World Chocolate Day 2023: ಚಾಕೊಲೇಟ್ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ಆಚರಣೆಯ ಹಿಂದಿನ ಮಹತ್ವ, ಇತಿಹಾಸ ಏನು?

ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರರವೆಗೂ ಎಲ್ಲರೂ ಚಾಕೊಲೇಟ್​​ನ್ನು ಇಷ್ಟಪಟ್ಟು ತಿನ್ನುತ್ತಾರೆ. ಎಲ್ಲರ ನೆಚ್ಚಿನ ಈ ಚಾಕೊಲೇಟ್​​ನ ವಿಕಾಸದ ನೆನಪಿಗಾಗಿ ಪ್ರತಿ ವರ್ಷ ಜುಲೈ 7 ರಂದು ವಿಶ್ವ ಚಾಕೊಲೇಟ್ ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆಯ ಇತಿಹಾಸ ಮತ್ತು ಮಹತ್ವದ ಕುರಿತ ಮಾಹಿತಿ ಇಲ್ಲಿದೆ.

World Chocolate Day 2023: ಚಾಕೊಲೇಟ್ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ಆಚರಣೆಯ ಹಿಂದಿನ ಮಹತ್ವ, ಇತಿಹಾಸ ಏನು?
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 07, 2023 | 3:28 PM

ಚಾಕೋಲೇಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಚಿಕ್ಕ ಮಕ್ಕಳಿಂದ ಹಿಡಿದು ಇಳಿ ವಯಸ್ಸಿನವರವರೆಗೂ ಎಲ್ಲರೂ ಚಾಕೋಲೇಟ್ ನ್ನು ಇಷ್ಟಪಟ್ಟು ತಿನ್ನುತ್ತಾರೆ. ಅವುಗಳು ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲದೆ, ನಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇಂತಹ ಸಿಹಿಯಾದ ಮತ್ತು ಆರೋಗ್ಯಕರವಾದ ಚಾಕೊಲೇಟ್​​​ನ ದಿನವನ್ನು ಪ್ರತಿವರ್ಷ ಜುಲೈ 7ರಂದು ಪ್ರಪಂಚದಾದ್ಯಂತ ಚಾಕೊಲೇಟ್ ಪ್ರೇಮಿಗಳು ಆಚರಿಸುತ್ತಾರೆ. ಚಾಕೊಲೇಟ್ ದಿನವನ್ನು ಏಕೆ ಆಚರಿಸಲಾಗುತ್ತದೆ, ಅದರ ಇತಿಹಾಸ ಮತ್ತು ಮಹತ್ವ ಏನೆಂಬುದನ್ನು ಚಾಕೊಲೇಟ್ ದಿನದ ಈ ಸುದಿನದಂದು ತಿಳಿಯೋಣ.

ವಿಶ್ವ ಚಾಕೊಲೇಟ್ ದಿನವನ್ನು ಏಕೆ ಆಚರಿಸಲಾಗುತ್ತದೆ ?

ವಿಶ್ವ ಚಾಕೊಲೇಟ್ ದಿನವನ್ನು ಪ್ರತಿವರ್ಷ ಜುಲೈ 7 ರಂದು ಆಚರಿಸಲಾಗುತ್ತದೆ. 1550ರಲ್ಲಿ ಈ ದಿನದಂದು ಚಾಕೊಲೇಟ್ ಮೊದಲ ಬಾರಿಗೆ ಯುರೋಪಿಗೆ ಪರಿಚಯವಾಯಿತು. ಈ ದಿನದ ನೆನಪಿಗಾಗಿ 2009ರಿಂದ ವಿಶ್ವ ಚಾಕೊಲೇಟ್ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ವಿಶ್ವ ಚಾಕೊಲೇಟ್ ದಿನದ ಇತಿಹಾಸ:

2009 ರಲ್ಲಿ ಸ್ಥಾಪಿತವಾದ ವಿಶ್ವ ಚಾಕೊಲೇಟ್ ದಿನವು 1550 ರಲ್ಲಿ ಯುರೋಪಿಗೆ ಚಾಕೊಲೇಟ್ ಪರಿಚಯವಾದ ದಿನವನ್ನು ನೆನಪಿಸುತ್ತದೆ. ಈ ಚಾಕೊಲೇಟ್​​ನ ಇತಿಹಾಸವು ಪ್ರಾಚೀನ ಮಧ್ಯ ಅಮೇರಿಕಾ ಪ್ರಾಚೀನ ಓಲ್ಮೆಕ್ಸ್ ನಾಗರಿಕತೆಗೂ ಹಿಂದಿನದು. ಅವರು ಅಂದಿನಿಂದಲೂ ಚಾಕೊಲೇಟ್ ತಯಾರಿಕೆಗೆ ಬೇಕಾದ ಕೋಕೋ ಬೆಳೆಯನ್ನು ಬೆಳೆಯುತ್ತಿದ್ದರು. 155ಕ್ಕಿಂತ ಮೊದಲು ಮೆಕ್ಸಿಕೊದಂತಹ ದಕ್ಷಿಣ ಮತ್ತು ಮಧ್ಯ ಅಮೇರಿಕದಾದ್ಯಂತ ನಿರ್ದಿಷ್ಟ ಪ್ರದೇಶಗಳಲ್ಲಿ ಚಾಕೊಲೇಟ್ ಪ್ರಾಥಮಿಕವಾಗಿ ಲಭ್ಯವಿತ್ತು. ವಿದೇಶಿ ಸಂಶೋಧಕರು ಈ ವಿಶೇಷ ಸಿಹಿ ಸತ್ಕಾರವನ್ನು ಯುರೋಪ್ ಖಂಡಕ್ಕೆ ತರಲು ಬಯಸಿದ್ದರು. 1550 ರ ಜುಲೈ 7 ರಂದು ಸಂಶೋಧಕರು ಯುರೋಪ್ ಗೆ ಚಾಕೊಲೇಟ್ ನ್ನು ಪರಿಚಯಿಸಿದರು. ನಂತರ ಇದು ವಿಶ್ವದಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿತು. ಅಂದಿನಿಂದಿ ಇಂದಿನವರೆಗೆ ಚಾಕೊಲೇಟ್ ನಲ್ಲಿ ಅನೇಕ ಆವಿಷ್ಕಾರಗಳಾಗಿವೆ. ಇಂದು ತರಹೇವಾರಿ ಚಾಕೊಲೇಟ್ ಗಳು ಮಾರುಕಟ್ಟೆಗಳಲ್ಲಿ ಲಭ್ಯವಿದೆ.

ವಿಶ್ವ ಚಾಕೊಲೇಟ್ ದಿನದ ಮಹತ್ವ:

ವಿಶ್ವ ಚಾಕೊಲೇಟ್ ದಿನವು ಪ್ರಪಂಚದ ಅತ್ಯಂತ ಪ್ರೀತಿಯ ಸತ್ಕಾರದ ಜಾಗತಿಕ ಆಚರಣೆಯಾಗಿ ಮಹತ್ವವನ್ನು ಪಡೆದಿದೆ. ಇದು ಚಾಕೊಲೇಟ್ ನ ರುಚಿಕರವಾದ ಆನಂದದಲ್ಲಿ ಪಾಲ್ಗೊಳ್ಳಲು ಮತ್ತು ಚಾಕೊಲೇಟ್ ತಯಾರಿಕೆಯ ದಿನವನ್ನು ಶ್ಲಾಘಿಸಲು ಮೀಸಲಾದ ದಿನವಾಗಿದೆ. ಇದರ ಸಿಹಿಯಾದ ರುಚಿಯನ್ನು ಮೀರಿ, ಚಾಕೊಲೇಟ್ ಸಾಂಸ್ಕೃತಿಕ, ಸಾಮಾಜಿಕ ಮತ್ತು ಭಾವನಾತ್ಮಕ ಮಹತ್ವವನ್ನು ಹೊಂದಿದೆ. ಸಾಂತ್ವನ ಮತ್ತು ಸಂಭ್ರಮವನ್ನು ಉಂಟುಮಾಡುವ ಶಕ್ತಿ ಇದಕ್ಕಿದೆ. ವಿಶ್ವ ಚಾಕೊಲೇಟ್ ದಿನವು ಚಾಕೊಲೇಟ್ ಗೆ ಸಂಬಂಧಿಸಿದ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: Chocolate Day 2023: 7 ವಿಧದ ಚಾಕೊಲೇಟ್​​ಗಳು ಇಲ್ಲಿವೆ

ಹೆಚ್ಚು ಚಾಕೋಲೇಟ್ ತಿನ್ನುವ ದೇಶ?

ವರ್ಲ್ಡ್ ಪಾಪ್ಯುಲೇಷನ್ ರಿವ್ಯೂ ವರದಿಯ ಪ್ರಕಾರ, ಸ್ವಿಟ್ಜರ್ಲೆಂಡ್​​ನ ಜನರು ವಿಶ್ವದಲ್ಲೇ ಹೆಚ್ಚು ಚಾಕೋಲೇಟ್ ತಿನ್ನುತ್ತಾರೆ. ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಒಂದು ವರ್ಷದಲ್ಲಿ ಸುಮಾರು 8.8 ಕೆಜಿ ಚಾಕೊಲೇಟ್ ತಿನ್ನುತ್ತಾನೆ. ಅಲ್ಲದೆ ಇಲ್ಲಿನ ಟೊಬ್ಲರ್ನೊ ವಿಶ್ವದ ಅತ್ಯುತ್ತಮ ಚಾಕೋಲೇಟ್ ಕಂಪನಿಗಳಲ್ಲಿ ಒಂದಾಗಿದೆ.

ಚಾಕೊಲೇಟ್​​ನ ಪ್ರಯೋಜನಗಳು:

ಚಾಕೊಲೇಟ್ ತಿನ್ನಲು ರುಚಿಕರವಾದುದು ಮಾತ್ರವಲ್ಲದೆ, ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಕೂಡಾ ಹೊಂದಿದೆ. ಅದರಲ್ಲೂ ವಿಶೇಷವಾಗಿ ಡಾರ್ಕ್ ಚಾಕೊಲೇಟ್. ಚಾಕೊಲೇಟ್ ಗಳು ಉತ್ಕರ್ಷಣ ನಿರೋಧಕಗಳ ಪ್ರಬಲ ಮೂಲವಾಗಿದೆ, ರಕ್ತದ ಹರಿವನ್ನು ಸುಧಾರಿಸುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಚಾಕೊಲೇಟ್ ಸಿರೊಟೋನಿನ್ ಮತ್ತು ಡೋಪಮೈನ್ ಹಾರ್ಮೊನುಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಒತ್ತಡ ಮತ್ತು ಖಿನ್ನತೆಯನ್ನು ಹೋಗಲಾಡಿಸುತ್ತದೆ. ಡಾರ್ಕ್ ಚಾಕೊಲೇಟ್ ನ್ನು ಪ್ರತಿದಿನ ಸೇವಿಸಿದರೆ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ಸಾಕಷ್ಟು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಜೀವನ ಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ