AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಹೋದರನೊಂದಿಗೆ ವ್ಯಾಯಾಮ ಮಾಡುತ್ತಿದ್ದ ಯುವತಿ 10ನೇ ಮಹಡಿಯಿಂದ ನೆಲಕ್ಕೆ ಜಾರಿಬಿದ್ದು ಸಾವು

ಗುರುವಾರ ಬೆಳಗ್ಗೆ 9 ಗಂಟೆಯ ವೇಳೆ 18 ವರ್ಷದ ಯುವತಿ ತನ್ನ ಸೋದರನ ಜೊತೆ ಎಂದಿನಂತೆ ವ್ಯಾಯಾಮ ಮಾಡುತ್ತಿದ್ದಳು. ಆ ವೇಳೆ ಜಾರಿಬಿದ್ದು, ಕೆಳಗಡೆ ನೆಲದಲ್ಲಿ ಕಾರ್​ ಪಾರ್ಕಿಂಗ್​ ಜಾಗದಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಳು.

ಸಹೋದರನೊಂದಿಗೆ ವ್ಯಾಯಾಮ ಮಾಡುತ್ತಿದ್ದ ಯುವತಿ 10ನೇ ಮಹಡಿಯಿಂದ ನೆಲಕ್ಕೆ ಜಾರಿಬಿದ್ದು ಸಾವು
ಸಹೋದರನೊಂದಿಗೆ ವ್ಯಾಯಾಮ ಮಾಡುತ್ತಿದ್ದ ಯುವತಿ 10ನೇ ಮಹಡಿಯಿಂದ ನೆಲಕ್ಕೆ ಜಾರಿಬಿದ್ದು ಸಾವು
TV9 Web
| Edited By: |

Updated on: Aug 06, 2021 | 9:27 AM

Share

ಕೇರಳ: ಎರ್ನಾಕುಲಂನಲ್ಲಿ ಹದಿಹರೆಯದ ಯುವತಿ 10ನೇ ಮಹಡಿ ಮೇಲೆ ವ್ಯಾಯಾಮ ಮಾಡುತ್ತಾ, ಮಾಡುತ್ತಾ ಸೀದಾ ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದಾಳೆ. ಶಾಂತಿ ತೊಟೆಕಟ್ ಎಸ್ಟೇಟ್​ ಎಂಬ ಅಪಾರ್ಟ್​​​ಮೆಂಟ್​​ನಲ್ಲಿ ಗುರುವಾರ (ಆಗಸ್ಟ್​ 5) ಈ ದುರ್ಘಟನೆ ನಡೆದಿದೆ.

ಗುರುವಾರ ಬೆಳಗ್ಗೆ 9 ಗಂಟೆಯ ವೇಳೆ 18 ವರ್ಷದ ಯುವತಿ ತನ್ನ ಸೋದರನ ಜೊತೆ ಎಂದಿನಂತೆ ವ್ಯಾಯಾಮ ಮಾಡುತ್ತಿದ್ದಳು. ಆ ವೇಳೆ ಜಾರಿಬಿದ್ದು, ಕೆಳಗಡೆ ನೆಲದಲ್ಲಿ ಕಾರ್​ ಪಾರ್ಕಿಂಗ್​ ಜಾಗದಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಳು. ಸೋದರ ಮತ್ತು ಪೋಷಕರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟೊತ್ತಿಗೆ ಕೊನೆಯುಸಿರೆಳೆದಿದ್ದಳು.

ಎರ್ನಾಕುಲಂನ ದಕ್ಷಿಣ ವಿಭಾಗದ ಪೊಲೀಸರು (Ernakulam South police) ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಿಂದ ಇದೊಂದು ಆಕಸ್ಮಿಕ ಘಟನೆ ಎಂದು ತಿಳಿದುಬಂದಿರುವುದಾಗಿ ಹೇಳಿದ್ದಾರೆ.

ಎರ್ನಾಕುಲಂನಲ್ಲಿ ಇಂತಹ ಘಟನೆ ನಡೆದಿರುವುದು ಇತ್ತೀಚಿನ ದಿನಗಳಲ್ಲಿ ಇದು ಎರಡನೆಯದ್ದು. ಕಳೆದ ಡಿಸೆಂಬರ್​​ನಲ್ಲಿ 55 ವರ್ಷದ ಮಹಿಳೆಯೊಬ್ಬರು 6ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಇಮ್ತಿಯಾಜ್​ ಅಹಮದ್​ ಎಂಬ ವಕೀಲರ ಮನೆಯಲ್ಲಿ ಮನೆಕೆಲಸ ಮಾಡಿಕೊಂಡಿದ್ದ ಕುಮಾರಿ ಎಂಬ ಮಹಿಳೆ ಮನೆ ಮಾಲೀಕ ಇಮ್ತಿಯಾಜ್​ನ ಕಾಟ ತಾಳಲಾರದೆ ಪರಾರಿಯಾಗುವ ಯತ್ನದಲ್ಲಿ ದುರಂತ ಸಾವು ಕಂಡಿದ್ದಳು ಎನ್ನಲಾಗಿತ್ತು.

ಮನೆಯಿಂದ ಪರಾರಿಯಾಗುವ ಯತ್ನದಲ್ಲಿ 6ನೇ ಮಹಡಿಯಿಂದ ಸೀರೆಯೊಂದನ್ನು ಕೆಳಗೆ ಬಿಟ್ಟು, ಅದರ ಮೂಲಕ ಜಾರಿಕೊಂಡು ಬರುವಾಗ, ಸೀರೆ ತುಂಡಾಗಿ ಸೀದಾ ನೆಲಕ್ಕೆ ಬಿದ್ದಿದ್ದಳು. ನಾಲ್ಕಾರು ದಿನಗಳ ಚಿಕಿತ್ಸೆಯ ಬಳಿಕ ಆಕೆ ಮೃತಪಟ್ಟಿದ್ದಳು.

(An 18-year-old girl died in Ernakulam after she slipped and fell from 10th floor)