ನಿಜ್ಜರ್ ಹತ್ಯೆ; ಕೆನಡಾದಿಂದ ‘ನಿರ್ದಿಷ್ಟವಾದ ಯಾವುದೇ ಮಾಹಿತಿ’ ಸ್ವೀಕರಿಸಿಲ್ಲ: ಜೈಶಂಕರ್
ನಿಜ್ಜರ್ ಹತ್ಯೆಗಾಗಿ ಐಎಚ್‌ಐಟಿ ಮೂವರು ಭಾರತೀಯ ಪ್ರಜೆಗಳಾದ ಕರಣ್ ಬ್ರಾರ್ (22), ಕಮಲ್‌ಪ್ರೀತ್ ಸಿಂಗ್ (22) ಮತ್ತು 28 ವರ್ಷದ ಕರಣ್‌ಪ್ರೀತ್ ಸಿಂಗ್ ಅವರನ್ನು ಬಂಧಿಸಿದ ಕೆಲವು ದಿನಗಳ ನಂತರ ಅಮನ್‌ದೀಪ್ ಸಿಂಗ್ ಬಂಧನವಾಗಿದೆ. ಎಲ್ಲಾ ಮೂರು ವ್ಯಕ್ತಿಗಳು ಎಡ್ಮಂಟನ್‌ನಲ್ಲಿ ವಾಸಿಸುವ ಭಾರತೀಯ ಪ್ರಜೆಗಳಾಗಿದ್ದು,ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ.
ದೆಹಲಿ ಮೇ 13: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ (Hardeep Singh Nijjar) ಸಂಬಂಧಿಸಿದಂತೆ ಕೆನಡಾದಲ್ಲಿ (Canada) ನಾಲ್ಕನೇ ಭಾರತೀಯ ಪ್ರಜೆಯನ್ನು ಬಂಧಿಸಿರುವ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ (S Jaishankar) ಸೋಮವಾರ ಪ್ರತಿಕ್ರಿಯಿಸಿದ್ದಾರೆ. 22ರ ಹರೆಯದ ಬಂಧಿತ ಶಂಕಿತನನ್ನು ಕೆನಡಾದ ಇಂಟಿಗ್ರೇಟೆಡ್ ಹೋಮಿಸೈಡ್ ಇನ್ವೆಸ್ಟಿಗೇಷನ್ ಟೀಮ್ ಅಥವಾ (IHIT) ಅಮನ್‌ದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಅಧಿಕಾರಿಗಳ ಪ್ರಕಾರ ಈತ ಗ್ರೇಟರ್ ಟೊರೊಂಟೊ ಏರಿಯಾದಲ್ಲಿ ಬ್ರಾಂಪ್ಟನ್ ಅಥವಾ GTA, ಮತ್ತು ಬ್ರಿಟಿಷ್ ಕೊಲಂಬಿಯಾದ ಸರ್ರೆ ಮತ್ತು ಅಬಾಟ್ಸ್‌ಫೋರ್ಡ್ ನಲ್ಲಿದ್ದ.
ಈ ಬೆಳವಣಿಗೆಯ ಬಗ್ಗೆ ಕೇಳಿದಾಗ ಸಚಿವರು ಮತ್ತೊಂದು ಬಂಧನ ಮಾಡಲಾಗಿದೆ ಎಂಬುದನ್ನು ನಾನು ಓದಿ ತಿಳಿದುಕೊಂಡೆ. ಕೆನಡಾದಲ್ಲಿ ಯಾವುದೇ ಘಟನೆ ಅಥವಾ ಹಿಂಸಾಚಾರಕ್ಕೆ ಸಂಬಂಧಿಸಿದ ಯಾವುದೇ ಪುರಾವೆಗಳು ಅಥವಾ ಮಾಹಿತಿ ಇದ್ದರೆ ಭಾರತದಲ್ಲಿ ತನಿಖೆ ಮಾಡಲು ನಾವು ಬಹಳ ಹಿಂದೆಯೇ ಹೇಳಿದ್ದೇವೆ. ಅದರ ತನಿಖೆಗೆ ಮುಕ್ತರಾಗಿದ್ದಾರೆ. ಇಲ್ಲಿಯವರೆಗೆ, ನಮ್ಮ ತನಿಖಾ ಸಂಸ್ಥೆಗಳಿಂದ ತನಿಖೆಗೆ ನಿರ್ದಿಷ್ಟವಾದ ಯಾವುದೇ ಮಾಹಿತಿಯನ್ನು ನಾವು ಸ್ವೀಕರಿಸಿಲ್ಲ” ಎಂದು ಸಚಿವರು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
EAM Jaishankar on 4th arrest in Canada in Nijjar killing: I also read, by consular practice, country of origin is informed. Did not receive any evidence worthy of investing pic.twitter.com/9ZmDj1BPy6
— Sidhant Sibal (@sidhant) May 13, 2024
IHIT ಯ ಹೇಳಿಕೆಯ ಪ್ರಕಾರ, ಶಂಕಿತ ವ್ಯಕ್ತಿ ಅಕ್ರಮ ಬಂದೂಕು ವಶದಲ್ಲಿರಿಸಿದ ಆರೋಪದ ಮೇಲೆ ಒಂಟಾರಿಯೊದಲ್ಲಿ ಪೀಲ್ ಪ್ರಾದೇಶಿಕ ಪೊಲೀಸ್ ಅಥವಾ PRP ವಶದಲ್ಲಿದ್ದನು. “ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಪಾತ್ರ ವಹಿಸಿದವರನ್ನು ಹೊಣೆಗಾರರನ್ನಾಗಿ ಮಾಡಲು ನಮ್ಮ ನಡೆಯುತ್ತಿರುವ ತನಿಖೆಯ ಸ್ವರೂಪವನ್ನು ಈ ಬಂಧನವು ತೋರಿಸುತ್ತದೆ” ಎಂದು IHIT ಯ ಉಸ್ತುವಾರಿ ಅಧಿಕಾರಿ ಸೂಪರಿಂಟೆಂಡೆಂಟ್ ಮಂದೀಪ್ ಮೂಕರ್ ಹೇಳಿದ್ದಾರೆ.
ನಿಜ್ಜರ್ ಹತ್ಯೆಗಾಗಿ ಐಎಚ್‌ಐಟಿ ಮೂವರು ಭಾರತೀಯ ಪ್ರಜೆಗಳಾದ ಕರಣ್ ಬ್ರಾರ್ (22), ಕಮಲ್‌ಪ್ರೀತ್ ಸಿಂಗ್ (22) ಮತ್ತು 28 ವರ್ಷದ ಕರಣ್‌ಪ್ರೀತ್ ಸಿಂಗ್ ಅವರನ್ನು ಬಂಧಿಸಿದ ಕೆಲವು ದಿನಗಳ ನಂತರ ಅಮನ್‌ದೀಪ್ ಸಿಂಗ್ ಬಂಧನವಾಗಿದೆ. ಎಲ್ಲಾ ಮೂರು ವ್ಯಕ್ತಿಗಳು ಎಡ್ಮಂಟನ್‌ನಲ್ಲಿ ವಾಸಿಸುವ ಭಾರತೀಯ ಪ್ರಜೆಗಳಾಗಿದ್ದು,ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ.
ಇದನ್ನೂ ಓದಿ: ಚಿರಾಗ್ ನನ್ನ ಮಗನಿದ್ದಂತೆ, ಆತನೇ ಬಿಹಾರದ ಭವಿಷ್ಯ; ಪ್ರಚಾರದ ವೇಳೆ ಪ್ರಧಾನಿ ಮೋದಿ ಮೆಚ್ಚುಗೆ
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ “ಸಂಭಾವ್ಯ” ಒಳಗೊಳ್ಳುವಿಕೆಯ ಆರೋಪದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿದೆ.
ಭಾರತ ಟ್ರುಡೊ ಆರೋಪಗಳನ್ನು “ಅಸಂಬದ್ಧ” ಮತ್ತು “ಪ್ರಚೋದಿತ” ಎಂದು ತಳ್ಳಿಹಾಕಿದೆ. ನಿಜ್ಜರ್ ಒಬ್ಬ ಖಲಿಸ್ತಾನಿ ಭಯೋತ್ಪಾದಕ ಮತ್ತು ವಿವಿಧ ಭಯೋತ್ಪಾದನಾ ಆರೋಪಗಳ ಮೇಲೆ ಭಾರತದಲ್ಲಿ ವಾಂಟೆಡ್ ವ್ಯಕ್ತಿಯಾಗಿದ್ದ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ