ಮುಂಬೈ: ಮಾವನ ಮನೆಯವರ ಕಿರುಕುಳ ತಾಳಲಾರದೆ 30 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಗೋವಿಂದ್ ದತ್ತಾತ್ರೇಯ ಕಾಂಬ್ಳೆ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಮಧ್ಯರಾತ್ರಿ ಮಾವನ ಮನೆಯಲ್ಲಿಯೇ ನೇಣಿಗೆ
ಕಾಂಬ್ಳೆ ತನ್ನ ಮಾವನ ಮನೆಯವರ ಕಾಟಕ್ಕೆ ಬೇಸತ್ತು ಭಾನುವಾರ ಮಧ್ಯರಾತ್ರಿ ಚಕುರ್ ತಾಲೂಕಿನ ಯೆಲಂವಾಡಿ ಗ್ರಾಮದಲ್ಲಿರುವ ತನ್ನ ಮಾವನ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಕಾಂಬ್ಳೆ ಕಳೆದ ಐದು ವರ್ಷಗಳಿಂದ ತನ್ನ ಹೆಂಡತಿಯ ಕುಟುಂಬದೊಂದಿಗೇ ವಾಸಿಸುತ್ತಿದ್ದ. ಹೀಗಾಗಿ ತನ್ನ ಪತ್ನಿಯ ಕುಟುಂಬಸ್ಥರು ಆಗಾಗ್ಗೆ ಕಿರುಕುಳ ನೀಡುವುದು, ಅವಮಾನಿಸುವುದು ಮಾಡುತ್ತಿದ್ದರು. ಈ ಕಾಟಕ್ಕೆ ಬೇಸತ್ತ ವ್ಯಕ್ತಿ ಸಾಯಲು ಮುಂದಾಗಿದ್ದ.
ಆತ್ಮಹತ್ಯೆಗೂ ಮುನ್ನ ಆತ ತನ್ನ ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ಹೆಂಡತಿಯ ಕುಟುಂಬಸ್ಥರು ನೀಡುತ್ತಿರುವ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದ. ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಕಾಂಬ್ಳೆಯ ಪತ್ನಿ ಮತ್ತು ಐವರು ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಾಗಿದೆ.
Published On - 12:36 pm, Wed, 22 July 20