45 ಕೆಜಿ ತೂಕವಿದ್ದ 2ವರ್ಷದ ಬಾಲಕಿಗೆ ಶಸ್ತ್ರಚಿಕಿತ್ಸೆ; ಇನ್ನೊಂದು ವರ್ಷದಲ್ಲಿ ಸಹಜಸ್ಥಿತಿಗೆ ಮರಳುವ ಭರವಸೆ

ಮಗುವಿನಲ್ಲಿ ಬೇರೆ ಕೆಲವು ಅಸಹಜತೆಗಳೂ ಇದ್ದವು. ಅದನ್ನೆಲ್ಲವನ್ನೂ ಮೀರಿ ಸರ್ಜರಿ ಮಾಡಲಾಗಿದೆ. ಆದರೆ ಇಷ್ಟಕ್ಕೇ ಮುಗಿಯುವುದಿಲ್ಲ. ಬಾಲಕಿಗೆ ವಿಶೇಷವಾಗಿ, ಕಟ್ಟುನಿಟ್ಟಾಗಿ ಡಯಟ್​ ಮಾಡಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.

45 ಕೆಜಿ ತೂಕವಿದ್ದ 2ವರ್ಷದ ಬಾಲಕಿಗೆ ಶಸ್ತ್ರಚಿಕಿತ್ಸೆ; ಇನ್ನೊಂದು ವರ್ಷದಲ್ಲಿ ಸಹಜಸ್ಥಿತಿಗೆ ಮರಳುವ ಭರವಸೆ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Aug 03, 2021 | 6:25 PM

ದೆಹಲಿ: ಸುಮಾರು 45 ಕೆಜಿ ತೂಕವಿದ್ದ 2ವರ್ಷದ ಬಾಲಕಿಗೆ ದೆಹಲಿ (Delhi)ಯ ಆಸ್ಪತ್ರೆಯೊಂದರಲ್ಲಿ ಯಶಸ್ವಿಯಾಗಿ ಬ್ಯಾರಿಯಾಟ್ರಿಕ್​ ಸರ್ಜರಿ (Bariatric Surgery)  ಮಾಡಲಾಗಿದೆ. ಇದು ತೀರ ಅಸಹಜ ಪ್ರಕರಣವಾಗಿದೆ. ಬಾಲಕಿಗೆ ಅತಿಯಾಗಿ ತೂಕವಿದ್ದ ಕಾರಣ ವೀಲ್​ಚೇರ್​​ ಬಿಟ್ಟು ಕೆಳಗೆ ಇಳಿಯುತ್ತಿರಲಿಲ್ಲ. ಆಕೆಗೀಗ ಶಸ್ತ್ರಚಿಕಿತ್ಸೆ ಮಾಡಿ, ಹೊಟ್ಟೆಯ ಭಾಗವನ್ನು ತೆಗೆಯಲಾಗಿದೆ ಮತ್ತು ಕಳೆದ ಒಂದು ದಶಕದಲ್ಲಿ ಬ್ಯಾರಿಯಾಟ್ರಿಕ್​ ಸರ್ಜರಿಗೆ ಒಳಗಾದ ದೇಶದ ಅತ್ಯಂತ ಕಿರಿಯ ರೋಗಿಯಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಅಂದಹಾಗೆ ಈ ಸರ್ಜರಿ ಮಾಡಿದ್ದು, ದೆಹಲಿಯ ಮ್ಯಾಕ್ಸ್ ಸೂಪರ್​ಸ್ಪೆಶಾಲಿಟಿ ಆಸ್ಪತ್ರೆ.

ತೂಕ ಇಳಿಸಲು ಈ ಬ್ಯಾರಿಯಾಟ್ರಿಕ್​ ಸರ್ಜರಿ ಮಾಡಲಾಗುತ್ತದೆ. ಆದರೆ ಈ ಶಸ್ತ್ರಚಿಕಿತ್ಸೆ ಮಕ್ಕಳಲ್ಲಿ ತೀರ ಕಡಿಮೆ. ಈ ಸರ್ಜರಿ ಮೂಲಕ ಹಸಿವು ಕಡಿಮೆ ಆಗುವಂತೆ ಮಾಡಲಾಗುತ್ತದೆ. ಇದರಿಂದ ತೂಕ ನಷ್ಟ ಆಗುವ ಜತೆ ಆರೋಗ್ಯದಲ್ಲೂ ಸುಧಾರಣೆಯಾಗುತ್ತದೆ. ಸರ್ಜರಿಯ ಮೂಲಕ ಮಾಡುವ ಬದಲಾವಣೆಗಳಿಂದ ಆಹಾರ ತೆಗೆದುಕೊಳ್ಳುವ ಪ್ರಮಾಣವೂ ಕಡಿಮೆ ಆಗುತ್ತದೆ.

ಬಾಲಕಿ ಹುಟ್ಟುವಾಗ ತೀರ ಸಾಮಾನ್ಯವಾದ ತೂಕ ಹೊಂದಿದ್ದಳು. ಅಂದರೆ ಜನಿಸುವಾಗ 2.5 ಕೆಜಿ ತೂಕವಿದ್ದಳು. ಆದರೆ ಕೆಲವೇ ದಿನಗಳಲ್ಲಿ ವಿಪರೀತ ಎನ್ನುವಷ್ಟು ತೂಕ ಜಾಸ್ತಿಯಾಯಿತು. ಆರು ತಿಂಗಳ ಹೊತ್ತಿಗೆ 14 ಕೆಜಿಯಾಗಿದ್ದಳು. ಬರುಬರುತ್ತ ತೂಕ ಅದೆಷ್ಟು ಜಾಸ್ತಿಯಾಯಿತೆಂದರೆ 2 ವರ್ಷ ತುಂಬುವ ಹೊತ್ತಿಗೆ 45 ಕೆಜಿ ಆಗಿದ್ದಳು. ಆದರೆ ಆಕೆಯ ಸಹೋದರನಿಗೆ 8ವರ್ಷ. ಆತ ತನ್ನ ವಯಸ್ಸಿಗೆ ತಕ್ಕಂತೆ ಬೆಳೆಯುತ್ತಿದ್ದೇನೆ. ತೂಕವೂ ಸಹಜವಾಗಿದೆ ಎಂದು ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಮನ್​ಪ್ರೀತ್​ ಸೇಥಿ ಹೇಳಿದ್ದಾರೆ.

ಮಗುವಿನಲ್ಲಿ ಬೇರೆ ಕೆಲವು ಅಸಹಜತೆಗಳೂ ಇದ್ದವು. ಅದನ್ನೆಲ್ಲವನ್ನೂ ಮೀರಿ ಸರ್ಜರಿ ಮಾಡಲಾಗಿದೆ. ಆದರೆ ಇಷ್ಟಕ್ಕೇ ಮುಗಿಯುವುದಿಲ್ಲ. ಬಾಲಕಿಗೆ ವಿಶೇಷವಾಗಿ, ಕಟ್ಟುನಿಟ್ಟಾಗಿ ಡಯಟ್​ ಮಾಡಿಸಬೇಕು. ಅವಳಿಗೆ ನೀಡಲಾಗುವ ಪೋಷಕಾಂಶಗಳ ಅಳತೆಯ ಬಗ್ಗೆ ನಿಗಾ ಇರಬೇಕು. ಮುಂದಿನ ವರ್ಷದ ಹೊತ್ತಿಗೆ ಅವಳ ತೂಕ ಕಡಿಮೆಯಾಗುತ್ತದೆ ಮತ್ತು ಅಲ್ಲಿಂದ ಸಹಜವಾಗಿ ಬೆಳೆಯುತ್ತಾಳೆಂದು ನಿರೀಕ್ಷೆ ಇದೆ. ಆದರೆ ವೈದ್ಯಕೀಯ ತಂಡ ಅವಳ ಆರೋಗ್ಯದ ಬಗ್ಗೆ ಗಮನ ಇಟ್ಟೇ ಇಡುತ್ತದೆ. ಕಾಲಕಾಲಕ್ಕೆ ತಪಾಸಣೆ ಆಗಬೇಕಾಗುತ್ತದೆ. ದೇಹದಲ್ಲಿ ಶಕ್ತಿಯೂ ಬರಬೇಕಿದೆ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ತೀರ್ಥಹಳ್ಳಿ-ಮಂಗಳೂರು-ಚಿತ್ರದುರ್ಗ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ರ ಬಳಿ ಕುಸಿತ

Published On - 6:24 pm, Tue, 3 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ