ಯುರೋಪ್ ಪ್ರವಾಸದ ಮಧ್ಯೆ ಮೋದಿಯವರ 30 ವರ್ಷ ಹಳೇ ಫೋಟೊ ವೈರಲ್; ಗುರುತೇ ಸಿಕ್ತಿಲ್ಲ, ಪರೇಶ್ ರಾವಲ್ ಅಂತ ಭಾವಿಸಿದ್ದೆ ಎಂದ ನೆಟ್ಟಿಗರು

ಅನೇಕ ಟ್ವಿಟರ್ ಬಳಕೆದಾರರು ಕೂಡಾ ಫೋಟೋದಲ್ಲಿರುವ ವ್ಯಕ್ತಿ ಮೋದಿ ಎಂದು ನಂಬಲು ಕಷ್ಟವಾಯಿತು ಎಂದಿದ್ದಾರೆ. ನಕುಲ್ ಪಾರುಲೇಕರ್ ಎಂಬ ಟ್ವೀಟಿಗರು ನಾನು ಪರೇಶ್ ರಾವಲ್ ಎಂದು ಭಾವಿಸಿದ್ದೆ ಎಂದು ಈ ಫೋಟೊಗೆ ಕಾಮೆಂಟ್ ಮಾಡಿದ್ದಾರೆ.

ಯುರೋಪ್ ಪ್ರವಾಸದ ಮಧ್ಯೆ ಮೋದಿಯವರ 30 ವರ್ಷ ಹಳೇ ಫೋಟೊ ವೈರಲ್; ಗುರುತೇ ಸಿಕ್ತಿಲ್ಲ, ಪರೇಶ್ ರಾವಲ್ ಅಂತ ಭಾವಿಸಿದ್ದೆ ಎಂದ ನೆಟ್ಟಿಗರು
ನರೇಂದ್ರ ಮೋದಿ
Edited By:

Updated on: May 04, 2022 | 1:43 PM

ಪ್ರಧಾನಿ ನರೇಂದ್ರ ಮೋದಿ (PM Narendra  Modi)  ಸದ್ಯ ಯುರೋಪ್ (Europe) ಪ್ರವಾಸದಲ್ಲಿದ್ದಾರೆ. ಮೇ 2 ರಂದು ಜರ್ಮನಿ ತಲುಪಿದ ಮೋದಿ, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ (Olaf Scholz) ಅವರನ್ನು ಭೇಟಿಯಾದರು. ಉಭಯ ನಾಯಕರು ಹವಾಮಾನ ಬದಲಾವಣೆ ಮತ್ತು ಖಂಡದಲ್ಲಿನ ಭೌಗೋಳಿಕ ರಾಜಕೀಯ ಪರಿಸ್ಥಿತಿ ಸೇರಿದಂತೆ ಅಸಂಖ್ಯಾತ ವಿಷಯಗಳನ್ನು ಚರ್ಚಿಸಿದರು. ಈ ಪ್ರವಾಸದ ಮಧ್ಯೆಯೇ ಮೋದಿಯವರ ಹಳೇ ಫೋಟೊವೊಂದು ವೈರಲ್ (Viral) ಆಗಿದೆ. ಜರ್ಮನಿಯಲ್ಲಿ ಪ್ರತಿಮೆಯೊಂದರ ಮುಂದೆ ನಿಂತಿರುವ 30 ವರ್ಷ ಹಳೆಯ ಫೋಟೊ ಇದಾಗಿದ್ದು ಈ ಚಿತ್ರವನ್ನು ಪತ್ರಕರ್ತರೊಬ್ಬರು ಹಂಚಿಕೊಂಡಿದ್ದಾರೆ. ಪತ್ರಕರ್ತ ನವೀನ್ ಕಪೂರ್ ಅವರು ಹಂಚಿಕೊಂಡಿರುವ ಫೋಟೋದಲ್ಲಿ ಮೋದಿ ನೀಲಿ ವಿಂಡ್ ಬ್ರೇಕರ್, ಬಿಳಿ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದಾರೆ. ಸಾಕ್ಸ್ ಜೊತೆಗೆ ಕಪ್ಪು ಶೂ ಹಾಕಿಕೊಂಡಿದ್ದರು. ಅವರ ಟ್ರೇಡ್‌ಮಾರ್ಕ್ ಗಡ್ಡ ಮತ್ತು ಮೀಸೆ ಇಲ್ಲದೆ ಅವರನ್ನು ಗುರುತಿಸಲು ಕಷ್ಟ. ಹಾಗಾಗಿಯೇ ಅನೇಕ ಟ್ವಿಟರ್ ಬಳಕೆದಾರರು ಕೂಡಾ ಫೋಟೋದಲ್ಲಿರುವ ವ್ಯಕ್ತಿ ಮೋದಿ ಎಂದು ನಂಬಲು ಕಷ್ಟವಾಯಿತು ಎಂದಿದ್ದಾರೆ. ನಕುಲ್ ಪಾರುಲೇಕರ್ ಎಂಬ ಟ್ವೀಟಿಗರು ನಾನು ಪರೇಶ್ ರಾವಲ್ ಎಂದು ಭಾವಿಸಿದ್ದೆ ಎಂದು ಈ ಫೋಟೊಗೆ ಕಾಮೆಂಟ್ ಮಾಡಿದ್ದಾರೆ.


ಸಕ್ರಿಯ ರಾಜಕಾರಣಕ್ಕೆ ಸೇರುವ ಮೊದಲು ಮತ್ತು ಗುಜರಾತ್ ಮುಖ್ಯಮಂತ್ರಿಯಾಗುವ ಮೊದಲು, ಮೋದಿ ಅವರು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.


ಸೋಮವಾರ ಬರ್ಲಿನ್‌ನಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ನಂತರ ಭಾರತವು ತನ್ನ ಹವಾಮಾನ ಗುರಿಗಳನ್ನು ಸಾಧಿಸುವುದಕ್ಕೆ ಸಹಾಯ ಮಾಡಲು 10 ಬಿಲಿಯನ್ ಯುರೋಗಳನ್ನು ($ 10.51 ಶತಕೋಟಿ) ಸ್ಕೋಲ್ಜ್ ವಾಗ್ದಾನ ಮಾಡಿದರು. ಉಕ್ರೇನ್-ರಷ್ಯಾ ಯುದ್ಧಕ್ಕೆ ಬಂದಾಗ ಇಬ್ಬರು ನಾಯಕರು ತಮ್ಮ ವಿಧಾನದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರು. ಸ್ಕೋಲ್ಜ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ತಮ್ಮ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರೆ, ಈ ಯುದ್ಧದಲ್ಲಿ ಯಾರೂ ಗೆಲುವು ಸಾಧಿಸುವುದಿಲ್ಲ ಎಂದು ಮೋದಿ ಹೇಳಿದರು.

ಈ ಯುದ್ಧದಲ್ಲಿ ಯಾರೂ ಗೆಲ್ಲುವುದಿಲ್ಲ, ಎಲ್ಲರೂ ಸೋಲುತ್ತಾರೆ ಎಂದು ನಾವು ನಂಬುತ್ತೇವೆ. ನಾವು ಶಾಂತಿಯ ಪರವಾಗಿದ್ದೇವೆ ಎಂದು ಅವರು ಹೇಳಿದರು.ಭಾರತವು ತನ್ನ ಮಿಲಿಟರಿ ಯಂತ್ರಾಂಶದ ದೊಡ್ಡ ಭಾಗವನ್ನು ರಷ್ಯಾದಿಂದ ಖರೀದಿಸುತ್ತದೆ.

ಬುಧವಾರದಂದು ಡೆನ್ಮಾರ್ಕ್, ಐಸ್ಲ್ಯಾಂಡ್, ಫಿನ್ಲ್ಯಾಂಡ್, ಸ್ವೀಡನ್ ಮತ್ತು ನಾರ್ವೆಯ ಪ್ರಧಾನ ಮಂತ್ರಿಗಳೊಂದಿಗೆ ಮೋದಿ ಎರಡನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಹವಾಮಾನ ಬದಲಾವಣೆ, ನವೀಕರಿಸಬಹುದಾದ ಇಂಧನ, ನಾವೀನ್ಯತೆ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಬಾಂಧವ್ಯವನ್ನು ಬಲಪಡಿಸುವ ಕುರಿತು ಚರ್ಚಿಸಿದ ನಂತರ, ಮೋದಿ ಅವರು ಐಸ್‌ಲ್ಯಾಂಡ್‌ನ ಕ್ಯಾಟ್ರಿನ್ ಜಾಕೋಬ್ಸ್‌ಡೋಟ್ಟಿರ್, ನಾರ್ವೆಯ ಜೋನಾಸ್ ಗಹರ್ ಸ್ಟೋರ್, ಫಿನ್‌ಲ್ಯಾಂಡ್‌ನ ಸನ್ನಾ ಮರಿನ್ ಮತ್ತು ಸ್ವೀಡನ್‌ನ ಮ್ಯಾಗ್ಡಲೀನಾ ಆಂಡರ್ಸನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಅವರು ಭಾರತಕ್ಕೆ ಹಿಂದಿರುಗುವ ಹೊತ್ತಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾಗಲಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ