ಶ್ರೀನಗರದಲ್ಲಿ ಇಬ್ಬರು ಶಿಕ್ಷಕರನ್ನು ಹತ್ಯೆಗೈದ ಭಯೋತ್ಪಾದಕರು; 3 ನಾಗರಿಕರು ಕೊಲೆಯಾದ ಎರಡೇ ದಿನದಲ್ಲಿ ಘಟನೆ

| Updated By: Lakshmi Hegde

Updated on: Oct 07, 2021 | 1:35 PM

ಶಿಕ್ಷಕರಿಬ್ಬರ ಹತ್ಯೆಯನ್ನು ಬಿಜೆಪಿಯ ಜಮ್ಮು-ಕಾಶ್ಮೀರ ವಕ್ತಾರ ಅಲ್ತಫ್​ ಠಾಕೂರ್​ ತೀವ್ರವಾಗಿ ಖಂಡಿಸಿದ್ದಾರೆ. ಏನೇನೂ ರಾಜಕೀಯ ಮಾಡದ, ಶಿಕ್ಷಣ ವೃತ್ತಿಯಲ್ಲಿರುವ ಶಿಕ್ಷಕರನ್ನು ಕೊಂದಿದ್ದು ನಿಜಕ್ಕೂ ಅಮಾನವೀಯ ಕೃತ್ಯ ಎಂದಿದ್ದಾರೆ.

ಶ್ರೀನಗರದಲ್ಲಿ ಇಬ್ಬರು ಶಿಕ್ಷಕರನ್ನು ಹತ್ಯೆಗೈದ ಭಯೋತ್ಪಾದಕರು; 3 ನಾಗರಿಕರು ಕೊಲೆಯಾದ ಎರಡೇ ದಿನದಲ್ಲಿ ಘಟನೆ
ಸಾಂಕೇತಿಕ ಚಿತ್ರ
Follow us on

ಶ್ರೀನಗರ: ಇಲ್ಲಿನ ಸಾಫಾ ಕಡಲ್​ ಪ್ರದೇಶದಲ್ಲಿರುವ ಶಾಲೆಯೊಂದರ ಪ್ರಿನ್ಸಿಪಾಲ್​ ಮತ್ತು ಶಿಕ್ಷಕರೊಬ್ಬರನ್ನು ಉಗ್ರರು(Terrorists) ಹತ್ಯೆಗೈದಿದ್ದಾರೆ. ಶ್ರೀನಗರ ಮತ್ತು ಬಂಡಿಪೋರಾದಲ್ಲಿ ಎರಡು ದಿನಗಳ ಹಿಂದೆ ಒಟ್ಟು ಮೂವರು ನಾಗರಿಕರನ್ನು ಉಗ್ರರು ಗುಂಡುಹೊಡೆದು ಕೊಂದಿದ್ದರು. ಇದೀಗ ಇಬ್ಬರು ಶಿಕ್ಷಕರನ್ನು ಹತ್ಯೆಗೈದಿದ್ದಾರೆ. ಮೃತರನ್ನು ಸತೀಂದರ್​ ಕೌರ್​ ಮತ್ತು ದೀಪಕ್​ ಚಾಂದ್​ ಎಂದು ಗುರುತಿಸಲಾಗಿದ್ದು, ಇಬ್ಬರೂ ಅಲೋಚಿಬಾಗ್ ನಿವಾಸಿಗಳು ಎನ್ನಲಾಗಿದೆ. ಉಗ್ರರಿಂದ ಗುಂಡೇಟು ತಿಂದು ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಕರೆದುಕೊಂಡು ಬರುವಷ್ಟರಲ್ಲಿಯೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. 

ಘಟನೆಯ ಬಗ್ಗೆ ಜಮ್ಮು-ಕಾಶ್ಮೀರದ ಡಿಜಿಪಿ ದಿಲ್​ಬಗ್​ ಸಿಂಗ್​, ಹೀಗೆ ನಾಗರಿಕರನ್ನು ಹತ್ಯೆ ಮಾಡುತ್ತಿರುವುದನ್ನು ನಾವು ಸಹಿಸುವುದಿಲ್ಲ. ಕಾಶ್ಮೀರದ ಸಮುದಾಯವನ್ನು ವಿಭಜಿಸುವ ಜತೆ, ಭಯೋತ್ಪಾದಕತೆಯನ್ನು ಹರಡುವ ಯತ್ನ ಇದಾಗಿದೆ. ಈ ಪ್ರಕರಣಗಳನ್ನು ನಾವು ಕೂಲಂಕಷವಾಗಿ ತನಿಖೆ ನಡೆಸಲಿದ್ದೇವೆ. ಅಪರಾಧ ಮಾಡಿದವರನ್ನು ಶೀಘ್ರವೇ ಪತ್ತೆಹಚ್ಚುತ್ತೇವೆ.  ಪಾಕಿಸ್ತಾನಿಗಳ ಅಣತಿ ಮೇರೆಗೆ, ನಮ್ಮ ಗಡಿಭಾಗಗಳಲ್ಲಿ ನಿರಂತರವಾಗಿ ಇದು ನಡೆಯುತ್ತಿದೆ ಎಂಬುದು ನಮಗೆ ಗೊತ್ತು ಎಂದೂ ಹೇಳಿದ್ದಾರೆ.

ಹಾಗೇ, ಶಿಕ್ಷಕರಿಬ್ಬರ ಹತ್ಯೆಯನ್ನು ಬಿಜೆಪಿಯ ಜಮ್ಮು-ಕಾಶ್ಮೀರ ವಕ್ತಾರ ಅಲ್ತಫ್​ ಠಾಕೂರ್​ ತೀವ್ರವಾಗಿ ಖಂಡಿಸಿದ್ದಾರೆ. ಏನೇನೂ ರಾಜಕೀಯ ಮಾಡದ, ಶಿಕ್ಷಣ ವೃತ್ತಿಯಲ್ಲಿರುವ ಶಿಕ್ಷಕರನ್ನು ಕೊಂದಿದ್ದು ನಿಜಕ್ಕೂ ಅಮಾನವೀಯ ಕೃತ್ಯ. ಇದು ಭಯೋತ್ಪಾದಕರ ಹತಾಶೆಯ ಪರಮಾವಧಿಯನ್ನು ತೋರಿಸುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸುವ ಈ ಶಿಕ್ಷಕರು ಮಾಡಿದ ತಪ್ಪಾದರೂ ಏನು ಎಂದು ಠಾಕೂರ್​ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: GGVV: ಬಹುನಿರೀಕ್ಷಿತ ‘ಗರುಡ ಗಮನ ವೃಷಭ ವಾಹನ’ ಚಿತ್ರ ತಂಡದಿಂದ ಹೊರಬಿತ್ತು ಮಹತ್ವದ ಅಪ್ಡೇಟ್; ಇಲ್ಲಿದೆ ಮಾಹಿತಿ

ಲಖಿಂಪುರ ಖೇರಿ ಹಿಂಸಾಚಾರದ ಸ್ಥಿತಿ ವರದಿ ನಾಳೆಯೊಳಗೆ ಸಲ್ಲಿಸುವಂತೆ ಯುಪಿ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಸೂಚನೆ

Published On - 12:44 pm, Thu, 7 October 21