ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ಡಿಪಿ ಬದಲಿಸಿದ ಪ್ರಧಾನಿ ಮೋದಿ
ಸ್ವಾತಂತ್ರ್ಯ ದಿನದಂದು ಸಾಮಾಜಿಕ ಜಾಲತಾಣಗಳಲ್ಲಿ ಡಿಪಿ ಬದಲಿಸಿ ತ್ರಿವರ್ಣ ಧ್ವಜ ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಭಾನುವಾರ (ಆಗಸ್ಟ್ 13) ಟ್ವೀಟ್ ಮಾಡಿದ್ದಾರೆ ಮತ್ತು ದೇಶದೊಂದಿಗಿನ ತಮ್ಮ ಸಂಬಂಧವನ್ನು ಗಾಢವಾಗಿಸಲು ಸಹಕರಿಸುವ ಮೂಲಕ ಜನರು ಈ ಕ್ರಮವನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡರು.
ಸ್ವಾತಂತ್ರ್ಯ ದಿನದಂದು ಸಾಮಾಜಿಕ ಜಾಲತಾಣಗಳಲ್ಲಿ ಡಿಪಿ ಬದಲಿಸಿ ತ್ರಿವರ್ಣ ಧ್ವಜ ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ(Narendra Modi) ಮನವಿ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಭಾನುವಾರ (ಆಗಸ್ಟ್ 13) ಟ್ವೀಟ್ ಮಾಡಿದ್ದಾರೆ ಮತ್ತು ದೇಶದೊಂದಿಗಿನ ತಮ್ಮ ಸಂಬಂಧವನ್ನು ಗಾಢವಾಗಿಸಲು ಸಹಕರಿಸುವ ಮೂಲಕ ಜನರು ಈ ಕ್ರಮ ತೆಗೆದುಕೊಳ್ಳುವಂತೆ ಕೇಳಿಕೊಂಡರು.
ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಹ್ಯಾಂಡಲ್‌ನ ಪೋಸ್ಟ್‌ನಲ್ಲಿ ಅವರು, ಹರ್ ಘರ್ ತಿರಂಗಾ ಚಳವಳಿಯ ಉತ್ಸಾಹದಲ್ಲಿ, ನಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಡಿಪಿಯನ್ನು ಬದಲಾಯಿಸೋಣ ಮತ್ತು ದೇಶದೊಂದಿಗೆ ನಮ್ಮ ಸಂಬಂಧವನ್ನು ಬಲಪಡಿಸಲು ಮತ್ತು ಗಾಢವಾಗಿಸಲು ಕೊಡುಗೆ ನೀಡೋಣ ಎಂದಿದ್ದಾರೆ.
ಸ್ವಾತಂತ್ರ್ಯ ದಿನಕ್ಕೂ ಮೊದಲೇ ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಾದ ಫೇಸ್‌ಬುಕ್ ಮತ್ತು ಟ್ವಿಟರ್‌ನ ಡಿಪಿಯನ್ನು ಬದಲಾಯಿಸಿದ್ದಾರೆ ಮತ್ತು ಈಗ ಅವರ ಡಿಪಿಯಲ್ಲಿ ತ್ರಿವರ್ಣ ಧ್ವಜದ ಫೋಟೋ ಇದೆ. ಈ ಬಾರಿಯ ಸ್ವಾತಂತ್ರ್ಯ ದಿನದಂದು 1700 ವಿಶೇಷ ಅತಿಥಿಗಳು ಕೆಂಪುಕೋಟೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಾಮಾಜಿಕ ಮಾಧ್ಯಮಗಳ ಡಿಪಿ ಬದಲಾಯಿಸುವಂತೆ ಪ್ರಧಾನಿ ಮೋದಿ ಟ್ವೀಟ್
In the spirit of the #HarGharTiranga movement, let us change the DP of our social media accounts and extend support to this unique effort which will deepen the bond between our beloved country and us.
— Narendra Modi (@narendramodi) August 13, 2023
ಪ್ರಧಾನಿ ಮೋದಿಯವರ ಭಾಷಣವನ್ನು ಕೇಳಲು ಆಹ್ವಾನಿಸಲಾದ 1,700 ವಿಶೇಷ ಅತಿಥಿಗಳಲ್ಲಿ ಜಲ ಜೀವನ್ ಮಿಷನ್, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಅಮೃತ್ ಸರೋವರ ಯೋಜನೆ ಮತ್ತು ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್‌ನಂತಹ ವಿವಿಧ ಪ್ರಮುಖ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಜನರು ಸೇರಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಮತ್ತಷ್ಟು ಓದಿ: ಸ್ವಾತಂತ್ರ್ಯ ದಿನಾಚರಣೆ 2023ರ ಪೂರ್ವಾಭ್ಯಾಸ: ಸಂಚಾರ ವ್ಯತ್ಯಯ ಕುರಿತು ಸಲಹೆ ನೀಡಿದ ದೆಹಲಿ ಟ್ರಾಫಿಕ್ ಪೊಲೀಸ್
ತ್ರಿವರ್ಣ ಧ್ವಜದೊಂದಿಗೆ ತಮ್ಮ ಫೋಟೋಗಳನ್ನು www.hargartiranga.com ನಲ್ಲಿ ಅಪ್‌ಲೋಡ್ ಮಾಡುವಂತೆ ಜನರನ್ನು ಒತ್ತಾಯಿಸಿದ್ದಾರೆ. ಆಗಸ್ಟ್ 13 ರಿಂದ 15 ರ ನಡುವಿನ ಹರ್ ಘರ್ ತಿರಂಗಾ ಆಂದೋಲನದಲ್ಲಿ ಭಾಗವಹಿಸುವಂತೆ ಪ್ರಧಾನಿ ಶುಕ್ರವಾರ ಕರೆ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:48 am, Sun, 13 August 23