AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾತಂತ್ರ್ಯ ದಿನಾಚರಣೆ 2023ರ ಪೂರ್ವಾಭ್ಯಾಸ: ಸಂಚಾರ ವ್ಯತ್ಯಯ ಕುರಿತು ಸಲಹೆ ನೀಡಿದ ದೆಹಲಿ ಟ್ರಾಫಿಕ್ ಪೊಲೀಸ್

ಆಗಸ್ಟ್ 13 ರಂದು ಫುಲ್ ಡ್ರೆಸ್ ರಿಹರ್ಸಲ್‌ಗೆ ಮುನ್ನ ದೆಹಲಿ ಸಂಚಾರ ಪೊಲೀಸರು ಸಂಚಾರ ವ್ಯತ್ಯಯ ಕುರಿತು ಸಲಹೆಯನ್ನು ನೀಡಿದ್ದಾರೆ. ಆಗಸ್ಟ್ 13 ರಂದು ಬೆಳಿಗ್ಗೆ 4 ರಿಂದ 11 ರವರೆಗೆ ಕೆಂಪು ಕೋಟೆಯ ಸುತ್ತಲಿನ ಈ ರಸ್ತೆಗಳನ್ನು ಸಂಚಾರಕ್ಕೆ ಮುಚ್ಚಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15 ರಂದು ಬೆಳಿಗ್ಗೆ 77 ನೇ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ 2023ರ ಪೂರ್ವಾಭ್ಯಾಸ: ಸಂಚಾರ ವ್ಯತ್ಯಯ ಕುರಿತು ಸಲಹೆ ನೀಡಿದ ದೆಹಲಿ ಟ್ರಾಫಿಕ್ ಪೊಲೀಸ್
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on:Aug 12, 2023 | 8:06 PM

Share

ದೆಹಲಿ ಆಗಸ್ಟ್ 12: ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ (Independence Day 2023) ಮತ್ತು ಆಗಸ್ಟ್ 13 ರಂದು ಫುಲ್ ಡ್ರೆಸ್ ರಿಹರ್ಸಲ್‌ಗೆ ಮುನ್ನ ದೆಹಲಿ ಸಂಚಾರ ಪೊಲೀಸರು (Delhi Traffic Police) ಸಂಚಾರ ವ್ಯತ್ಯಯ ಕುರಿತು ಸಲಹೆಯನ್ನು ನೀಡಿದ್ದಾರೆ. ಆಗಸ್ಟ್ 13 ರಂದು ಬೆಳಿಗ್ಗೆ 4 ರಿಂದ 11 ರವರೆಗೆ ಕೆಂಪು ಕೋಟೆಯ (Red Fort) ಸುತ್ತಲಿನ ಈ ರಸ್ತೆಗಳನ್ನು ಸಂಚಾರಕ್ಕೆ ಮುಚ್ಚಲಾಗುವುದು.

1. ನೇತಾಜಿ ಸುಭಾಷ್ ಮಾರ್ಗ ದೆಹಲಿ ಗೇಟ್‌ನಿಂದ ಚಟ್ಟಾ ರೈಲ್‌ ಕಡೆ 2. GPO ದೆಹಲಿಯಿಂದ ಚಟ್ಟಾ ರೈಲಿಗೆ ಅಲ್ಲಿಂದ ಲೋಥಿಯನ್ ರಸ್ತೆ. 3 H. C. ಸೇನ್ ಮಾರ್ಗದಿಂದ. S.P. ಮುಖರ್ಜಿ ಮಾರ್ಗ ಅಲ್ಲಿಂದ ಯಮುನಾ ಬಜಾರ್ ಚೌಕ್‌ಗೆ. 4. ಚಾಂದಿನಿ ಚೌಕ್ ರಸ್ತೆ ಫೌಂಟೇನ್ ಚೌಕದಿಂದ ಕೆಂಪು ಕೋಟೆಗೆ. 5. ನಿಶಾದ್ ರಾಜ್ ಮಾರ್ಗ ರಿಂಗ್ ರಸ್ತೆಯಿಂದ ನೇತಾಜಿ ಸುಭಾಷ್ ಮಾರ್ಗ. 6. ಎಸ್ಪ್ಲೇನೇಡ್ ರಸ್ತೆ ಮತ್ತು ನೇತಾಜಿ ಸುಭಾಷ್ ಮಾರ್ಗಕ್ಕಿರುವ ಲಿಂಕ್ ರಸ್ತೆ. 7. ರಾಯಘಾಟ್‌ನಿಂದ ಐಎಸ್‌ಬಿಟಿಗೆ ವರ್ತುಲ ರಸ್ತೆ. B. ಹೊರ ವರ್ತುಲ ರಸ್ತೆ ಐಎಸ್‌ಬಿಟಿಯಿಂದ ಐಪಿ ಫ್ಲೈಓವರ್‌ಗೆ ಅಂದರೆ ಸಲೀಂಘಡ್ ಬೈಪಾಸ್

ಟ್ರಾಫಿಕ್ ಪೋಲೀಸರು ಡ್ರೆಸ್ ರಿಹರ್ಸಲ್ ದೃಷ್ಟಿಯಿಂದ ತಪ್ಪಿಸಬೇಕಾದ ಕೆಳಗಿನ ಮಾರ್ಗಗಳನ್ನು ಪಟ್ಟಿಯನ್ನೂ ನೀಡಿದ್ದಾರೆ

ಸಿ-ಹೆಕ್ಸಗಾನ್, ಇಂಡಿಯಾ ಗೇಟ್, ಎ ಪಾಯಿಂಟ್ ತಿಲಕ್ ಮಾರ್ಗ. ಮಥುರಾ ರಸ್ತೆ, ಬಿಎಸ್ ಮಾರ್ಗ, ನೇತಾಜಿ ಸುಭಾಷ್ ಮಾರ್ಗ, ಜೆ.ಎಲ್. ನೆಹರು ಮಾರ್ಗ, ನಿಜಾಮುದ್ದೀನ್ ಖಟ್ಟಾ ನಡುವಿನ ರಿಂಗ್ ರಸ್ತೆ, ಕೋಪರ್ನಿಕಸ್ ಮಾರ್ಗ, ಮಂಡಿ ಹೌಸ್, ಸಿಕಂದ್ರ ರಸ್ತೆ, ಡಬ್ಲ್ಯೂ ಪಾಯಿಂಟ್, ಐಎಸ್‌ಬಿಟಿ ಕಾಶ್ಮೀರಿ ಗೇಟ್ ಮತ್ತು ಹೊರ ವರ್ತುಲ ರಸ್ತೆ ನಿಜಾಮುದ್ದೀನ್ ಖಟ್ಟಾ ಮತ್ತು ಬೈಪಾಸ್ ಮೂಲಕ 1 ಎಸ್‌ಬಿಟಿ ಕಾಶ್ಮೀರಿಎಲ್ ಸಿಯೇಟ್.

ಇದನ್ನೂ ಓದಿ: ತಮಿಳುನಾಡು ಶಿಕ್ಷಣ ಸಚಿವ ಅನ್ಬಿಲ್ ಮಹೇಶ್​ಗೆ ಎದೆನೋವು, ಅಸ್ವಸ್ಥ; ಆಸ್ಪತ್ರೆಗೆ ಕರೆತರುವಾಗ ಬೆಂಗಳೂರು ಟ್ರಾಫಿಕ್​ನಲ್ಲಿ ಸಿಲುಕಿ ಪರದಾಟ

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15 ರಂದು ಬೆಳಿಗ್ಗೆ 77 ನೇ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:52 pm, Sat, 12 August 23