Independence Day 2023: ಭಾರತದ ರಾಷ್ಟ್ರಗೀತೆ ಜನ ಗಣ ಮನದ ಬಗ್ಗೆ ತಿಳಿಯಬೇಕಾದ ವಿಷಯಗಳು ಮತ್ತು ಗೀತೆಯ ಅರ್ಥ

"ಜನ ಗಣ ಮನ ಅಧಿನಾಯಕ ಜಯ ಹೇ" ಎಂಬ ಭಾರತದ ರಾಷ್ಟ್ರಗೀತೆಯನ್ನು ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಬರೆದಿದ್ದಾರೆ. ಈ ಹಾಡು ಭಾರತದ ರಾಷ್ಟ್ರೀಯ ಪರಂಪರೆಯ, ದೇಶಭಕ್ತಿ, ಹೆಮ್ಮೆ ಮತ್ತು ರಾಷ್ಟ್ರೀಯ ನಿಷ್ಠೆಯನ್ನು ಪ್ರದರ್ಶಿಸುತ್ತದೆ.

Independence Day 2023: ಭಾರತದ ರಾಷ್ಟ್ರಗೀತೆ ಜನ ಗಣ ಮನದ ಬಗ್ಗೆ ತಿಳಿಯಬೇಕಾದ ವಿಷಯಗಳು ಮತ್ತು ಗೀತೆಯ ಅರ್ಥ
ಭಾರತದ ರಾಷ್ಟ್ರಗೀತೆ (Photo Credit: AFP)
Follow us
Rakesh Nayak Manchi
|

Updated on:Aug 13, 2023 | 10:16 PM

National Anthem of India: ಬ್ರಿಟಿಷ್ ದಾಸ್ಯದಿಂದ ಭಾರತವು ಹೋರಾಟದ ಮೂಲಕ 1947 ರ ಆಗಸ್ಟ್ 15 ರಂದು ಮುಕ್ತವಾಯಿತು. ಸುದೀರ್ಘ ಹೋರಾಟದಲ್ಲಿ ಅನೇಕ ಹೋರಾಟಗಾರರು ತ್ಯಾಗ ಬಲಿದಾನ ಮಾಡಿದ್ದಾರೆ. ಪ್ರತಿ ವರ್ಷ ಆಗಸ್ಟ್ 15 ರಂದು ಆಚರಿಸುವ ಸ್ವಾತಂತ್ರ್ಯ ದಿನಾಚರಣೆಯಂದು (Independence Day) ಮಹನೀಯರ ತ್ಯಾಗ ಬಲಿದಾದ ಬಗ್ಗೆ ನೆನಪಿಸಲಾಗುತ್ತದೆ. ಅಂದು ಬಾನೆತ್ತರದಲ್ಲಿ ಹಾರುವ ತಿರಂಗದ ಅಡಿಯಲ್ಲಿ ನಿಂತು ಭಾರತದ ರಾಷ್ಟ್ರೀಯ ಪರಂಪರೆಯ, ದೇಶಭಕ್ತಿ, ಹೆಮ್ಮೆ ಮತ್ತು ರಾಷ್ಟ್ರೀಯ ನಿಷ್ಠೆಯನ್ನು ಪ್ರದರ್ಶಿಸುವ ರಾಷ್ಟ್ರಗೀತೆಯನ್ನೂ ಹಾಡಲಾಗುತ್ತದೆ.

ಭಾರತದ ರಾಷ್ಟ್ರಗೀತೆ, “ಜನ ಗಣ ಮನ”ವನ್ನು ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಬರೆದಿದ್ದಾರೆ. ಮೂಲತಃ, ಇದು ಐದು ಚರಣಗಳನ್ನು ಒಳಗೊಂಡಿರುವ ಬಂಗಾಳಿ, ಸಂಸ್ಕೃತದಲ್ಲಿ ಬರೆಯಲಾದ “ಭರೋತೋ ಭಾಗ್ಯೋ ಬಿಧಾತ” ಎಂಬ ಬ್ರಹ್ಮ ಸ್ತೋತ್ರವಾಗಿದೆ. ಇಂದು, ಹಾಡುವ ಗೀತೆಯು ಈ ಸ್ತೋತ್ರದ ತುಣುಕಾಗಿದೆ. ಏಕೆಂದರೆ ಒಂದೇ ಪ್ಯಾರಾವನ್ನು ಭಾರತದ ರಾಷ್ಟ್ರಗೀತೆಯಾಗಿ ಅಳವಡಿಸಲಾಗಿದ್ದು, ಇದು ದೇಶದ ಧಾರ್ಮಿಕ, ಪ್ರಾದೇಶಿಕ, ಸಾಂಸ್ಕೃತಿಕ ಏಕತೆ ಮತ್ತು ವೈವಿಧ್ಯತೆಯನ್ನು ಚಿತ್ರಿಸುತ್ತದೆ.

ಇದನ್ನೂ ಓದಿ: 76ನೇ ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ಆಹ್ವಾನಿತರಾಗಿ ಮಂಡ್ಯದ ರೈತನಿಗೆ ಪಿಎಂಒ ಆಹ್ವಾನ

ಭಾರತದ ರಾಷ್ಟ್ರೀಯ ಗೀತೆಯನ್ನು ಮೊದಲ ಬಾರಿಗೆ 1911 ರ ಡಿಸೆಂಬರ್ 21 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ವಾರ್ಷಿಕ ಸಮ್ಮೇಳನದಲ್ಲಿ ಹಾಡಲಾಯಿತು. ಜನ ಗಣ ಮನವನ್ನು ಅಬಿದ್ ಅಲಿ ಅವರು ಹಿಂದಿ ಮತ್ತು ಉರ್ದು ಭಾಷೆಗೆ ಅನುವಾದಿಸಿದ್ದಾರೆ. 1950 ರ ಜನವರಿ 24 ರಂದು ಜನ ಮನ ಗಣವನ್ನು ಭಾರತದ ರಾಷ್ಟ್ರೀಯ ಗೀತೆ ಎಂದು ಅಧಿಕೃತವಾಗಿ ಘೋಷಿಸಲಾಯಿತು.

ನಮ್ಮ ರಾಷ್ಟ್ರಗೀತೆಯ ಮೂಲ ಅರ್ಥ ಬಹುತ್ವ. ಇದು ಸಂಸ್ಕೃತಿ, ಜಾತಿ ಮತ್ತು ಧರ್ಮದ ವ್ಯತ್ಯಾಸಗಳು ಮತ್ತು ಏಕತೆಯ ಭಾವನೆಯ ಬಗ್ಗೆ ಪ್ರಸ್ತುತ ಪಡಿಸುತ್ತದೆ. ನಮ್ಮ ರಾಷ್ಟ್ರಗೀತೆ ಈ ಕೆಳಗಿನಂತಿದೆ.

ಜನಗಣಮನ-ಅಧಿನಾಯಕ ಜಯ ಹೇ ಭಾರತಭಾಗ್ಯವಿಧಾತಾ!

ಪಂಜಾಬ ಸಿಂಧು ಗುಜರಾತ ಮರಾಠಾ ದ್ರಾವಿಡ ಉತ್ಕಲ ವಂಗ

ವಿಂಧ್ಯ ಹಿಮಾಚಲ ಯಮುನಾ ಗಂಗಾ ಉಚ್ಛಲಜಲಧಿತರಂಗ

ತವ ಶುಭ ನಾಮೇ ಜಾಗೇ, ತವ ಶುಭ ಆಶಿಷ ಮಾಗೇ,

ಗಾಹೇ ತವ ಜಯಗಾಥಾ.

ಜನಗಣಮಂಗಳದಾಯಕ ಜಯ ಹೇ ಭಾರತಭಾಗ್ಯವಿಧಾತಾ!

ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ ಜಯ ಹೇ.

ರಾಷ್ಟ್ರಗೀತೆಯ ಅರ್ಥ

ಜನ ಸಮೂಹದ ಮನಸ್ಸಿಗೆ ಒಡೆಯನಾದ ಸರ್ವೋಚ್ಚನಾಯಕನೇ

ಭಾರತದ ಅದೃಷ್ಟವನ್ನು ದಯಪಾಲಿಸುವವನೇ ನಿನಗೆ ಜಯವಾಗಲಿ!

ಪಂಜಾಬ, ಸಿಂಧು, ಗುಜರಾತ, ಮಹಾರಾಷ್ಟ್ರ

ದ್ರಾವಿಡ (ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ) ಒಡಿಶಾ, ಬಂಗಾಳ

ವಿಂದ್ಯ, ಹಿಮಾಚಲ ಪರ್ವತಗಳು ಹಾಗೇ ಗಂಗಾ-ಯಮುನೆಯಂತಹ ಜೀವನದಿಗಳು

ಶ್ರೇಷ್ಠವಾದ ಸಮುದ್ರದ ನೀರಿನ ಅಲೆಗಳು ನಿನ್ನ ಮಂಗಳಕರವಾದ ಹೆಸರನ್ನು ಕೇಳಿ ಜಾಗೃತಗೊಳ್ಳುತ್ತವೆ

ನಿನ್ನ ಮಂಗಳಕರವಾದ ಆಶೀರ್ವಚನವನ್ನು ಕೇಳಿಕೊಳ್ಳುತ್ತಾ,

ನಿನ್ನ ಗೆಲುವಿನ ಗೀತೆಯನ್ನು ಹಾಡುತ್ತಿವೆ

ಜನ ಸಮೂಹಕ್ಕೆ ಒಳ್ಳೆಯದನ್ನು ಅನುಗ್ರಹಿಸವವನೇ ನಿನಗೆ ಜಯವಾಗಲಿ

ಭಾರತದ ಭಾಗ್ಯವನ್ನು ಕರುಣಿಸುವವನೇ ನಿನಗೆ ಜಯವಾಗಲಿ!

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:03 pm, Sat, 12 August 23