ಶ್ವಾನಗಳಿಗೆ ಆಧಾರ್ ಕಾರ್ಡ್; ಕ್ಯೂಆರ್ ಕೋಡ್ ಕಾಲರ್ ರಚಿಸಿದ ಮುಂಬೈ ಮೂಲದ ಇಂಜಿನಿಯರ್
24 ವರ್ಷ ವಯಸ್ಸಿನ ಇಂಜಿನಿಯರ್ ತನ್ನ ಪ್ರೀತಿಯ ಶ್ವಾನ ಕಳೆದುಕೊಂಡ ನಂತರ, ಈ ಸಮಸ್ಯೆಗೆ ಕ್ಯೂಆರ್ ಕೋಡ್ ಕಾಲರ್ ಕಂಡುಹಿಡಿದಿದ್ದಾರೆ.
ಅತ್ಯಂತ ಪ್ರೀತಿ, ನಂಬಿಕೆಯುಳ್ಳ ಸಾಕು ಪ್ರಾಣಿಯೆಂದರೆ ಅದು ಶ್ವಾನ. ಅಂತಹ ಮುಗ್ಧ ಮನಸ್ಸುಗಳ ಸುರಕ್ಷತೆಗಾಗಿ ಮುಂಬೈ ಮೂಲದ ಅಕ್ಷಯ್ ರಿಡ್ಲಾನ್(24) ಇಂಜಿನಿಯರ್ ಒಬ್ಬರು ಕ್ಯೂಆರ್ ಕೋಡ್ ಕಾಲರ್ ತಯಾರಿಸಿದ್ದಾರೆ. ಇದು ಶ್ವಾನಗಳಿಗೆ ಆಧಾರ್ ಕಾರ್ಡ್ನಂತಿದ್ದು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಶ್ವಾನದ ಕುರಿತಾ ಎಲ್ಲಾ ಮಾಹಿತಿಗಳು ದೊರೆಯುತ್ತವೆ. ಇದರ ಬೆಲೆ ಕೇವಲ 100 ರೂ. ಶ್ವಾನಗಳಿಗೆ ಕ್ಯೂಆರ್ ಕೋಡ್ ಮಾಡಿಸುವ ಉಪಾಯ ಹೊಳೆಯಲು ಕಾರಣವೇನು ಎಂಬುದಕ್ಕೆ ಅಕ್ಷಯ್ ರಿಡ್ಲಾನ್ ತಮ್ಮ ಅನುಭವನ್ನು ಹಂಚಿಕೊಂಡಿದ್ದು, ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಕೆಲವು ತಿಂಗಳ ಹಿಂದೆ ಕಾಣೆಯಾಗಿದ್ದ ನನ್ನ ಪ್ರೀತಿಯ ಕಾಳು ಎಂಬ ಹೆಸರಿನ ಶ್ವಾನ ಇದಕ್ಕೆ ಮೂಲ ಸ್ಪೂರ್ತಿ ಎಂದು ಹೇಳಿದ್ದಾರೆ. ಹೌದು ಮನೆಯ ಮದುವೆ ಸಮಾರಂಭದ ಸಮಯದಲ್ಲಿ ಪಟಾಕಿಯ ಸದ್ದಿಗೆ ಓಡಿ ಹೋಗಿದ್ದ ಕಾಳು ಮತ್ತೆ ಸಿಗಲೇ ಇಲ್ಲ. ನಾನು ಅವನನ್ನು ಹುಡುಕಲು ಪ್ರಯತ್ನಿಸಿದೆ ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ಸಮುದಾಯಗಳನ್ನು ತಲುಪಿದೆ ಆದರೆ ಎಲ್ಲವೂ ವ್ಯರ್ಥವಾಯಿತು. ಕಾಳು ಮತ್ತೆ ಸಿಗಲಿಲ್ಲ ಎಂದು ಶ್ವಾನ ಪ್ರೇಮಿ ಹೇಳಿದ್ದಾರೆ.
ಇದನ್ನೂ ಓದಿ: ಕ್ಯಾನ್ಸರ್ ಗೆದ್ದು ಬಂದ ಪೊಲೀಸ್ ಇಲಾಖೆಯ ಶ್ವಾನ ಸಿಮ್ಮಿ
ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ನಾಯಿಗಳಿಗೆ ಆಧಾರ್ ಕಾರ್ಡ್ ರಚಿಸುವ ಪ್ರಯತ್ನ ಇದಾಗಿದ್ದು, ಈ QR ಕೋಡ್ ಶ್ವಾನದ ಹೆಸರು, ವೈದ್ಯಕೀಯ ದಾಖಲೆ ಮತ್ತು ಇತಿಹಾಸ ಸೇರಿದಂತೆ ಮಾಹಿತಿಯನ್ನು ಒಳಗೊಂಡಿರುತ್ತದೆ ಮತ್ತು ಪ್ರಾಣಿಗಳ ಪಾಲಕರ ಸಂಪರ್ಕ ವಿವರಗಳನ್ನು ಸಹ ಒದಗಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:23 am, Sat, 8 July 23