ಕೊರೊನಾ ಮಧ್ಯೆ ಶುಭ ಸುದ್ದಿ ಟ್ವೀಟ್ ಮಾಡಿದ CM ಗೆಹ್ಲೋಟ್!

|

Updated on: May 27, 2020 | 2:13 PM

ಜೈಪುರ: ರಾಜಸ್ಥಾನದಲ್ಲಿ ಮಿಡತೆ ಹಿಂಡುಗಳಿಂದ ರೈತರು ಕಂಗಾಲಾಗಿದ್ದಾರೆ. ಈ ಮಧ್ಯೆ, ಸೃಷ್ಟಿಮೂಲದ ಸಿಹಿ ಸುದ್ದಿಯೊಂದು ಕೇಳಿಬಂದಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿರುವ ಜನ ಇದರಿಂದ ಖುಷಿಪಟ್ಟಿದ್ದಾರೆ. ರಾಜಸ್ಥಾನದ ಸರಿಸ್ಕಾ ಟೈಗರ್ ರಿಸರ್ವ್ (STR) ನಲ್ಲಿ ಇತ್ತೀಚೆಗೆ ಹುಲಿಯೊಂದು ಮೂರು ಮರಿಗಳಿಗೆ ಜನ್ಮ ನೀಡಿದೆ. ಹೀಗಾಗಿ ಅಲ್ಲಿನ ಒಟ್ಟು ಹುಲಿಗಳ ಸಂಖ್ಯೆ 20 ಕ್ಕೆ ಏರಿದೆ. ಹುಲಿ ಸಂರಕ್ಷಣಾವಾದಿಗಳಿಗೆ ಇದು ಒಂದು ಉತ್ತಮ ಸುದ್ದಿಯಾಗಿದೆ. ಹುಲಿಗಳ ಸಂತತಿ ಕಡಿಮೆಯಾಗುತ್ತಿರುವ ಸಮಯದಲ್ಲಿ ಮೂರು ಹುಲಿ ಮರಿಗಳು ಹುಟ್ಟಿರುವುದು ಸಂತಸ ತಂದಿದೆ. ಈ […]

ಕೊರೊನಾ ಮಧ್ಯೆ ಶುಭ ಸುದ್ದಿ ಟ್ವೀಟ್ ಮಾಡಿದ CM ಗೆಹ್ಲೋಟ್!
Follow us on

ಜೈಪುರ: ರಾಜಸ್ಥಾನದಲ್ಲಿ ಮಿಡತೆ ಹಿಂಡುಗಳಿಂದ ರೈತರು ಕಂಗಾಲಾಗಿದ್ದಾರೆ. ಈ ಮಧ್ಯೆ, ಸೃಷ್ಟಿಮೂಲದ ಸಿಹಿ ಸುದ್ದಿಯೊಂದು ಕೇಳಿಬಂದಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿರುವ ಜನ ಇದರಿಂದ ಖುಷಿಪಟ್ಟಿದ್ದಾರೆ. ರಾಜಸ್ಥಾನದ ಸರಿಸ್ಕಾ ಟೈಗರ್ ರಿಸರ್ವ್ (STR) ನಲ್ಲಿ ಇತ್ತೀಚೆಗೆ ಹುಲಿಯೊಂದು ಮೂರು ಮರಿಗಳಿಗೆ ಜನ್ಮ ನೀಡಿದೆ.

ಹೀಗಾಗಿ ಅಲ್ಲಿನ ಒಟ್ಟು ಹುಲಿಗಳ ಸಂಖ್ಯೆ 20 ಕ್ಕೆ ಏರಿದೆ. ಹುಲಿ ಸಂರಕ್ಷಣಾವಾದಿಗಳಿಗೆ ಇದು ಒಂದು ಉತ್ತಮ ಸುದ್ದಿಯಾಗಿದೆ. ಹುಲಿಗಳ ಸಂತತಿ ಕಡಿಮೆಯಾಗುತ್ತಿರುವ ಸಮಯದಲ್ಲಿ ಮೂರು ಹುಲಿ ಮರಿಗಳು ಹುಟ್ಟಿರುವುದು ಸಂತಸ ತಂದಿದೆ.

ಈ ಶುಭ ಸುದ್ದಿಯನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ST-12 ಎಂಬ ಆರು ವರ್ಷದ ಹುಲಿ ಇತ್ತೀಚೆಗೆ ತ್ರಿವಳಿಗಳಿಗೆ ಜನ್ಮ ನೀಡಿದೆ. ಇದು ಮೀಸಲು ಪ್ರದೇಶದಲ್ಲಿನ ಹುಲಿ ಜನಸಂಖ್ಯೆಯನ್ನು 20 ಕ್ಕೆ ಏರಿಸಿದೆ. ಈಗ ಅಲ್ಲಿ 11 ಹೆಣ್ಣು ಹುಲಿ, 5 ಗಂಡು ಹುಲಿಗಳು ಮತ್ತು ಉಳಿದವು ಮರಿಗಳಿವೆ.

Published On - 12:31 pm, Wed, 27 May 20