ಭಾರತದಲ್ಲಿ 24ಗಂಟೆಯಲ್ಲಿ 3,06,064 ಹೊಸ ಕೊರೊನಾ ಕೇಸ್​ಗಳು ದಾಖಲು; ಪಾಸಿಟಿವಿಟಿ ರೇಟ್ ಏರಿಕೆ, ಚೇತರಿಕೆ ಪ್ರಮಾಣದಲ್ಲಿ ಇಳಿಕೆ

ಭಾರತದಲ್ಲಿ 24ಗಂಟೆಯಲ್ಲಿ 3,06,064 ಹೊಸ ಕೊರೊನಾ ಕೇಸ್​ಗಳು ದಾಖಲು; ಪಾಸಿಟಿವಿಟಿ ರೇಟ್ ಏರಿಕೆ, ಚೇತರಿಕೆ ಪ್ರಮಾಣದಲ್ಲಿ ಇಳಿಕೆ
ಸಾಂದರ್ಭಿಕ ಚಿತ್ರ

24ಗಂಟೆಯಲ್ಲಿ 493 ಮಂದಿ ಮೃತಪಡುವ ಮೂಲಕ ಒಟ್ಟಾರೆ ಸಾವಿನ ಸಂಖ್ಯೆ 4,89,848ಕ್ಕೇರಿದೆ.ಹಾಗೇ, ಒಂದೇ ದಿನ 2, 43,495 ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 3,68,04,145ಕ್ಕೆ ತಲುಪಿದೆ.

TV9kannada Web Team

| Edited By: Lakshmi Hegde

Jan 24, 2022 | 10:27 AM

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 3,06,064 ಹೊಸ ಕೊವಿಡ್​ 19 ಕೇಸ್​ಗಳು (Covid 19 Cases In India) ದಾಖಲಾಗಿವೆ. ಭಾನುವಾರ 3.33 ಲಕ್ಷ ಕೇಸ್​ಗಳು ದಾಖಲಾಗಿದ್ದವು. ಅದಕ್ಕೆ ಹೋಲಿಸಿದರೆ ಇಂದು ಕಡಿಮೆಯಾಗಿದೆ. ಆದರೆ ದೈನಂದಿನ ಪಾಸಿಟಿವಿಟಿ ರೇಟ್ ಶೇ.​ 20.75ಕ್ಕೆ ಏರಿಕೆಯಾಗಿದ್ದು, ಚೇತರಿಕೆ ದರ ಶೇ.  93.07ಗೆ ಇಳಿದಿದೆ. ವಾರದ ಪಾಸಿಟಿವಿಟಿ ರೇಟ್​  17.03 ರಷ್ಟಿದೆ.  ಹಾಗೇ, ಕಳೆದ 24ಗಂಟೆಯಲ್ಲಿ 439 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಭಾರತದಲ್ಲಿ ಕೊವಿಡ್​ 19 ಸೋಂಕಿತರ ಸಂಖ್ಯೆ ಒಟ್ಟಾರೆ 3,95,43,328 ಕ್ಕೆ ತಲುಪಿದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 22,49,335ಕ್ಕೆ ಏರಿದೆ. ಕಳದೆ 241 ದಿನಗಳಲ್ಲೇ ಇದು ಅತ್ಯಂತ ಹೆಚ್ಚಿನ ಸಕ್ರಿಯ ಪ್ರಕರಣಗಳು ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

24ಗಂಟೆಯಲ್ಲಿ 493 ಮಂದಿ ಮೃತಪಡುವ ಮೂಲಕ ಒಟ್ಟಾರೆ ಸಾವಿನ ಸಂಖ್ಯೆ 4,89,848ಕ್ಕೇರಿದೆ.ಹಾಗೇ, ಒಂದೇ ದಿನ 2, 43,495 ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 3,68,04,145ಕ್ಕೆ ತಲುಪಿದೆ. ಇನ್ನೊಂದೆಡೆ ದೇಶದಲ್ಲಿ ಕೊವಿಡ್​ 19 ಲಸಿಕೆ ನೀಡಿಕೆ ಕೂಡ ವೇಗವಾಗಿ ಸಾಗುತ್ತಿದೆ. ಇದುವರೆಗೆ ದೇಶದಲ್ಲಿ 162.26 ಕೋಟಿ ಡೋಸ್​ ಕೊವಿಡ್ 19 ಲಸಿಕೆ ನೀಡಲಾಗಿದೆ ಮತ್ತು ಕಳೆದ 24ಗಂಟೆಯಲ್ಲಿ 14,74,753  ಮಾದರಿಗಳನ್ನು ಕೊವಿಡ್​ 19 ಟೆಸ್ಟ್​ಗೆ ಒಳಪಡಿಸಲಾಗಿದೆ. ಅಲ್ಲಿಗೆ ಒಟ್ಟಾರೆ 71.69 ಕೋಟಿ ಜನರಿಗೆ ಇದುವರೆಗೂ ಕೊರೊನಾ ಟೆಸ್ಟ್ ಮಾಡಿದಂತಾಗಿದೆ.

ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ ರಾಜ್ಯದಲ್ಲಿ ನಿನ್ನೆ ಬರೋಬ್ಬರಿ 50,210 ಕೊರೊನಾ ಕೇಸ್​ಗಳು ದಾಖಲಾಗಿದ್ದು, ಸೋಂಕಿತರ ಒಟ್ಟು ಸಂಖ್ಯೆ 35,17,682ಕ್ಕೆ ತಲುಪಿದೆ. ಹಾಗೇ, 19 ಜನರು ಸೋಂಕಿನಿಂದ ಸಾವನಪ್ಪಿದ್ದು, ಒಟ್ಟಾರೆ ಮೃತರ ಸಂಖ್ಯೆ 38,582 ಆಗಿದೆ. ಕಳೆದ 2021ರ ಮೇ 5ರಂದು 50,112 ಹೊಸ ಪ್ರಕರಣಗಳು ದಾಖಲಾಗಿದ್ದವರು. ಆಗ ಮೃತಪಟ್ಟವರು 346 ಮಂದಿ ಆಗಿದ್ದರು. ಅದಾದ ಬಳಿಕ ನಿನ್ನೆಯೇ 50 ಸಾವಿರದ ಗಡಿ ದಾಟಿದೆ. ಆದರೆ ಸಾವಿನ ಸಂಖ್ಯೆ ತುಂಬ ಕಡಿಮೆ ಇದೆ ಎಂದು ರಾಜ್ಯ ಆರೋಗ್ಯ ಇಲಾಖೆ ವಿಶ್ಲೇಷಿಸಿದೆ.  ಸದ್ಯ ರಾಜ್ಯದಲ್ಲಿ 3,57,796 ಸಕ್ರಿಯ ಪ್ರಕರಣಗಳು ಇದ್ದು, ಒಟ್ಟಾರೆ ಚೇತರಿಕೆ ಕಂಡವರ ಸಂಖ್ಯೆ 31,21,274 ಆಗಿದೆ. ಕೇರಳ, ತಮಿಳುನಾಡು ಸೇರಿ ಇನ್ನೂ ಹೆಲವು ರಾಜ್ಯಗಳಲ್ಲಿ ಕೂಡ ಕೊರೊನಾ  ಹರಡುವಿಕೆ ಮಿತಿಮೀರಿದೆ.

ಭಾರತದಲ್ಲಿ ಕೊವಿಡ್ 19 ಸೋಂಕಿತರ ಸಂಖ್ಯೆ 2020ರ ಆಗಸ್ಟ್​ನಲ್ಲಿ 20 ಲಕ್ಷದ ಗಡಿ ದಾಟಿತ್ತು. ಅದಾದ ನಂತರ ಆಗಸ್ಟ್​ 23ರಂದು 30 ಲಕ್ಷ, ಸೆಪ್ಟೆಂಬರ್​ 5ರಂದು40 ಲಕ್ಷ, ಸೆಪ್ಟೆಂಬರ್ 16ರಂದು  50 ಲಕ್ಷ ತಲುಪಿದೆ. ಬಳಿಕ ಅದರ ವೇಗ ಇನ್ನೂ ಹೆಚ್ಚಾಗಿ, ಸೆಪ್ಟೆಂಬರ್​ 28ರಂದು ದೇಶದಲ್ಲಿ ಸೋಂಕಿತರ ಸಂಖ್ಯೆ 60 ಲಕ್ಷದ ಗಡಿ ದಾಟಿತ್ತು. ಹಾಗೇ, ಅಕ್ಟೋಬರ್ 11ರಂದು 70 ಲಕ್ಷ, ಅಕ್ಟೋಬರ್​ 29ರಂದು 80 ಲಕ್ಷ, ನವೆಂಬರ್​ 20ರಂದು 90 ಲಕ್ಷದ ಗಡಿ ದಾಟಿ, 2020ರ ಡಿಸೆಂಬರ್​ 19ರಂದು ಒಂದು ಕೋಟಿಗೆ ತಲುಪಿದೆ. ಅದಾದ ನಂತರ 2021ರ ಮೇ 4ರಂದು ಎರಡು ಕೋಟಿ ಮತ್ತು ಜೂನ್​ 23ರಂದು 3 ಕೋಟಿಗೆ ಬಂದು ನಿಂತಿದೆ.

ಇದನ್ನೂ ಓದಿ: ಮೈಸೂರಿನ ಕೆರೆಗಳಲ್ಲಿ ಅತಿಥಿಗಳ ಕಲರವ; ಚಳಿಗಾಲವೆಂದು ಮಂಗೋಲಿಯ, ರಷ್ಯಾದಿಂದ ಹಾರಿಬಂದ ಹೆಬ್ಬಾತುಗಳು

Follow us on

Related Stories

Most Read Stories

Click on your DTH Provider to Add TV9 Kannada