AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್‌ಕೋಟ್ ಬಳಿ ಸೇತುವೆಯಿಂದ ಬಿದ್ದು ಹೊತ್ತಿ ಉರಿದ ಕಾರು; ಮೂವರು ಸಾವು

ಗುಜರಾತ್ ರಾಜ್ಯದ ರಾಜ್​ಕೋಟ್ ಬಳಿ ಭೀಕರ ಅಪಘಾತವೊಂದು ಸಂಭವಿಸಿದೆ. ಇಂದು ಬೆಳಗ್ಗೆ ಕುಟುಂಬಸ್ಥರು ಹೋಗುತ್ತಿದ್ದ ಕಾರೊಂದು ಅಚಾನಕ್ಕಾಗಿ ಸೇತುವೆಯಿಂದ ಕೆಳಗೆ ಉರುಳಿದೆ. ಇದರಿಂದಾಗಿ 3 ಜನರು ಮೃತಪಟ್ಟಿದ್ದಾರೆ. ಕಾರು ಕೆಳಗೆ ಬಿದ್ದಿದ್ದರೂ ಅವರು ಬದುಕುಳಿಯುವ ಸಾಧ್ಯತೆಯಿತ್ತು. ಆದರೆ, ಆ ಕಾರಿಗೆ ಬೆಖಿ ಹೊತ್ತಿಕೊಂಡಿದೆ. ಇದರಿಂದ ಕಾರಿನಲ್ಲಿದ್ದವರು ಸಜೀವ ದಹನವಾಗಿದ್ದಾರೆ.

ರಾಜ್‌ಕೋಟ್ ಬಳಿ ಸೇತುವೆಯಿಂದ ಬಿದ್ದು ಹೊತ್ತಿ ಉರಿದ ಕಾರು; ಮೂವರು ಸಾವು
Rajkot AccidentImage Credit source: x
ಸುಷ್ಮಾ ಚಕ್ರೆ
|

Updated on:Jan 30, 2026 | 7:54 PM

Share

ರಾಜ್‌ಕೋಟ್, ಜನವರಿ 30: ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಕಾರು ಸೇತುವೆಯಿಂದ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಮೂವರು ಸುಟ್ಟು ಕರಕಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿನ ಗೊಂಡಾಲ್-ಅಟ್ಕೋಟ್ ಹೆದ್ದಾರಿಯಲ್ಲಿ ಬೆಳಿಗ್ಗೆ 5.30ರ ಸುಮಾರಿಗೆ ಕಾರು ಛೋಟಾ ಉದೇಪುರದಿಂದ ಗೊಂಡಾಲ್ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ (Accident) ಸಂಭವಿಸಿದೆ.

ಕಾರು ಸಣ್ಣ ಹೊಳೆಯೊಂದರ ಮೇಲಿನ 8 ಅಡಿ ಎತ್ತರದ ಸೇತುವೆಯ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದು, ಕೆಳಗೆ ಉರುಳಿತು. ಕಾರು ಬಿದ್ದ ತಕ್ಷಣ ಅದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಅದರಲ್ಲಿದ್ದವರು ಒಳಗೆ ಸಿಲುಕಿಕೊಂಡರು. ಇದರಿಂದ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Video: ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ

ಮೃತರ ಸುಟ್ಟ ಶವಗಳನ್ನು ಹೊರತೆಗೆದು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:54 pm, Fri, 30 January 26