ಸೆಲ್ಫೀ ವಿಡಿಯೋ ಮಾಡುತ್ತಿದ್ದ ಯುವಕನಿಗೆ ಡಿಕ್ಕಿ ಹೊಡೆದ ರೈಲು; ಸ್ಥಳದಲ್ಲೇ ಹೋಯ್ತು ಪ್ರಾಣ
ರೈಲ್ವೆ ಸ್ಟೇಶನ್ ಬಳಿ ಸೆಲ್ಫೀ ವಿಡಿಯೋ ತೆಗೆದುಕೊಳ್ಳುತ್ತಿದ್ದಾಗ ರೈಲೊಂದು ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಜೋಲಾರ್ಪೇಟ್ ಪೊಲೀಸ್ ಠಾಣೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಸೆಲ್ಫೀ ತೆಗೆದುಕೊಳ್ಳುತ್ತಿದ್ದ ಯುವಕನಿಗೆ ರೈಲು ಡಿಕ್ಕಿ ಹೊಡೆದು, ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ತಮಿಳುನಾಡಿನ ವೆಲ್ಲೋರ್ನಲ್ಲಿ ನಡೆದಿದೆ. ಮೃತ ಯುವಕನನ್ನು ವಸಂತ್ ಕುಮಾರ್ ಎಂದು ಗುರುತಿಸಲಾಗಿದ್ದು, ಇನ್ನೂ 22ವರ್ಷ. ಕೇಬಲ್ ಟಿವಿ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ, ಸೆಲ್ಫೀ, ರೀಲ್ಸ್ಗಳನ್ನು ಅಪ್ಲೋಡ್ ಮಾಡುವುದು ಆತನ ಹವ್ಯಾಸವಾಗಿತ್ತು. ಹಾಗೇ, ಇಂದು ಕೂಡ ಆತ ತನ್ನ ಸ್ನೇಹಿತರೊಟ್ಟಿಗೆ ಗುಡಿಯಟ್ಟಮ್ ಬಳಿಯ ಮೇಲತ್ತೂರ್ ರೈಲ್ವೆ ಸ್ಟೇಶನ್ ಸಮೀಪ, ರೀಲ್ಸ್ಗೋಸ್ಕರ್ ಶೂಟ್ ಮಾಡಲು ಹೋಗಿದ್ದಾಗ ದುರ್ಘಟನೆ ನಡೆದಿದೆ.
ರೈಲ್ವೆ ಸ್ಟೇಶನ್ ಬಳಿ ಸೆಲ್ಫೀ ವಿಡಿಯೋ ತೆಗೆದುಕೊಳ್ಳುತ್ತಿದ್ದಾಗ ರೈಲೊಂದು ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಜೋಲಾರ್ಪೇಟ್ ಪೊಲೀಸ್ ಠಾಣೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಹಾಗೇ, ಯುವಕನ ಮೃತದೇಹವನ್ನು ಪೋಸ್ಟ್ಮಾರ್ಟಮ್ಗೆ ಕಳಿಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಸ್ವಲ್ಪ ದಿನಗಳ ಹಿಂದೆ ಇಂಥದ್ದೇ ದುರ್ಘಟನೆ ದೆಹಲಿಯ ಹೊರವಲಯದಲ್ಲಿರುವ ಗುರುಗ್ರಾಮದಲ್ಲಿ ನಡೆದಿತ್ತು. ಅಲ್ಲಿ ನಿರ್ಮಾಣಹಂತದಲ್ಲಿದ್ದ ರೈಲ್ವೆ ಮೇಲ್ಸೇತುವೆ ಹಳಿಯ ಬಳಿ ನಾಲ್ವರು ಯುವಕರು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಅವರೆಲ್ಲ ಸ್ಥಳದಲ್ಲೇ ಮೃತಪಟ್ಟಿದ್ದರು.
ಇದನ್ನೂ ಓದಿ: ಕಲ್ಕತ್ತಾ ಹೈಕೋರ್ಟ್ ಆವರಣದಲ್ಲಿ ಪ್ರತಿಭಟನೆ; ಪಿ ಚಿದಂಬರಂನ್ನು ಮಮತಾ ಸರ್ಕಾರದ ‘ದಲಾಲ್’ ಎಂದ ವಕೀಲರು