಳವಡಿಸಲಾಗಿದ್ದರೂ ಹಣ, ಚಿನ್ನ ಮತ್ತಿತರ ಬೆಲೆ ಬಾಳುವ ವಸ್ತುಗಳನ್ನು ಕಾಣಿಕೆಯಾಗಿ ನೀಡುವವರ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ.

ಕೆಲವು ದಿನಗಳ ಹಿಂದೆ ಅನಾಮಧೇಯ ಭಕ್ತರೊಬ್ಬರು ತಿರುಪತಿ ದೇವರಿಗೆ 3 ಕೋಟಿ ರೂ. ಬೆಲೆ ಬಾಳುವ ವಜ್ರ ಮತ್ತು ಚಿನ್ನದಿಂದ ಮಾಡಲಾದ ಕಟಿ-ವರದ ಹಸ್ತವನ್ನು ಕಾಣಿಕೆಯಾಗಿ ನೀಡಿದ್ದಾರೆ. ಆದರೆ, ತನ್ನ ಹೆಸರನ್ನು ಹೇಳಲು ಅವರು ಇಚ್ಛಿಸಿಲ್ಲ. ವೆಂಕಟೇಶ್ವರನಿಗೆ ಕಾಣಿಕೆಯಾಗಿ ನೀಡಿರುವ ಈ ಚಿನ್ನ- ವಜ್ರದ ಹಸ್ತಗಳನ್ನು ನಾನು ಭಕ್ತಿಯಿಂದ ನೀಡುತ್ತಿದ್ದೇನೆ, ಅದಕ್ಕೆ ಪ್ರಚಾರ ಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ.

ಈ ಚಿನ್ನದ ಆಭರಣ ಬರೋಬ್ಬರಿ 5.3 ಕೆಜಿ ಮೌಲ್ಯದ್ದಾಗಿದೆ. ಇದಕ್ಕೆ ಸುಮಾರು 3 ಕೋಟಿ ವೆಚ್ಚವಾಗಿದೆ. ಈ ಆಭರಣವನ್ನು ತಿರುಪತಿ ದೇಗುಲದ ಅಧಿಕಾರಿಗಳಿಗೆ ಆ ಭಕ್ತರು ನೀಡಿದ್ದಾರೆ.

ಇದನ್ನೂ ಓದಿ: ತಿರುಮಲ ತಿರುಪತಿ ದೇವಸ್ಥಾನಂನ ಒಎಸ್​ಡಿ ಪಿ.ಶೇಷಾದ್ರಿ ವಿಶಾಖಪಟ್ಟಣಂನಲ್ಲಿ ನಿಧನ

ಮೈಸೂರು: ಚಾಮುಂಡಿದೇವಿ ದೇವಸ್ಥಾನದ ಹುಂಡಿಯಲ್ಲಿ ಭರ್ಜರಿ ಕಾಣಿಕೆ; ಒಂದೂವರೆ ತಿಂಗಳಲ್ಲಿ 1.77 ಕೋಟಿ ರೂ. ಸಂಗ್ರಹ

Published On - 9:34 pm, Fri, 10 December 21

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ