ಕೊಳವೆ ಬಾವಿಗೆ ಬಿದಿದ್ದ ಮೂರು ವರ್ಷದ ಬಾಲಕ ಸಾವು!

ಹೈದರಾಬಾದ್: ಕೊಳವೆ ಬಾವಿ ದುರಂತ ಅಂದ ಕೂಡಲೇ ಕಣ್ಮುಂದೆ ಬರೋದೇ ಪುಟ್ಟ ಕಂದಮ್ಮಗಳು. ದೊಡ್ಡವರು ಮಾಡಿದ ಬೇಜವಾಬ್ದಾರಿ ಕೆಲ್ಸಕ್ಕೆ ತೆಲಂಗಾಣದಲ್ಲಿ ಮಗುವೊಂದು ಕೊಳವೆ ಬಾವಿಗೆ ಬಿದ್ದು ಮೃತಪಟ್ಟಿದೆ. ದುಃಖದ ಕಟ್ಟೆಯೊಡೆದಿದೆ.. ಒಡಲಾಳದ ನೋವು ಉಕ್ಕಿ ಉಕ್ಕಿ ಬರ್ತಿದೆ. ಹೆತ್ತ ಕರುಳಿನ ಆಕ್ರಂದನ ಮುಗಿಲು ಮುಟ್ಟಿದೆ. ಆಕಾಶವೇ ಕಳಚಿ ಬಿದ್ದಂತಾಗಿದೆ. ಕಣ್ಮುಂದೆ ಖುಷಿ ಖುಷಿಯಾಗಿ ಆಟ ಆಡ್ಕೊಂಡ್ ಇದ್ದ ಮಗು ಭೂಮಿಯ ಒಡಲು ಸೇರಿದೆ. ಇದ್ರಿಂದ ನೀರು ಹರಿಯಬೇಕಿದ್ದ ಜಾಗದಲ್ಲಿ ಪೋಷಕರು ಕಣ್ಣೀರು ಹರೀತಿದೆ. ಕೊಳವೆ ಬಾವಿಗೆ ಬಿದ್ದ […]

ಕೊಳವೆ ಬಾವಿಗೆ ಬಿದಿದ್ದ ಮೂರು ವರ್ಷದ ಬಾಲಕ ಸಾವು!
Follow us
ಆಯೇಷಾ ಬಾನು
|

Updated on:May 28, 2020 | 2:39 PM

ಹೈದರಾಬಾದ್: ಕೊಳವೆ ಬಾವಿ ದುರಂತ ಅಂದ ಕೂಡಲೇ ಕಣ್ಮುಂದೆ ಬರೋದೇ ಪುಟ್ಟ ಕಂದಮ್ಮಗಳು. ದೊಡ್ಡವರು ಮಾಡಿದ ಬೇಜವಾಬ್ದಾರಿ ಕೆಲ್ಸಕ್ಕೆ ತೆಲಂಗಾಣದಲ್ಲಿ ಮಗುವೊಂದು ಕೊಳವೆ ಬಾವಿಗೆ ಬಿದ್ದು ಮೃತಪಟ್ಟಿದೆ.

ದುಃಖದ ಕಟ್ಟೆಯೊಡೆದಿದೆ.. ಒಡಲಾಳದ ನೋವು ಉಕ್ಕಿ ಉಕ್ಕಿ ಬರ್ತಿದೆ. ಹೆತ್ತ ಕರುಳಿನ ಆಕ್ರಂದನ ಮುಗಿಲು ಮುಟ್ಟಿದೆ. ಆಕಾಶವೇ ಕಳಚಿ ಬಿದ್ದಂತಾಗಿದೆ. ಕಣ್ಮುಂದೆ ಖುಷಿ ಖುಷಿಯಾಗಿ ಆಟ ಆಡ್ಕೊಂಡ್ ಇದ್ದ ಮಗು ಭೂಮಿಯ ಒಡಲು ಸೇರಿದೆ. ಇದ್ರಿಂದ ನೀರು ಹರಿಯಬೇಕಿದ್ದ ಜಾಗದಲ್ಲಿ ಪೋಷಕರು ಕಣ್ಣೀರು ಹರೀತಿದೆ.

ಕೊಳವೆ ಬಾವಿಗೆ ಬಿದ್ದ ಮೂರು ವರ್ಷದ ಬಾಲಕ ಸಾವು! ಹೌದು, ತೆಲಂಗಾಣದ ಮೆದಕ್ ಜಿಲ್ಲೆಯ ಪೊಡ್ಚನಪಲ್ಲಿಯಲ್ಲಿ ದುರಂತವೊಂದು ನಡೆದೋಗಿದೆ. ಸಾಯಿವರ್ಧನ್ ಅನ್ನೋ ಮೂರು ವರ್ಷದ ಬಾಲಕ 17 ಅಡಿ ಆಳದ ಕೊಳವೆ ಬಾವಿಯಲ್ಲಿ ಬಿದ್ದಿದ್ದ. ಸಾಯಿವರ್ಧನ್ ಸೋದರ ಮಾವ ಆಗಿರೋ ಮಂಗಳಿ ಭಿಕ್ಷಪತಿ ಹೊಲದಲ್ಲಿ ಬೋರ್​ವೆಲ್ ಹಾಕಲಾಗ್ತಿತ್ತು. ನಿನ್ನೆ ಬೆಳಗ್ಗೆಯಿಂದ ಮೂರು ಬಾವಿಗಳನ್ನ ಕೊರೆದಿದ್ರೂ ಒಂದರಲ್ಲೂ ನೀರು ಬಂದಿಲ್ಲ. ಹೀಗಾಗಿ ಕೊಳವೆ ಬಾವಿಯನ್ನ ಮುಚ್ಚದೆ ಬಿಟ್ಟಿದ್ರು. ಆಗ ಗೋವರ್ಧನ್ ಹಾಗೂ ನವೀನಾ ದಂಪತಿಯ ಮಗ ಸಾಯಿವರ್ಧನ್ ಸ್ಥಳದಲ್ಲೇ ಆಟವಾಡ್ತಿದ್ದ. ಈ ವೇಳೆ ಏಕಾಏಕಿ ಕೊಳವೆ ಬಾವಿಯೊಳಗೆ ಬಿದ್ದೋಗಿದ್ದಾನೆ.

ಸಂಗಾರೆಡ್ಡಿ ಜಿಲ್ಲೆ ಪಟಾನ್​ಚೆರುಕು ಗ್ರಾಮದ ಗೋವರ್ಧನ್ 4 ತಿಂಗಳ ಹಿಂದೆಯಷ್ಟೇ ಪೊಡ್ಚನಪಲ್ಲಿಗೆ ಬಂದು ನೆಲೆಸಿದ್ರು. ಮೂವರ ಮಕ್ಕಳ ಪೈಕಿ ಸಾಯಿವರ್ಧನ್ ಚಿಕ್ಕವನಾಗಿದ್ದಾನೆ. ಇನ್ನು ಮಗು ಕೊಳವೆಬಾವಿಗೆ ಬೀಳ್ತಿದ್ದಂತೆಯೇ ಸೀರೆ ಇಳಿಬಿಟ್ಟು ಮಗುವನ್ನ ಮೇಲೆತ್ತಲು ಪ್ರಯತ್ನಿಸಲಾಯ್ತು. ಆದ್ರೆ ಈ ವೇಳೆ ಮಣ್ಣು ಕುಸಿದು ಸಾಯಿವರ್ಧನ್ ಇನ್ನಷ್ಟು ಒಳಗೆ ಹೋಗಿದ್ದಾನೆ. ಇದ್ರಿಂದ ವಿಷ್ಯ ತಿಳಿದ ಕೂಡಲೇ ಜಿಲ್ಲಾಧಿಕಾರಿ ಧರ್ಮಾರೆಡ್ಡಿ, ಎಸ್​ಪಿ ಚಂದನ ದಿಪ್ತಿ ಸೇರಿದಂತೆ ಅಧಿಕಾರಿಗಳ ದಂಡೇ ಸ್ಥಳಕ್ಕೆ ಭೇಟಿ ನೀಡ್ತು. ಬಳಿಕ ಮಗವಿನ ರಕ್ಷಣಾ ಕಾರ್ಯಾಚರಣೆಯನ್ನ ಶುರು ಮಾಡಿದ್ರು. ರಾತ್ರಿಯಿಂದಲೂ ರಕ್ಷಣಾ ಕಾರ್ಯಾಚರಣೆ ನಡೆಸಿ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಬಾಲಕನ್ನ ಮೇಲೆತ್ತಿದ್ರು ಆದ್ರೂ ಅಷ್ಟೊತ್ತಿಗಾಗಲೇ ಪುಟ್ಟ ಕಂದ ಉಸಿರು ನಿಲ್ಲಿಸಿತ್ತು.

ನಿರಂತರ 12 ಗಂಟೆಗಳ ಕಾರ್ಯಾಚರಣೆ.. ಬದುಕಲಿಲ್ಲ ಬಾಲಕ..! ರಾತ್ರಿಯಿಡೀ ಪೊಲೀಸರು ಹಾಗೂ ರಕ್ಷಣಾ ತಂಡ ನಿರಂತರ ಕಾರ್ಯಾಚರಣೆ ನಡೆಸಿತ್ತು. ಕೊಳವೆ ಬಾವಿ ಸುತ್ತಲೂ ಅಗೆದು ಬಾಲಕನ್ನ ಹೊರತೆಗೆಯೋದಕ್ಕೆ ಇನ್ನಿಲ್ಲದ ಪ್ರಯತ್ನ ನಡೆಸಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಮಗನಿಗಾಗಿ ಹೆತ್ತವರು ಕಣ್ಣೀರಿಡುತ್ತಲೇ ಕಾಯುತ್ತಿದ್ರು. ಮಗ ಬದುಕಿ ಬರ್ತಾನೆ ಅನ್ನೋ ಆಶಾಭಾವನೆಯಲ್ಲೇ ಇದ್ರು. ಆದ್ರೆ ದೇವರು ಮಾತ್ರ ಕರುಣೆಯೇ ತೋರಲಿಲ್ಲ. 3 ವರ್ಷದ ಬಾಲಕ ಬಾರದ ಲೋಕಕ್ಕೆ ಪಯಣಿಸಿಯಾಗಿದೆ. ಪುತ್ರನ ನೆನೆದು ಹೆತ್ತೊಡಲು ರೋದಿಸುತ್ತಿದೆ.

ಒಟ್ನಲ್ಲಿ, ಎಷ್ಟೇ ಬುದ್ಧಿ ಹೇಳಿದ್ರೂ, ಎಷ್ಟೇ ಎಚ್ಚರಿಸಿದ್ರೂ ಜನರು ಮಾತ್ರ ಅರ್ಥನೇ ಮಾಡಿಕೊಳ್ತಿಲ್ಲ. ದೇಶದಲ್ಲಿ ಪದೇಪದೆ ಕೊಳವೆ ಬಾವಿ ದುರಂತಗಳು ನಡೀತಾನೆ ಇದ್ದಾವೆ. ಎಷ್ಟೋ ಪ್ರಕರಣಗಳಲ್ಲಿ ಕಂದಮ್ಮಗಳು ಭೂಮಾತೆಯ ಮಡಿಲಲ್ಲೇ ಕೊನೆಯುಸಿರೆಳೆದಿವೆ. ಆದ್ರೆ ಸಾಯಿವರ್ಧನ್​ನನ್ನ ದೇವರು ಕಾಪಾಡಲಿ, ಜೀವಂತವಾಗಿ ಹೊರಗೆ ಬರಲಿ ಅಂತ ಪ್ರಾರ್ಥಿಸಿದ್ರೂ ಪ್ರಯೋಜನವಾಗಲೇ ಇಲ್ಲ.

Published On - 6:54 am, Thu, 28 May 20

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್