ಪಶ್ಚಿಮಬಂಗಾಳ (West Bengal)ದಲ್ಲಿ ಮಳೆ ತುಸು ಕಡಿಮೆಯಾಗಿದ್ದರೂ ಪ್ರವಾಹ ಪರಿಸ್ಥಿತಿ ಮುದುವರಿದಿದೆ. ಒಟ್ಟು ಏಳು ಜಿಲ್ಲೆಗಳು ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದು, ಇದುವರೆಗೆ 23 ಮಂದಿ ಮೃತಪಟ್ಟಿದ್ದಾರೆ. ಹಾಗೇ ಮಳೆ, ಪ್ರವಾಹ ಪೀಡಿತ ಪ್ರದೇಶಗಳಿಂದ ಇದುವರೆಗೆ 3 ಲಕ್ಷ ಮಂದಿಯನ್ನು ಸ್ಥಳಾಂತರ ಮಾಡಿ ರಕ್ಷಣೆ ಮಾಡಲಾಗಿದೆ.
ಪ್ರವಾಹ ಪರಿಸ್ಥಿತಿ ಗಂಭೀರಸ್ವರೂಪದಲ್ಲಿದ್ದು, ಹಾಗೇ ಮುಂದುವರಿದಿದೆ. ಎಲ್ಲ ರೀತಿಯ ರಕ್ಷಣಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಎಲ್ಲೆಲ್ಲಿ ಜನ ಸಂಕಷ್ಟದಲ್ಲಿದ್ದಾರೆ? ಅತಿಯಾಗಿ ಮಳೆಯಾಗುತ್ತಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ಜನರಿಗೆ ಕುಡಿಯುವ ನೀರು, ಒಣ ಆಹಾರಗಳು ಮತ್ತು ಅಗತ್ಯ ವೈದ್ಯಕೀಯ ವಸ್ತುಗಳನ್ನು ಪೂರೈಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಏಳು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ನಾಲ್ಕು ಲಕ್ಷಕ್ಕೂ ಅಧಿಕ ಹೆಕ್ಟೇರ್ ಕೃಷಿಭೂಮಿ ಮುಳುಗಡೆಯಾಗಿದೆ. ಮೊನ್ನೆಯವರೆಗೆ ವಿಪರೀತ ಮಳೆಯಾಗುತ್ತಿತ್ತು. ಅಲ್ಲದೆ, ಅಣೆಕಟ್ಟುಗಳಿಂದ ಈಗಲೂ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಹೀಗಾಗಿ ಪುರ್ಬಾ, ಪಶ್ಚಿಮ್ ಬರ್ಧಮಾನ್, ಪಶ್ಚಿಮ್ ಮೇದಿನಿಪುರ, ಹೂಗ್ಲಿ, ಹೌರಾಹ್, ದಕ್ಷಿಣ 24 ಪರಗಣ ಮತ್ತು ಬಿರ್ಬುಮ್ ಜಿಲ್ಲೆಗಳ ಬಹುಪಾಲು ಪ್ರದೇಶಗಳು ಜಲಾವೃತಗೊಂಡಿವೆ. ಅಲ್ಲಿನ ಜನರನ್ನು ರಕ್ಷಣೆ ಮಾಡಲಾಗಿದೆ. ದಾಮೋದರ್ ಕಣಿವೆ ಕಾರ್ಪೋರೇಶನ್ಗೆ ಸೇರಿದ ಗುರುವಾರ 24,000 ಕ್ಯೂಸೆಕ್ಗಳಷ್ಟು ನೀರನ್ನು ಮೈಥಾನ್ ಅಣೆಕಟ್ಟೆಯಿಂದ 24 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.
ಪ್ರಧಾನಿ ಮೋದಿಗೆ ದೂರು
ದಾಮೋದರ ವ್ಯಾಲಿ ಕಾರ್ಪೋರೇಶನ್(ಡಿವಿಸಿ)ಗೆ ಸೇರಿದ ನಾಲ್ಕೂ ಅಣೆಕಟ್ಟುಗಳಿಂದ ಅತಿಹೆಚ್ಚು ನೀರನ್ನು ಬಿಡಲಾಗುತ್ತಿದೆ. ಹೀಗಾಗಿ ಮಾನವ ನಿರ್ಮಿತ ಪ್ರವಾಹ ಉಂಟಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾರ್ಪೋರೇಶನ್, ರಾಜ್ಯ ಸರ್ಕಾರದಿಂದ ಒಪ್ಪಿಗೆ ಪಡೆದ ನಂತರವೇ ನೀರನ್ನು ಹೊರಬಿಡಲಾಗುತ್ತಿದೆ. ಹಾಗಾಗಿ ಪ್ರವಾಹ ಆಯಿತೆಂದು ನಮ್ಮನ್ನು ದೂರುವುದು ಸರಿಯಲ್ಲ ಎಂದಿದೆ.
ಇದನ್ನೂ ಓದಿ: Karnataka Weather: ಅಬ್ಬರಿಸುತ್ತಿದೆ ಆಶ್ಲೇಷಾ ಮಳೆ; ಮಲೆನಾಡು, ಕರಾವಳಿ ಭಾಗದ ಜನರ ಕಣ್ಣಲ್ಲಿ ಆತಂಕದ ಛಾಯೆ
Tokyo Olympics: ಒಲಿಂಪಿಕ್ಸ್ ಹಾಕಿ ಇತಿಹಾಸದಲ್ಲಿ ಚೊಚ್ಚಲ ಪದಕ ಗೆಲ್ಲುವ ಭಾರತೀಯ ಮಹಿಳೆಯರ ಕನಸು ಭಗ್ನ