PM Modi Speech Live Video: ಅವಿಶ್ವಾಸ ನಿರ್ಣಯ, ಲೋಕಸಭೆಯಲ್ಲಿ ಉತ್ತರ ನೀಡುತ್ತಿರುವ ಪ್ರಧಾನಿ ಮೋದಿ ನೇರ ಪ್ರಸಾರ

PM Modi Speech Live Video: ಅವಿಶ್ವಾಸ ನಿರ್ಣಯ, ಲೋಕಸಭೆಯಲ್ಲಿ ಉತ್ತರ ನೀಡುತ್ತಿರುವ ಪ್ರಧಾನಿ ಮೋದಿ ನೇರ ಪ್ರಸಾರ

ಅಕ್ಷಯ್​ ಪಲ್ಲಮಜಲು​​
|

Updated on: Aug 10, 2023 | 5:08 PM

PM Modi SPeech in Parliament Live Streaming: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ತಂದಿರುವ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಪ್ರತಿಪಕ್ಷಗಳ ಆರೋಪಕ್ಕೆ ಉತ್ತರ ನೀಡುತ್ತಿದ್ದಾರೆ.

ದೆಹಲಿ, ಆ.10: ಮಣಿಪುರ ಹಿಂಸಾಚಾರ(Manipur Violence)ಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ತಂದಿರುವ ಅವಿಶ್ವಾಸ ನಿರ್ಣಯ(No-Confidence Motion)ಕ್ಕೆ ಪ್ರಧಾನಿ ಮೋದಿ ಇಂದು ಉತ್ತರ ನೀಡುತ್ತಿದ್ದಾರೆ. ಜು. 26 ರಂದು ಮಣಿಪುರ ಹಿಂಸಾಚಾರದ ವಿಷಯದ ಬಗ್ಗೆ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದು, ಅದನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅಂಗೀಕರಿಸಿದ್ದರು. ಇದೀಗ ಪ್ರತಿಪಕ್ಷಗಳು ಮಾಡಿದ ಆರೋಪಕ್ಕೆ ಮತ್ತು ಮಣಿಪುರ ಹಿಂಸಾಚಾರದ ಕುರಿತು ಸಂಸತ್ತಿನಲ್ಲಿ ತಂದಿರುವ ಅವಿಶ್ವಾಸ ನಿರ್ಣಯಕ್ಕೆ ಪ್ರಧಾನಿ ಉತ್ತರ ನೀಡುತ್ತಿರುವ ಲೈವ್​​ ವಿಡಿಯೋ ಇಲ್ಲಿದೆ.