ಮುಂಬೈ ಜುಲೈ 17: ಆಧಾರ್ ಕಾರ್ಡ್ (Aadhaar Card) ಪ್ರತಿಯೊಬ್ಬ ಭಾರತೀಯನ ಗುರುತಿನ ಪ್ರಮುಖ ದಾಖಲೆ. ಅದೇ ವೇಳ ಮುಂಬೈ ವಿಮಾನ ನಿಲ್ದಾಣದ ಹೊರಗೆ ಬೀದಿ ನಾಯಿಗಳ (Stray Dogs) ಗುಂಪಿಗೆ ಕೂಡಾ ಗುರುತಿಗಾಗಿ ಆಧಾರ್ ಕಾರ್ಡ್ ಬ್ಯಾಡ್ಜ್ ನೀಡಲಾಗಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ನಗರದ ವಿಮಾನ ನಿಲ್ದಾಣದ ಹೊರಗೆ 20 ಬೀದಿನಾಯಿಗಳಿಗೆ ಶನಿವಾರ QR ಕೋಡ್‌ಗಳೊಂದಿಗೆ ಇರುವ ಗುರುತಿನ ಕಾರ್ಡ್‌ಗಳನ್ನು ಕುತ್ತಿಗೆ ಸುತ್ತ ಕಟ್ಟಲಾಗಿದೆ. ಈ ‘ಆಧಾರ್’ ಕಾರ್ಡ್‌ಗಳು ಕ್ಯೂಆರ್ ಕೋಡ್ ಅನ್ನು ಹೊಂದಿದ್ದು ಅದರಲ್ಲಿ ನಾಯಿ ಬಗ್ಗೆ ಎಲ್ಲ ಮಾಹಿತಿ ಇರುತ್ತದೆ. ಈ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ನಾಯಿಯ ಹೆಸರು, ವ್ಯಾಕ್ಸಿನೇಷನ್‌ನ ವಿವರಗಳೊಂದಿಗೆ ಫೀಡರ್‌ನ ಸಂಪರ್ಕ ಮತ್ತು ನಾಯಿ ಕಳೆದು ಹೋದರೆ ಅಥವಾ ಸ್ಥಳಾಂತರಿಸಲ್ಪಟ್ಟರೆ, ಗರ್ಭಧಾರಣೆ ನಿಲ್ಲಿಸಿದ್ದರೆ ಈ ಎಲ್ಲ ಮಾಹಿತಿ ಸಿಗುತ್ತದೆ.
ಆರಂಭಿಕ ಯೋಜನೆಯಾಗಿ ವಿಮಾನ ನಿಲ್ದಾಣದ ಹೊರಗೆ ನಾಯಿಗಳಿಗೆ QR ಕೋಡ್ ಟ್ಯಾಗಿಂಗ್ ಮಾಡಲಾಗಿದೆ. ಇದನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬಹುದು ಎಂಬುದನ್ನು ನಾವು ನೋಡುತ್ತೇವೆ ಎಂದು ಬಿಎಂಸಿಯ ಪಶುವೈದ್ಯಕೀಯ ಆರೋಗ್ಯ ಸೇವೆಗಳ ಮುಖ್ಯಸ್ಥ ಡಾ.ಕಲೀಂ ಪಠಾಣ್ ಹೇಳಿದ್ದಾರೆ.
20 ಬೀದಿ ನಾಯಿಗಳನ್ನು ಟ್ಯಾಗ್ ಮಾಡಿದ ಸಾಮಾನ್ಯ ಫೀಡರ್‌ಗಳ ತಂಡವು ಗುರುತಿನ ಚೀಟಿಗಳನ್ನು ಒದಗಿಸಿದೆ. ಈ ಸಾಧನವನ್ನು ಸಿಯಾನ್‌ನ ಎಂಜಿನಿಯರ್ ಅಕ್ಷಯ್ ರಿಡ್ಲಾನ್ ಅವರು ‘ pawfriend. in’ ಎಂಬ ಉಪಕ್ರಮದ ಮೂಲಕ ವಿನ್ಯಾಸಗೊಳಿಸಿದ್ದಾರೆ.
“ಒಂದು ಸಾಕುಪ್ರಾಣಿ ಕಳೆದುಹೋದರೆ ಅಥವಾ ಅದನ್ನು ಸ್ಥಳಾಂತರಿಸಿದರೆ, QR ಕೋಡ್ ಟ್ಯಾಗ್ ಅದನ್ನು ಕುಟುಂಬದೊಂದಿಗೆ ಮತ್ತೆ ಸೇರಿಸಲು ಸಹಾಯ ಮಾಡುತ್ತದೆ. ಇದು ನಗರದಲ್ಲಿ ಬೀದಿಯಲ್ಲಿ ಅಲೆಯುವ ಪ್ರಾಣಿಗಳ ಕೇಂದ್ರೀಕೃತ ಡೇಟಾಬೇಸ್ ಅನ್ನು ನಿರ್ವಹಿಸಲು BMC ಗೆ ಸಹಾಯ ಮಾಡುತ್ತದೆ ಎಂದು ರಿಡ್ಲಾನ್ ಹೇಳಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಬಿಎಂಸಿ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ರ ಹೊರಗೆ ನಾಯಿಗಳಿಗೆ ಲಸಿಕೆ ಹಾಕಿತು.
ಇದನ್ನೂ ಓದಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ 2,381 ಕೋಟಿ ಮೌಲ್ಯದ 1.44 ಲಕ್ಷ ಕೆಜಿ ಡ್ರಗ್ಸ್ ನಾಶ
ವಿಮಾನ ನಿಲ್ದಾಣದ ಹೊರಗಿನ ನಾಯಿಗಳು ಸೇರಿದಂತೆ ಪ್ರತಿದಿನ ಸುಮಾರು 300 ಬೀದಿ ನಾಯಿಗಳಿಗೆ ಆಹಾರ ನೀಡುವ ಫೀಡರ್‌ಗಳಲ್ಲಿ ಒಬ್ಬರಾದ ಸೋನಿಯಾ ಶೆಲಾರ್, ಬಿಎಂಸಿಯ ಪಶುವೈದ್ಯರು ಲಸಿಕೆಯನ್ನು ನೀಡಿದಾಗ ನಾಯಿಗಳನ್ನು ಹತ್ತಿರಕ್ಕೆ ತರಲು ಸಹಾಯ ಮಾಡಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:00 pm, Mon, 17 July 23