AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kotigobba 3 Trailer: ಆ್ಯಕ್ಷನ್​ ಮತ್ತು ಅದ್ದೂರಿತನ; ‘ಕೋಟಿಗೊಬ್ಬ 3’ ಟ್ರೇಲರ್​ನಲ್ಲಿ ಮಿಂಚಿದ ಸುದೀಪ್

Sandalwood Baadshah Kichcha Sudeepa: ಇಂದು (ಅಕ್ಟೋಬರ್​ 7) ಸಂಜೆ ಈ ಟ್ರೇಲರ್​ ರಿಲೀಸ್​ ಆಗಿದೆ. ಸಿನಿಮಾದ ಬಹುತೇಕ ಕಥೆ ವಿದೇಶದಲ್ಲಿ ನಡೆಯಲಿದೆ ಎನ್ನುವುದಕ್ಕೆ ಟ್ರೇಲರ್​ ಸಾಕ್ಷ್ಯ ನೀಡಿದೆ.

Kotigobba 3 Trailer: ಆ್ಯಕ್ಷನ್​ ಮತ್ತು ಅದ್ದೂರಿತನ; ‘ಕೋಟಿಗೊಬ್ಬ 3’ ಟ್ರೇಲರ್​ನಲ್ಲಿ ಮಿಂಚಿದ ಸುದೀಪ್
ಸುದೀಪ್​
TV9 Web
| Edited By: |

Updated on:Oct 08, 2021 | 9:40 AM

Share

ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಸಿನಿಮಾಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಈ ಸಿನಿಮಾ ಅಕ್ಟೋಬರ್​ 14ರಂದು ತೆರೆಗೆ ಬರುತ್ತಿದೆ. ಅದಕ್ಕೂ ಮೊದಲು ‘ಕೋಟಿಗೊಬ್ಬ 3’ ಚಿತ್ರದ ಟ್ರೇಲರ್​ ರಿಲೀಸ್​ ಆಗಿದೆ. ಟ್ರೇಲರ್​ನಲ್ಲಿ ಆ್ಯಕ್ಷನ್​, ಸ್ಟಂಟ್ಸ್​ ಹಾಗೂ ಅದ್ದೂರಿತನ ಹೈಲೈಟ್​ ಆಗಿದೆ.ಇಂದು (ಅಕ್ಟೋಬರ್​ 7) ಸಂಜೆ ಈ ಟ್ರೇಲರ್​ ರಿಲೀಸ್​ ಆಗಿದೆ. ಸಿನಿಮಾದ ಬಹುತೇಕ ಕಥೆ ವಿದೇಶದಲ್ಲಿ ನಡೆಯಲಿದೆ ಎನ್ನುವುದಕ್ಕೆ ಟ್ರೇಲರ್​ ಸಾಕ್ಷ್ಯ ನೀಡಿದೆ. ‘ಕೋಟಿಗೊಬ್ಬ 2’ ಸಿನಿಮಾದಲ್ಲಿ ಸುದೀಪ್​ ಎರಡು ಶೇಡ್​ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದು ಸಿನಿಮಾದ ಹೈಲೈಟ್​ ಕೂಡ ಆಗಿತ್ತು. ‘ಕೋಟಿಗೊಬ್ಬ 3’ ಸಿನಿಮಾದಲ್ಲೂ ಇದು ಮುಂದುವರಿದಿದೆ. ಇನ್ನು, ಚಿತ್ರದ ಟ್ರೇಲರ್​ನಲ್ಲಿ ಸಾಕಷ್ಟು ಆ್ಯಕ್ಷನ್​ ದೃಶ್ಯಗಳನ್ನು ತೋರಿಸಲಾಗಿದೆ.

‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಆಶಿಕಾ ರಂಗನಾಥ್​ ವಿಶೇಷ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ. ಅದರ ಒಂದು ತುಣುಕನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ಮಡೋನಾ ಸಬಾಸ್ಟಿಯನ್​ ಸಖತ್​ ಗ್ಲಾರಮ್​ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ, ಈ ಸಿನಿಮಾದ ಟ್ರೇಲರ್​ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ರಿಲೀಸ್​ ಆದ ಗಂಟೆ ಒಳಗೆ  ಟ್ರೇಲರ್​ ಲಕ್ಷ ವೀಕ್ಷಣೆ ಕಂಡಿದೆ.

‘ಕೋಟಿಗೊಬ್ಬ 3’ ರಿಲೀಸ್​ಗೂ ಮೊದಲೇ ಪೈರಸಿ ಕಾಪಿಯ ಸಂದೇಶವೊಂದು ಟೆಲಿಗ್ರಾಮ್​ನಲ್ಲಿ ಹರಿದಾಡುತ್ತಿದೆ. ‘ನೀವು ‘ಕೋಟಿಗೊಬ್ಬ 3’ ಸಿನಿಮಾ ಡೌನ್​ಲೋಡ್​ ಮಾಡಲು ನಮ್ಮ ಚಾನೆಲ್​ಗೆ ಜಾಯಿನ್​ ಆಗಿ’ ಎಂಬಿತ್ಯಾದಿ ಸಂದೇಶ ಹರಿದಾಡುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ‘ಕೋಟಿಗೊಬ್ಬ 3’ ನಿರ್ಮಾಪಕ ಸೂರಪ್ಪಬಾಬು ಅವರು ಸೈಬರ್​ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ, ಪೈರಸಿ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ.

ಶ್ರದ್ಧಾ ದಾಸ್​, ರವಿಶಂಕರ್​, ಅಭಿರಾಮಿ ಮುಂತಾದ ಕಲಾವಿದರು ‘ಕೋಟಿಗೊಬ್ಬ 3’ ಸಿನಿಮಾದಲ್ಲಿ ನಟಿಸಿದ್ದಾರೆ. ಶಿವಕಾರ್ತಿಕ್​ ಈ ಚಿತ್ರದ ನಿರ್ದೇಶಕರು.

ಇದನ್ನೂ ಓದಿ: ಸುದೀಪ್​ಗಾಗಿ ಸಿದ್ಧವಾಗ್ತಿದೆ 120 ಅಡಿ ಕಟೌಟ್​

ದುಬೈನಲ್ಲಿ ಕಿಚ್ಚ; ಬುರ್ಜ್​ ಖಲೀಫಾ ಫೋಟೋ ಹಾಕಿ ‘ವಿಕ್ರಾಂತ್​ ರೋಣ’ ಟೈಟಲ್​ ಲಾಂಚ್​ ನೆನಪಿಸಿಕೊಂಡ ಸುದೀಪ್​

Published On - 5:48 pm, Thu, 7 October 21

ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ