ಲೋಕಸಭೆಯಿಂದ ಅಮಾನತು; ಸುಪ್ರೀಂಕೋರ್ಟ್ ಮೊರೆಹೋಗುವ ಬಗ್ಗೆ ಅಧೀರ್ ರಂಜನ್ ಚೌಧರಿ ಚಿಂತನೆ

ಸುಪ್ರೀಂಕೋರ್ಟ್‌ಗೆ ಹೋಗಬೇಕೇ ಅಥವಾ ಬೇಡವೇ ಎಂಬುದರ ಕುರಿತು ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಹೇಳಿದ ಚೌಧರಿ ನಾನು ಶೀಘ್ರದಲ್ಲೇ ನ್ಯಾಯಾಲಯದ ಮೆಟ್ಟಿಲೇರುವೆ ಎಂದಿದ್ದಾರೆ. ನನ್ನ ಆಜ್ಞೆಯ ಮೇರೆಗೆ ಅತ್ಯಂತ ದೃಢವಾಗಿ ಮತ್ತು ಎಲ್ಲಾ ನಮ್ರತೆಯಿಂದ, ಸಂಸತ್ತಿನಲ್ಲಿ ಯಾರನ್ನಾದರೂ ಅವಹೇಳನ ಮಾಡುವ ಅಥವಾ ಕಳಂಕಗೊಳಿಸುವ ದೂರದ ಉದ್ದೇಶವೂ ನನಗೆ ಇರಲಿಲ್ಲ ಎಂದು ನಾನು ಹೇಳಬಲ್ಲೆ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.

ಲೋಕಸಭೆಯಿಂದ ಅಮಾನತು; ಸುಪ್ರೀಂಕೋರ್ಟ್ ಮೊರೆಹೋಗುವ ಬಗ್ಗೆ ಅಧೀರ್ ರಂಜನ್ ಚೌಧರಿ ಚಿಂತನೆ
ಅಧೀರ್ ರಂಜನ್ ಚೌಧರಿ
Follow us
|

Updated on: Aug 12, 2023 | 5:23 PM

ದೆಹಲಿ ಆಗಸ್ಟ್ 12: ವಿವಿಧ ವಿಧಾನಗಳನ್ನು ಆಶ್ರಯಿಸುವ ಮೂಲಕ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ಬಿಜೆಪಿ (BJP) ಉದ್ದೇಶಪೂರ್ವಕ ಕಾರ್ಯವೆಸಗುತ್ತಿದೆ ಎಂದು ಲೋಕಸಭೆಯ (Loksabha) ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ (Adhir Ranjan Chowdhury )ಹೇಳಿದ್ದಾರೆ. ಕೆಳಮನೆಯಿಂದ ಅಮಾನತುಗೊಂಡ ಒಂದು ದಿನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಚೌಧರಿ, ಸದನದಿಂದ ತಮ್ಮನ್ನು ಅಮಾನತುಗೊಳಿಸುವುದರ ವಿರುದ್ಧ ಸುಪ್ರೀಂಕೋರ್ಟ್‌ಗೆ ಹೋಗುವ ಬಗ್ಗೆ ಚಿಂತಿಸುತ್ತಿದ್ದೇನೆ. ಈ ವಿಷಯದಲ್ಲಿ ಸಮಾಲೋಚನೆ ನಡೆಯುತ್ತಿದೆ ಎಂದಿದ್ದಾರೆ. ತನ್ನ ಅಮಾನತು ಆಡಳಿತ ಪಕ್ಷದ “ಹಿಮ್ಮುಖ ಹೆಜ್ಜೆ” ಎಂದು ಹೇಳಿದ ಅವರು, “ನನ್ನನ್ನು ಗಲ್ಲಿಗೇರಿಸಲಾಗಿದೆ. ನಂತರ ನಾನು ವಿಚಾರಣೆಯನ್ನು ಎದುರಿಸಬೇಕಾಗುತ್ತದೆ” ಎಂಬ “ವಿಲಕ್ಷಣ” ಪರಿಸ್ಥಿತಿ ಇದು ಎಂದಿದ್ದಾರೆ.

ನಾಲ್ವರು ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಚೌಧರಿ, ಇದೊಂದು ಹೊಸ ವಿದ್ಯಮಾನ. ಆಡಳಿತ ಪಕ್ಷವು ಉದ್ದೇಶಪೂರ್ವಕವಾಗಿ ವಿರೋಧ ಪಕ್ಷದವರ ಧ್ವನಿಯನ್ನು ಹತ್ತಿಕ್ಕುವ ಉದ್ದೇಶದಿಂದ ಹಲವಾರು ಅಸಹ್ಯಕರ ದಾರಿಗಳನ್ನು ಆಶ್ರಯಿಸುತ್ತಿದೆ, ಅದು ನನಗೆ ಅನ್ವಯಿಸಬಾರದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಆದರೆ ಸದನದ ಅಧ್ಯಕ್ಷರಿಗೆ ಎಲ್ಲಾ ಗೌರವ  ನೀಡುತ್ತೇನೆ, ನಾನು ಪೀಠದ ನಿರ್ದೇಶನವನ್ನು ವಿರೋಧಿಸಲು ಸಾಧ್ಯವಿಲ್ಲ ಎಂದು ನಾನು ಹೇಳಲೇಬೇಕು. ಆದರೆ ಈ ರೀತಿಯ ಪರಿಸ್ಥಿತಿಯನ್ನು ನ್ಯಾಯಾಲಯವು ಪರಿಹರಿಸಬಹುದು ಎಂದು ನಾನು ಕಂಡುಕೊಂಡರೆ, ನಾನು ಅದಕ್ಕೆ ಪ್ರಯತ್ನಿಸಬಹುದು ಎಂದು ಹೇಳಿದರು. ಪಶ್ಚಿಮ ಬಂಗಾಳದ ಬಹರಂಪುರ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿದ್ದಾರೆ ಚೌಧರಿ.

ಸುಪ್ರೀಂಕೋರ್ಟ್‌ಗೆ ಹೋಗಬೇಕೇ ಅಥವಾ ಬೇಡವೇ ಎಂಬುದರ ಕುರಿತು ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಹೇಳಿದ ಚೌಧರಿ ನಾನು ಶೀಘ್ರದಲ್ಲೇ ನ್ಯಾಯಾಲಯದ ಮೆಟ್ಟಿಲೇರುವೆ ಎಂದಿದ್ದಾರೆ. ನನ್ನ ಆಜ್ಞೆಯ ಮೇರೆಗೆ ಅತ್ಯಂತ ದೃಢವಾಗಿ ಮತ್ತು ಎಲ್ಲಾ ನಮ್ರತೆಯಿಂದ, ಸಂಸತ್ತಿನಲ್ಲಿ ಯಾರನ್ನಾದರೂ ಅವಹೇಳನ ಮಾಡುವ ಅಥವಾ ಕಳಂಕಗೊಳಿಸುವ ದೂರದ ಉದ್ದೇಶವೂ ನನಗೆ ಇರಲಿಲ್ಲ ಎಂದು ನಾನು ಹೇಳಬಲ್ಲೆ. ಮೋದಿ ಜಿ ಎಲ್ಲದರ ಬಗ್ಗೆ ಮಾತನಾಡುತ್ತಾರೆ ಆದರೆ ಮಣಿಪುರ ವಿಷಯದ ಬಗ್ಗೆ, ಅವರು ‘ನೀರವ’ ಅಂದರೆ ಮೌನವಾಗಿ ಕುಳಿತಿದ್ದಾರೆ. ‘ನೀರವ್’ ಎಂದರೆ ಮೌನ, ನನ್ನ ಉದ್ದೇಶ ಪ್ರಧಾನಿ ಮೋದಿಯನ್ನು ಅವಮಾನಿಸುವುದಿಲ್ಲ. ಯಾವುದಾದರೂ ಅಸಂಸದೀಯವಾಗಿದ್ದರೆ, ಅದನ್ನು ಅಳಿಸಲು ಅಥವಾ ತೆಗೆದು ಹಾಕಲು ಸ್ಪೀಕರ್‌ಗೆ ಹಕ್ಕಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಆದರೆ, ಅವರು ಆಕ್ಷೇಪಾರ್ಹ ಎಂದು ತಪ್ಪಾಗಿ ಅರ್ಥೈಸಿದ ಒಂದು ಅಥವಾ ಎರಡು ಪದಗಳಿಗೆ, ಬಿಜೆಪಿಯು ನಿಯಮಗಳ ಪ್ರಕಾರ ಪ್ರತಿಭಟನೆ ನಡೆಸಿ ಸ್ಪೀಕರ್‌ ಅವರಲ್ಲಿ ಆ ಪದಗಳನ್ನು ಏಕೆ ಹೊರಹಾಕಿರಬಹುದು ಎಂದು ನನಗೆ ತಿಳಿದಿಲ್ಲ ಎಂದು ಅವರು ಹೇಳಿದರು.

ಸ್ವಾಭಾವಿಕವಾಗಿ, ಇದು ವಿಲಕ್ಷಣವ ಸಂಗತಿ. ಸರ್ಕಾರವು ಹಿಮ್ಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ರೀತಿಯ ಹಿಮ್ಮುಖ ಕ್ರಮಗಳು ಖಂಡಿತವಾಗಿಯೂ ಸಂಸದೀಯ ಪ್ರಜಾಪ್ರಭುತ್ವದ ಮನೋಭಾವವನ್ನು ಹಾಳುಮಾಡುತ್ತವೆ ಎಂದು ಚೌಧರಿ ಹೇಳಿದ್ದಾರೆ.

ಇದನ್ನೂ ಓದಿ: G20 ಸಭೆಯಲ್ಲಿ ಮೋದಿ ಭಾಷಣ: ಭ್ರಷ್ಟಾಚಾರದ ವಿರುದ್ಧ ಸಾಮೂಹಿಕ ಪ್ರಯತ್ನಕ್ಕೆ ಪ್ರಧಾನಿ ಕರೆ

ಪುನರಾವರ್ತಿತ ದುರ್ನಡತೆ”ಗಾಗಿ ಚೌಧರಿ ಅವರನ್ನು ಗುರುವಾರ ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಚೌಧರಿ ಅವರ ಅಮಾನತು ನಿರ್ಣಯವನ್ನು ಮಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮಂತ್ರಿಗಳು ಮಾತನಾಡುವಾಗ ಅಥವಾ ಚರ್ಚೆ ನಡೆಯುತ್ತಿರುವಾಗ ಸದನಕ್ಕೆ ಅಡ್ಡಿಪಡಿಸಿದ್ದಾರೆ ಎಂದು ನಿರ್ಣಯದಲ್ಲಿ ಹೇಳಿದ್ದು. ಧ್ವನಿ ಮತದ ಮೂಲಕ ನಿರ್ಣಯವನ್ನು ಅಂಗೀಕರಿಸಲಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ