Sign In

By signing in or creating an account, you agree with Associated Broadcasting Company's Terms & Conditions and Privacy Policy.

Terrorists Encounter: ಕುಲ್ಗಾಮ್​ನಲ್ಲಿ ಮತ್ತೋರ್ವ ಉಗ್ರನ ಎನ್​ಕೌಂಟರ್; ಮುಂದುವರಿದ ಕಾರ್ಯಾಚರಣೆ

ಜಮ್ಮು ಕಾಶ್ಮೀರದ ಕುಲ್ಗಾಮ್​ ಜಿಲ್ಲೆಯಲ್ಲಿ ಭಾರತೀಯ ಭದ್ರತಾ ಪಡೆಯ ಸಿಬ್ಬಂದಿ ಎನ್​ಕೌಂಟರ್ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಇಂದು ಓರ್ವ ಉಗ್ರನ ಎನ್​ಕೌಂಟರ್ ಮಾಡಲಾಗಿದೆ. ನಿನ್ನೆಯಷ್ಟೇ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿತ್ತು.

Terrorists Encounter: ಕುಲ್ಗಾಮ್​ನಲ್ಲಿ ಮತ್ತೋರ್ವ ಉಗ್ರನ ಎನ್​ಕೌಂಟರ್; ಮುಂದುವರಿದ ಕಾರ್ಯಾಚರಣೆ
ಕುಲ್ಗಾಮ್​ನಲ್ಲಿ ಉಗ್ರರ ಎನ್​ಕೌಂಟರ್
Follow us
ಸುಷ್ಮಾ ಚಕ್ರೆ
|

Updated on: May 08, 2024 | 10:24 PM

ಕುಲ್ಗಾಂ: ಜಮ್ಮು ಕಾಶ್ಮೀರದ ಕುಲ್ಗಾಮ್ (Kulgam) ಜಿಲ್ಲೆಯಲ್ಲಿ ಇಂದು ಮತ್ತೆ ಗುಂಡಿನ ಚಕಮಕಿ ಪುನರಾರಂಭವಾಗಿದೆ. ನಿನ್ನೆಯಷ್ಟೇ ಅಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ( Terrorists Encounter) ಇಬ್ಬರನ್ನು ಕೊಲ್ಲಲಾಗಿತ್ತು. ಇಂದು ಮತ್ತೋರ್ವ ಉಗ್ರನನ್ನು ಎನ್​ಕೌಂಟರ್ ಮಾಡಲಾಗಿದೆ. ಸೋಮವಾರ ಸಂಜೆ ಆರಂಭವಾದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯು ಇನ್ನೂ ಮುಂದುವರೆದಿದೆ.

ಕುಲ್ಗಾಮ್‌ನ ರೆಡ್ವಾನಿ ಪ್ರದೇಶದಲ್ಲಿ ಎನ್‌ಕೌಂಟರ್ ಸೈಟ್‌ನ ಸಮೀಪವಿರುವ ಮನೆಗಳ ಹುಡುಕಾಟದ ಸಮಯದಲ್ಲಿ ಭದ್ರತಾ ಪಡೆಗಳು ಮತ್ತು ಅಲ್ಲಿ ಅಡಗಿದ್ದ ಭಯೋತ್ಪಾದಕನ ನಡುವೆ ಇಂದು ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಹೆಚ್ಚಿನ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ವಾಯುಪಡೆಯ ವಾಹನದ ಮೇಲೆ ಉಗ್ರರ ದಾಳಿ; ಸೇನಾ ಅಧಿಕಾರಿಗಳಿಗೆ ಗಾಯ

ಸೋಮವಾರ ರಾತ್ರಿ (ಮೇ 6) ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಪೊಲೀಸರು ಮತ್ತು ನಾಗರಿಕರ ಹತ್ಯೆಯ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಲಷ್ಕರ್-ಎ-ತೊಯ್ಬಾ ಆಫ್‌ಶೂಟ್ ಟಿಆರ್‌ಎಫ್‌ನ ಉನ್ನತ ಕಮಾಂಡರ್” ಸೇರಿದಂತೆ ಇಬ್ಬರು ಭಯೋತ್ಪಾದಕರನ್ನು ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು.

ಕೊಲ್ಲಲ್ಪಟ್ಟ ಭಯೋತ್ಪಾದಕರಲ್ಲಿ ಒಬ್ಬನನ್ನು “ಎ” ವರ್ಗದ ಭಯೋತ್ಪಾದಕ ಬಸಿತ್ ದಾರ್ ಎಂದು ಗುರುತಿಸಲಾಗಿದೆ. ಆತ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಗೆ ಸೇರಿದವರು ಎಂದು ಕಾಶ್ಮೀರದ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ), ವಿ ಕೆ ಬಿರ್ಧಿ ತಿಳಿಸಿದ್ದಾರೆ.

ಇದನ್ನೂ ಓದಿ: Manipur attack: ಮಣಿಪುರದಲ್ಲಿ ಉಗ್ರರ ಬಾಂಬ್​​ ದಾಳಿ, ಇಬ್ಬರು ಯೋಧರು ಹುತಾತ್ಮ

ಭಯೋತ್ಪಾದಕರಿಗೆ ಶರಣಾಗಲು ಅವಕಾಶ ನೀಡಲಾಗಿತ್ತು. ಆದರೆ ಅವರು ಭದ್ರತಾ ಸಿಬ್ಬಂದಿಯ ಮೇಲೆ ತಮ್ಮ ಗುಂಡಿನ ದಾಳಿಯನ್ನು ಮುಂದುವರೆಸಿದರು ಎಂದು ಬಿರ್ಧಿ ಹೇಳಿದ್ದಾರೆ.

ರೆಡ್ವಾನಿ ಗ್ರಾಮದಲ್ಲಿ ಭಯೋತ್ಪಾದಕರ ಚಲನವಲನದ ಬಗ್ಗೆ ಭದ್ರತಾ ಪಡೆಗಳು ಮಾಹಿತಿ ಪಡೆದ ನಂತರ ಸೋಮವಾರ ರಾತ್ರಿ ಅಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅವರು ಹೇಳಿದ್ದಾರೆ. ಇನ್ನೊಂದು ಕಡೆಯಿಂದ ಗುಂಡಿನ ದಾಳಿ ನಡೆದಿದೆ ಎಂದು ಅಧಿಕಾರಿಯೊಬ್ಬರು ಕುಲ್ಗಾಮ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ