ದೆಹಲಿ: ದೇಶದಲ್ಲಿ ಕೊರೊನಾ( Corona) ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ನಾಲ್ಕನೇ ಅಲೆ ಭಯವನ್ನು ಮತ್ತಷ್ಟು ಹೆಚ್ಚು ಮಾಡಿದೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 3,451 ಜನರಿಗೆ ಕೊರೊನಾ ದೃಢಪಟ್ಟಿದ್ದು, ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾಗೆ 40 ಜನರು ಬಲಿಯಾಗಿದ್ದಾರೆ, 20,635 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಶನಿವಾರದಂದು ದೇಶದಲ್ಲಿ 3805 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು, ಒಟ್ಟಾರೆ ಪ್ರಕರಣಗಳಲ್ಲಿ ಶೇ.0.5ರಷ್ಟು ಸಕ್ರಿಯ ಪ್ರಕರಣಗಳಿವೆ. ಚೇತರಿಕೆ ಪ್ರಮಾಣ ಶೇ.98.74ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 3079ಮಂದಿ ಗುಣಮುಖರಾಗಿದ್ದಾರೆ ಇದುವರೆಗೆ 4,25,57,495 ಮಂದಿ ಚೇತರಿಸಿಕೊಂಡಿದ್ದಾರೆ. ನಿತ್ಯದ ಪಾಸಿಟಿವಿಟಿ ದರ ಶೇ.0.96ರಷ್ಟಿದೆ, ವಾರದ ಪಾಸಿಟಿವಿಟ ದರ ಶೇ.0.84 ರಷ್ಟಿದೆ.
ಒಂದು ದಿನದಲ್ಲಿ 3,60,613 ಮಂದಿಗೆ ಪರೀಕ್ಷೆ ಮಾಡಲಾಗಿದ್ದು, ಇದುವರೆಗೆ 84.06 ಕೋಟಿ ಮಂದಿಯ ಮಾದರಿಯನ್ನು ಪರೀಕ್ಷಿಸಲಾಗಿದೆ. ಇದುವರೆಗೆ 190.20ರಷ್ಟು ಲಸಿಕೆಗಳನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕೊರೊನಾದ ಸಾಮಾನ್ಯ ಲಕ್ಷಣಗಳು ಶೀತ ಮತ್ತು ಜ್ವರ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಅದರ ಜೊತೆಗೆ ಜ್ವರ, ತಲೆನೋವು, ವಾಸನೆಯ ನಷ್ಟ, ನೋಯುತ್ತಿರುವ ಗಂಟಲು, ಮೂಗು ಸೋರುವಿಕೆ ಮುಂತಾದ ರೋಗ ಲಕ್ಷಣಗಳು ಇರುತ್ತವೆ. ಇದಲ್ಲದೆ, ಜನರು ದೇಹ ನೋವು, ಚರ್ಮದ ದದ್ದುಗಳು, ಕಣ್ಣುಗಳಲ್ಲಿ ಸುಡುವಿಕೆ ಮತ್ತು ಕೆಂಪು ಬಣ್ಣ, ಎದೆ ನೋವು, ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳನ್ನು ಕೂಡ ಅನುಭವಿಸುತ್ತಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ