ಅವಿಶ್ವಾಸ ನಿರ್ಣಯದ ವೇಳೆ ವಿಪಕ್ಷಗಳು ಸದನದಿಂದ ಓಡಿ ಹೋಗಿವೆ: ನರೇಂದ್ರ ಮೋದಿ

ವಿರೋಧ ಪಕ್ಷಗಳು ಕೇವಲ ಮಣಿಪುರದಲ್ಲಿ ರಾಜಕೀಯ ಮಾಡಲು ಬಯಸುತ್ತಿವೆ ಎಂದು ಪ್ರಧಾನಿ ಹೇಳಿದ್ದಾರೆ. ಅವರು ಯಾವುದೇ ಚರ್ಚೆಯ ಬಗ್ಗೆ ಗಂಭೀರವಾಗಿರಲಿಲ್ಲ, ಅವರು ಅದರ ಮೇಲೆ ರಾಜಕೀಯ ಮಾಡಲು ಬಯಸಿದ್ದರು. "ಗರೀಬಿ ಹಟಾವೋ" ಘೋಷಣೆಯ ಬಗ್ಗೆ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ, ವಾಸ್ತವದಲ್ಲಿ, ಅವರು ಬಡತನವನ್ನು ತೊಡೆದುಹಾಕಲು ಮತ್ತು ದೇಶದ ಬಡ ಜನರ ಜೀವನ ಪರಿಸ್ಥಿತಿಗಳನ್ನು ಸುಧಾರಿಸಲು ಏನನ್ನೂ ಮಾಡಿಲ್ಲ ಎಂದು ಹೇಳಿದ್ದಾರೆ.

ಅವಿಶ್ವಾಸ ನಿರ್ಣಯದ ವೇಳೆ ವಿಪಕ್ಷಗಳು ಸದನದಿಂದ ಓಡಿ ಹೋಗಿವೆ: ನರೇಂದ್ರ ಮೋದಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Aug 12, 2023 | 4:33 PM

ದೆಹಲಿ ಆಗಸ್ಟ್ 12: ಅವಿಶ್ವಾಸ ಗೊತ್ತುವಳಿ ಮಂಡನೆಗೆ ಗುರುವಾರ ಉತ್ತರ ನೀಡುವಾಗ ವಾಕ್‌ಔಟ್ ಮಾಡಿದ್ದಕ್ಕಾಗಿ ವಿರೋಧ ಪಕ್ಷಗಳನ್ನು ಲೇವಡಿ ಮಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು “ಅವರು ಸದನದಿಂದ ಓಡಿಹೋದರು” ಎಂದು ಹೇಳಿದ್ದಾರೆ. ಶನಿವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ (BJP) ಕ್ಷೇತ್ರೀಯ ಪಂಚಾಯತ್ ರಾಜ್ ಪರಿಷತ್ (Kshetriya Panchayati Raj Parishad) ಅನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, “ಎರಡು ದಿನಗಳ ಹಿಂದೆ ನಾವು ಸಂಸತ್ತಿನಲ್ಲಿ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ಸೋಲಿಸಿದ್ದೇವೆ. ಅವರು ಹರಡುತ್ತಿದ್ದ ನಕಾರಾತ್ಮಕತೆಯನ್ನು ನಾವು ಸೋಲಿಸಿದ್ದೇವೆ. ಸತ್ಯ ಏನೆಂದರೆ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯದ ಮೇಲೆ ಮತ ಹಾಕಲು ಹೆದರುತ್ತಿವೆ. ‘ಘಮಾಂಡಿಯಾ’ ಮೈತ್ರಿಯಲ್ಲಿನ ಬಿರುಕುಗಳನ್ನು ಬಹಿರಂಗಪಡಿಸಬಹುದೆಂಬ ಕಾರಣದಿಂದ ಅವರು ಮತ ಚಲಾಯಿಸಲು ಬಯಸಲಿಲ್ಲ. ಅವರು ಸದನದಿಂದ ಓಡಿಹೋದರು ಎಂದಿದ್ದಾರೆ. ಗುರುವಾರ ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಅವಿಶ್ವಾಸ ನಿರ್ಣಯವನ್ನು ಸೋಲಿಸಲಾಯಿತು.

ವಿರೋಧ ಪಕ್ಷಗಳು ಕೇವಲ ಮಣಿಪುರದಲ್ಲಿ ರಾಜಕೀಯ ಮಾಡಲು ಬಯಸುತ್ತಿವೆ ಎಂದು ಪ್ರಧಾನಿ ಹೇಳಿದ್ದಾರೆ. ಅವರು ಯಾವುದೇ ಚರ್ಚೆಯ ಬಗ್ಗೆ ಗಂಭೀರವಾಗಿರಲಿಲ್ಲ, ಅವರು ಅದರ ಮೇಲೆ ರಾಜಕೀಯ ಮಾಡಲು ಬಯಸಿದ್ದರು. “ಗರೀಬಿ ಹಟಾವೋ” ಘೋಷಣೆಯ ಬಗ್ಗೆ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ, ವಾಸ್ತವದಲ್ಲಿ, ಅವರು ಬಡತನವನ್ನು ತೊಡೆದುಹಾಕಲು ಮತ್ತು ದೇಶದ ಬಡ ಜನರ ಜೀವನ ಪರಿಸ್ಥಿತಿಗಳನ್ನು ಸುಧಾರಿಸಲು ಏನನ್ನೂ ಮಾಡಿಲ್ಲ. ಬಡವರ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರವು ಕ್ರಮಗಳನ್ನು ತೆಗೆದುಕೊಂಡಿವೆ ಎಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು ಟಿಎಂಸಿ ಆಡಳಿತವಿರುವ ಬಂಗಾಳದಲ್ಲಿ ನಡೆದ ಗ್ರಾಮೀಣ ಚುನಾವಣೆಗಳಲ್ಲಿ ಹಿಂಸಾಚಾರ ಮತ್ತು ಅವ್ಯವಸ್ಥೆಯನ್ನು ಉಲ್ಲೇಖಿಸಿದ ಮೋದಿ,”ಟಿಎಂಸಿ ನೆ ಖೂನಿ ಖೇಲ್ ಖೇಲಾ ಹೈ (ಟಿಎಂಸಿ ರಕ್ತದಾಟವಾಡಿದೆ)” ಎಂದು ಆರೋಪಿಸಿದರು. “ಬಂಗಾಳದಲ್ಲಿ ಹಿಂಸಾಚಾರವನ್ನು ಬಳಸಲಾಗಿದೆ. ಪ್ರತಿಪಕ್ಷಗಳಿಗೆ ಬೆದರಿಕೆ ಹಾಕುತ್ತಾರೆ ಅವರು. ಆದರೆ ಇದರ ಹೊರತಾಗಿಯೂ, ಬಂಗಾಳದ ಜನರ ಮೇಲಿನ ಪ್ರೀತಿಯು ಜನರ ಗೆಲುವಿಗೆ ಕಾರಣವಾಗಿದೆ.

ಯಾವುದೇ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸದಂತೆ ನೋಡಿಕೊಳ್ಳಲು ಅವರು (ಟಿಎಂಸಿ) ಏನು ಬೇಕಾದರೂ ಮಾಡುತ್ತಾರೆ. ಬಿಜೆಪಿ ಕಾರ್ಯಕರ್ತರಿಗೆ ಮಾತ್ರವಲ್ಲದೆ ಮತದಾರರಿಗೂ ಬೆದರಿಕೆ ಹಾಕಿದ್ದಾರೆ. ಬೂತ್‌ಗಳನ್ನು ವಶಪಡಿಸಿಕೊಳ್ಳಲು ಗುತ್ತಿಗೆ ನೀಡಲಾಗಿದೆ. ಇದು ಅವರ ರಾಜಕೀಯ ಮಾಡುವ ವಿಧಾನವಾಗಿದೆ. ರಾಜ್ಯದಲ್ಲಿ ಮತ ಎಣಿಕೆ ವೇಳೆ ಟಿಎಂಸಿ ಬಿಜೆಪಿ ಸದಸ್ಯರನ್ನು ಬಲವಂತವಾಗಿ ಕಚೇರಿಯಿಂದ ಹೊರ ಹಾಕಿತು ಮತ್ತು ನೋಡಲೂ ಬಿಡಲಿಲ್ಲ.ಇಷ್ಟೆಲ್ಲ ಇದ್ದರೂ ಬಿಜೆಪಿ ಗೆದ್ದಾಗ ನಮ್ಮ ಸದಸ್ಯರ ವಿರುದ್ಧ ರ್ಯಾಲಿ ನಡೆಸಿದರು.

ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಪ್ರತಿಪಕ್ಷಗಳನ್ನು ಬೆದರಿಸಲು ತೃಣಮೂಲ ಕಾಂಗ್ರೆಸ್ “ಭಯೋತ್ಪಾದನೆ ಮತ್ತು ಬೆದರಿಕೆಗಳನ್ನು” ಬಳಸುತ್ತಿದೆ ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.

ಇದನ್ನೂ ಓದಿ: ಲೋಕಸಭೆ: ಅವಿಶ್ವಾಸ ನಿರ್ಣಯದಲ್ಲಿ ಇಂಡಿಯಾಗೆ ಸೋಲು ಪಶ್ಚಿಮ ಬಂಗಾಳದಲ್ಲಿ ಪ್ರತಿಪಕ್ಷಗಳಿಗೆ ಬೆದರಿಕೆ ಹಾಕಲು ಹಿಂಸಾಚಾರವನ್ನು ಬಳಸಲಾಗಿದೆ. ಆದರೆ ಇದರ ಹೊರತಾಗಿಯೂ, ಬಂಗಾಳದ ಜನರ ಮೇಲಿನ ಪ್ರೀತಿಯು ಜನರ ಗೆಲುವಿಗೆ ಕಾರಣವಾಯಿತು, ಆದರೆ ನಮ್ಮ ಅಭ್ಯರ್ಥಿಗಳು ಗೆದ್ದಾಗ, ಅವರಿಗೆ ಮೆರವಣಿಗೆ ನಡೆಸಲು ಅವಕಾಶ ನೀಡುವುದಿಲ್ಲ. ಕೆಲವರು ಮೆರವಣಿಗೆ ನಡೆಸಿದರೆ ಅವರ ಮೇಲೆ ಹಲ್ಲೆ ಮಾಡಲಾಗುತ್ತದೆ, ಇದು ಟಿಎಂಸಿಯ ರಾಜಕಾರಣ ಎಂದು ಮೋದಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:57 pm, Sat, 12 August 23