76ನೇ ಸ್ವಾತಂತ್ರ್ಯ ದಿನಾಚರಣೆಯನ್ನು (Independence Day) ಆಚರಿಸಲು ರಾಷ್ಟ್ರ ರಾಜಧಾನಿ ಸಜ್ಜಾಗಿದೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು (Union Home Ministry) ಸ್ವಾತಂತ್ರ್ಯ ದಿನಾಚರಣೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 2023ರ ಆಗಸ್ಟ್ 15ರಂದು ನವದೆಹಲಿಯ ಕೆಂಪುಕೋಟೆ (Red Fort) ಮೇಲೆ ಪ್ರಧಾನಿ ನರೇಂದ್ರ (Narendra Modi) ಮೋದಿಯವರು ತ್ರಿವರ್ಣ ಧ್ವಜವನ್ನು ಹಾರಿಸಲಿದ್ದಾರೆ. ಈ ಸ್ವಾತಂತ್ರ್ಯ ದಿನಾಚರಣೆಯ ಪರೇಡ್ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ವೀಕ್ಷಿಸಲು ದೇಶಾದ್ಯಂತ 1800 ಜನರಿಗೆ ವಿಶೇಷವಾಗಿ ಆಹ್ವಾನಿಸಲಾಗಿದೆ.
ಶಿಕ್ಷಕರು, ಮೀನುಗಾರರು, ಕುಶಲಕರ್ಮಿಗಳು ಮತ್ತು ವಿವಿಧ ಕಾರ್ಯಕ್ರಮಗಳ ಫಲಾನುಭವಿಗಳನ್ನು ಒಳಗೊಂಡಂತೆ ಕರ್ನಾಟಕದಿಂದ ಆಯ್ಕೆಯಾದ ಒಟ್ಟು 31 ವ್ಯಕ್ತಿಗಳು ನವದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ವೀಕ್ಷಿಸಲಿದ್ದಾರೆ.
ಪಿಎಂ-ಕಿಸಾನ್ ಯೋಜನೆಯ ದಾದಿಯರು, ರೈತರು ಮತ್ತು ಫಲಾನುಭವಿಗಳನ್ನು ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಲು ದೇಶಾದ್ಯಂತ ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರವು ‘ವೈಬ್ರೆಂಟ್ ವಿಲೇಜ್’ಗಳ ಸರಪಂಚ್‌ರು, ರೈತರು, ಮೀನುಗಾರರು, ಶಿಕ್ಷಕರು, ದಾದಿಯರು, ಸೆಂಟ್ರಲ್ ವಿಸ್ಟಾ ಯೋಜನೆಯ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರು ಮತ್ತು ಖಾದಿ ವಲಯದ ಕಾರ್ಮಿಕರನ್ನು ಈ ಭವ್ಯ ಸಮಾರಂಭಕ್ಕೆ ಆಹ್ವಾನಿಸಿದೆ.
ಈ ಸ್ವಾತಂತ್ರ್ಯ ದಿನಾಚರಣೆಯಲ್ಲಿ “ಬಾರ್ಡರ್ ರೋಡ್ಸ್ ಆರ್ಗನೈಸೇಶನ್” ಕಾರ್ಯಕರ್ತರು, ಹಾಗೆಯೇ ಅಮೃತ್ ಸರೋವರ” ಯೋಜನೆಗಳು ಮತ್ತು “ಹರ್ ಘರ್ ಜಲ” ಯೋಜನೆ ಯೋಜನೆಗಳಿಗೆ ಕೊಡುಗೆ ನೀಡಿದವರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: Independence Day 2023: ಈ ಬಾರಿಯ ಸ್ವಾಂತಂತ್ರ್ಯ ದಿನಾಚರಣೆಯ ಥೀಮ್ ಏನು, ವಿಶಿಷ್ಟವಾಗಿ ಆಚರಿಸುವುದು ಹೇಗೆ ? ಇಲ್ಲಿದೆ ಐಡಿಯಾ
ಈ ಸ್ವಾತಂತ್ರ್ಯ ದಿನಾಚರಣೆಯು ‘ಮೇರಿ ಮಾಠಿ ಮೇರಾ ದೇಶ್’ ಅಭಿಯಾನದ ಮೂಲಕ ದೇಶದ ಹುತಾತ್ಮರಿಗೆ ಗೌರವ ಸಲ್ಲಿಸಲಾಗುತ್ತದೆ. ಈ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿಯವರು ಜುಲೈ 30 ರಂದು ತಮ್ಮ 103 ನೇ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಘೋಷಿಸಿದರು. ಅಭಿಯಾನವನ್ನು ಆಗಸ್ಟ್ 9 ರಿಂದ ಆಗಸ್ಟ್ 15 ರವರೆಗೆ ಆಚರಿಸಲಾಗುತ್ತದೆ. ಮೇರಿ ಮಾಠಿ ಮೇರಾ ದೇಶ್ ಅಭಿಯಾನದ ಮೂಲಕ ಭಾರತದ ಶೌರ್ಯವನ್ನು ನೆನೆಯುವುದಾಗಿದೆ. ಇದು ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವ ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಭಾಗವಾಗಿದೆ.
‘ಅಮೃತ್ ಕಲಶ ಯಾತ್ರೆ’ ಅಭಿಯಾನದ ಮೂಲಕ ದೇಶದ ವಿವಿಧ ಭಾಗಗಳಿಂದ ಗಿಡ, ಮಣ್ಣನ್ನು ತರಲಾಗುವುದು. ಈ ಮಣ್ಣನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ‘ಅಮೃತ ವಾಟಿಕಾ’ ನಿರ್ಮಿಸಲು ಬಳಸಲಾಗುವುದು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:37 am, Sun, 13 August 23