Naxals Encounter: ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಇಬ್ಬರು ಮಹಿಳೆ ಸೇರಿ 3 ನಕ್ಸಲೀಯರ ಎನ್​ಕೌಂಟರ್

|

Updated on: May 13, 2024 | 5:55 PM

ನಕ್ಸಲೀಯರ ಪೆರಿಮಿಲಿ ದಳದ ಕೆಲವು ಸದಸ್ಯರು ಭಮ್ರಗಡ ತಾಲೂಕಿನ ಕಟ್ರಘಟ್ಟ ಗ್ರಾಮದ ಬಳಿಯ ಅರಣ್ಯದಲ್ಲಿ ಬೀಡುಬಿಟ್ಟಿರುವ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಈ ಕಾರ್ಯಾಚರಣೆಯಲ್ಲಿ ಮೂವರು ನಕ್ಸಲೀಯರನ್ನು ಎನ್​ಕೌಂಟರ್ ಮಾಡಲಾಗಿದೆ.

Naxals Encounter: ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಇಬ್ಬರು ಮಹಿಳೆ ಸೇರಿ 3 ನಕ್ಸಲೀಯರ ಎನ್​ಕೌಂಟರ್
ನಕ್ಸಲ್
Follow us on

ನವದೆಹಲಿ: ಮಹಾರಾಷ್ಟ್ರದ ಗಡ್‌ಚಿರೋಲಿ (Gadchiroli) ಜಿಲ್ಲೆಯಲ್ಲಿ ಇಂದು (ಸೋಮವಾರ) ನಡೆದ ಎನ್‌ಕೌಂಟರ್ (Encounter) ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು (Indian Security Forces) ಮೂವರು ನಕ್ಸಲೀಯರನ್ನು (Naxals) ಹತ್ಯೆಗೈದಿದ್ದು, ಹತ್ಯೆಯಾದ ಮೂವರು ನಕ್ಸಲೀಯರಲ್ಲಿ ಇಬ್ಬರು ಮಹಿಳೆಯರು ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿ-60 ಕಮಾಂಡೋಗಳ 2 ತುಕಡಿಗಳು ಮತ್ತು ಗಡ್ಚಿರೋಲಿ ಪೊಲೀಸರ ವಿಶೇಷ ಯುದ್ಧ ವಿಭಾಗವನ್ನು ತಕ್ಷಣವೇ ಆ ಪ್ರದೇಶದಲ್ಲಿ ಶೋಧಕ್ಕಾಗಿ ಕಳುಹಿಸಲಾಯಿತು.

ನಕ್ಸಲೀಯರ ಪೆರಿಮಿಲಿ ದಳದ ಕೆಲವು ಸದಸ್ಯರು ಭಮ್ರಗಡ ತಾಲೂಕಿನ ಕಟ್ರಘಟ್ಟ ಗ್ರಾಮದ ಬಳಿಯ ಅರಣ್ಯದಲ್ಲಿ ಬೀಡುಬಿಟ್ಟಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನೀಲೋತ್ಪಾಲ್ ಹೇಳಿದ್ದಾರೆ. ಸಿ-60 ಕಮಾಂಡೋಗಳ 2 ತುಕಡಿಗಳು ಮತ್ತು ಗಡ್ಚಿರೋಲಿ ಪೊಲೀಸರ ವಿಶೇಷ ಯುದ್ಧ ವಿಭಾಗವನ್ನು ತಕ್ಷಣವೇ ಈ ಪ್ರದೇಶದಲ್ಲಿ ಶೋಧಕ್ಕಾಗಿ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡ: 18 ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಟ್ಟೆಚ್ಚರ, ರೌಡಿಗಳಿಗೆ ಎಸ್​ಪಿ ವಾರ್ನಿಂಗ್​​​​

ಪೊಲೀಸ್ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ನಕ್ಸಲೀಯರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಸಿ-60 ಸಿಬ್ಬಂದಿ ಪ್ರತಿದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಗುಂಡಿನ ದಾಳಿಯನ್ನು ನಿಲ್ಲಿಸಿದ ನಂತರ, ಆ ಸ್ಥಳದಿಂದ ಪುರುಷ ಮತ್ತು ಇಬ್ಬರು ಮಹಿಳಾ ನಕ್ಸಲೀಯರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರಲ್ಲಿ ಒಬ್ಬನನ್ನು ಪೆರಿಮಿಲಿ ದಳದ ಉಸ್ತುವಾರಿ ಮತ್ತು ಕಮಾಂಡರ್ ವಾಸು ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಎಕೆ-47 ರೈಫಲ್, ಕಾರ್ಬೈನ್, ಐಎನ್‌ಎಸ್‌ಎಎಸ್ ರೈಫಲ್, ನಕ್ಸಲ್ ಸಾಹಿತ್ಯ ಮತ್ತು ಇತರ ವಸ್ತುಗಳು ಪತ್ತೆಯಾಗಿವೆ. ಈ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಛತ್ತೀಸ್​ಗಢದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ, 7 ಮಾವೋವಾದಿಗಳ ಹತ್ಯೆ

ಕೆಲವು ದಿನಗಳ ಹಿಂದೆ, ಛತ್ತೀಸ್‌ಗಢದ ಬಿಜಾಪುರದಲ್ಲಿ ಭದ್ರತಾ ಪಡೆಗಳು 12 ನಕ್ಸಲೀಯರನ್ನು ಹತ್ಯೆ ಮಾಡಿದ್ದರೆ, ಅವರ ತಲೆಗೆ 25 ಲಕ್ಷ ರೂಪಾಯಿಗಳ ಬಹುಮಾನವನ್ನು ಹೊತ್ತಿದ್ದ ಉನ್ನತ ನಕ್ಸಲೀಯ ನಾಯಕ ಶಂಕರ್ ರಾವ್ ಸೇರಿದಂತೆ 29 ನಕ್ಸಲರನ್ನು ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಲಾಯಿತು. ಸ್ಥಳದಿಂದ ಎಕೆ-47 ರೈಫಲ್‌ಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ