GGVV: ಬಹುನಿರೀಕ್ಷಿತ ‘ಗರುಡ ಗಮನ ವೃಷಭ ವಾಹನ’ ಚಿತ್ರ ತಂಡದಿಂದ ಹೊರಬಿತ್ತು ಮಹತ್ವದ ಅಪ್ಡೇಟ್; ಇಲ್ಲಿದೆ ಮಾಹಿತಿ

Garuda Gamana Vrushabha Vahana: ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ಪಾತ್ರ ವರ್ಗ ಹಾಗೂ ಹೆಸರಿನ ಮುಖಾಂತರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ‘ಗರುಡ ಗಮನ ವೃಷಭ ವಾಹನ’ ಚಿತ್ರದ ಟ್ರೈಲರ್ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.

GGVV: ಬಹುನಿರೀಕ್ಷಿತ ‘ಗರುಡ ಗಮನ ವೃಷಭ ವಾಹನ’ ಚಿತ್ರ ತಂಡದಿಂದ ಹೊರಬಿತ್ತು ಮಹತ್ವದ ಅಪ್ಡೇಟ್; ಇಲ್ಲಿದೆ ಮಾಹಿತಿ
‘ಗರುಡ ಗಮನ ವೃಷಭ ವಾಹನ’ ಚಿತ್ರದ ಪೋಸ್ಟರ್
Follow us
TV9 Web
| Updated By: shivaprasad.hs

Updated on:Oct 07, 2021 | 1:08 PM

ರಾಜ್.ಬಿ.ಶೆಟ್ಟಿ (Raj B Shetty) ಈಗಾಗಲೇ ‘ಒಂದು ಮೊಟ್ಟೆಯ ಕಥೆ’ ಚಿತ್ರದ ಮುಖಾಂತರ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಅವರ ನಿರ್ದೇಶನದ ಎರಡನೇ ಚಿತ್ರ ‘ಗರುಡ ಗಮನ ವೃಷಭ ವಾಹನ’ವು ಈಗಾಗಲೇ ತನ್ನ ಶೀರ್ಷಿಕೆ ಹಾಗೂ ಪೋಸ್ಟರ್​ನಿಂದ ಗಮನ ಸೆಳೆದಿದೆ. ಈ ಚಿತ್ರದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮತ್ತೊಂದು ಪಾತ್ರದಲ್ಲಿ ರಾಜ್.ಬಿ.ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಇದೀಗ ಚಿತ್ರತಂಡ ಹೊಸ ಮಾಹಿತಿ ಹಂಚಿಕೊಂಡಿದ್ದು, ಅಕ್ಟೋಬರ್ 15ರಂದು ಚಿತ್ರದ ಟ್ರೈಲರ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಪರಂವಃ ಸ್ಟುಡಿಯೋಸ್ ಟ್ವಿಟರ್ ಖಾತೆಯಲ್ಲಿ ಈ ಕುರಿತು ಅಧಿಕೃತ ಮಾಹಿತಿ ಹಂಚಿಕೊಳ್ಳಲಾಗಿದ್ದು, ‘ಅಕ್ಟೋಬರ್ 15ರಂದು ಶಿವ ಮತ್ತು ಹರಿಯ ಪ್ರಪಂಚವನ್ನು ತೆರೆದಿಡಲಾಗುವುದು’ ಎಂದು ತಿಳಿಸಲಾಗಿದೆ. ಇತ್ತೀಚೆಗಷ್ಟೇ ಈ ಚಿತ್ರವನ್ನು ಪರಂವಃ ಪಿಚ್ಚರ್ಸ್ (Paramvah Pictures) ಮುಖಾಂತರ ಪ್ರಸ್ತುತಪಡಿಸುವುದಾಗಿ ನಟ ರಕ್ಷಿತ್ ಶೆಟ್ಟಿ (Rakshith Shetty) ತಿಳಿಸಿದ್ದರು.

ಚಿತ್ರತಂಡ ಹಂಚಿಕೊಂಡ ಮಾಹಿತಿ ಇಲ್ಲಿದೆ:

ಚಿತ್ರದ ಕುರಿತು ಪತ್ರದ ಮುಖಾಂತರ ಮೆಚ್ಚುಗೆ ವ್ಯಕ್ತಪಡಿಸಿದ್ದ ರಕ್ಷಿತ್ ಶೆಟ್ಟಿ: ಇತ್ತೀಚೆಗಷ್ಟೇ ಪರಂವಃ ಪಿಚ್ಚರ್ಸ್ ಮುಖಾಂತರ ಚಿತ್ರವನ್ನು ಪ್ರಸ್ತುತಪಡಿಸುವುದಾಗಿ ತಿಳಿಸಿದ್ದ ರಕ್ಷಿತ್ ಶೆಟ್ಟಿ, ಪತ್ರದ ಮುಖಾಂತರ ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ‘ಒಂದು ಸಿನಿಮಾ ನಮ್ಮನ್ನು ಮೂರು ಘಂಟೆಗಳ ಕಾಲ ಹಿಡಿದಿಟ್ಟುಕೊಳ್ಳುವುದು ಅದರ ಸಾಮರ್ಥ್ಯ. ಆದರೆ ಅದೇ ಸಿನಿಮಾ ದಿನಗಳಗಟ್ಟಲೆ ಕಾಡುತ್ತಿದೆ ಅಂದರೆ ಅದು ನಮ್ಮನ್ನು ಆವರಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಅದು ಬರಿ ಸಾಮರ್ಥ್ಯವಲ್ಲ, ಅದನ್ನೂ ಮೀರಿದ ಶಕ್ತಿ. ಈ ಕಲಾ ಕುಸುರಿಗೆ ನಾನು, ನನ್ನ ಮನಸಲ್ಲಿ ಗಟ್ಟಿಯಾದ ಜಾಗ ಮಾಡಿಕೊಟ್ಟಿರುವೆ. ಬಹುಶಃ ನಾನು ಅದೇ ಭಾಗದ ಕಂಪನ್ನು ಹಂಚಿಕೊಂಡಿರುವುದಕ್ಕಾ? ಅಥವಾ ಸಿನಿಮಾದ ಪಾತ್ರಗಳು ಮತ್ತು ಅವರು ಕಟ್ಟಿಕೊಟ್ಟಿರುವ ದೃಶ್ಯಾವಳಿ ಮನಸ್ಸಿನ ಉಸಿರಾಟವನ್ನು ಹಿಡಿದಿತ್ತಾ? ನನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕುವಂತೆ ಅನಿಸಿತ್ತು. ಇವೆ ಮುಖ್ಯ ಕಾರಣಗಳ? ಅಲ್ಲ. ಇದನ್ನು ಮೀರಿದ ಅವಿನಾಭಾವ ಸಿಲುಕುವಿಕೆ ಹಾಗೂ ಅಭಿನಯ ಮತ್ತು ಚಿತ್ರಕಥೆ’ ಎಂದು ಅವರು ಬರೆದಿದ್ದರು.

ಮುಂದುವರೆದು ಅವರು, ‘ರಾಜ್ ಶೆಟ್ಟಿ ಎಂಬ ಪ್ರತಿಭೆ ಯಾವ ದೇವರ ವರವೋ ಗೊತ್ತಿಲ್ಲ. ಕನ್ನಡ ಚಿತ್ರರಂಗಕ್ಕೆ, ಅವರ ತಪಸ್ಸು, ನಿಷ್ಠೆ, ಆತ್ಮ ಸಮರ್ಪಣೆ ಎಲ್ಲವೂ ಸೇರಿ ಅವರನ್ನು ಒಬ್ಬ ಉತ್ತಮ ಬರಹಗಾರನನ್ನಾಗಿ ಮಾಡಿದೆ. ಇದರಲ್ಲಿ ಅವರ ನಿರ್ದೇಶನ ಮತ್ತು ಅಭಿನಯ ಹೃದಯ ಕಣಿವೆಯಲ್ಲಿ ಚಪ್ಪಾಳೆ ಹರಿಸುತ್ತದೆ. ಇಂತಹ ಕಲಾ ಕನಸಿನೊಂದಿಗೆ ಕೈ ಜೋಡಿಸುವುದು, ನನ್ನ ಕನಸು ನನಸಾದಷ್ಟೇ ಸಂತೋಷ. Paramvah Pictures ಮೂಲಕ ಇದನ್ನು ನಿಮಗೆ ಅರ್ಪಿಸುತ್ತೇವೆ. ನಿಮ್ಮ ಪ್ರೀತಿಯ ಬೆಂಬಲಕ್ಕಿಂತ ಇನ್ನೇನು ಕೇಳಲಿ’ ಎಂದು ಚಿತ್ರದ ಕುರಿತು ಮೆಚ್ಚುಗೆಯನ್ನೂ, ಅದನ್ನು Paramvah Pictures ಪ್ರಸ್ತುತ ಪಡಿಸುತ್ತಿರುವುದನ್ನೂ ತಿಳಿಸಿದ್ದರು. ಈ ಕಾರಣದಿಂದ ಚಿತ್ರದ ಕುರಿತ ನಿರೀಕ್ಷೆ ಮತ್ತಷ್ಟು ಜಾಸ್ತಿಯಾಗಿತ್ತು. ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯ ದಿನಾಂಕ ಘೋಷಣೆಯಾಗಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ:

ನಟ ರಕ್ಷಿತ್​ ಶೆಟ್ಟಿ ಕಡೆಯಿಂದ ಮಹತ್ವದ ಘೋಷಣೆ; ಅಭಿಮಾನಿಗಳಿಗೆ ಇದು ಖುಷಿ ಸುದ್ದಿ

ರವಿ ಅಣ್ಣ: ಉತ್ತರ ಕನ್ನಡದ ಬಡ ಯುವಕನನ್ನು ಟ್ರೋಲ್​ ಮಾಡುವ ಮುನ್ನ ಕುಟುಂಬದ ಕಷ್ಟವನ್ನೊಮ್ಮೆ ನೋಡಿ

Madhagaja: ‘ಮದಗಜ’ ಚಿತ್ರದ ಹೊಸ ಹಾಡಿನಲ್ಲಿ ಮಿಂಚುತ್ತಿರುವ ಶ್ರೀ ಮುರಳಿ, ಆಶಿಕಾ ರಂಗನಾಥ್; ವಿಡಿಯೋ ನೋಡಿ

Published On - 1:05 pm, Thu, 7 October 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ