ಪೊಲೀಸ್ ವಾಹನ ಇಂಧನವಿಲ್ಲದ ಕಾರಣ ಮಧ್ಯದಾರಿಯಲ್ಲಿ ಕೆಟ್ಟಿ ನಿಂತಿತ್ತು, ಬಳಿಕ ಅಲ್ಲಿದ್ದ ಆರೋಪಿಗಳೇ ನ್ಯಾಯಾಲಯದವರೆಗೆ ಕಾರನ್ನು ತಳ್ಳಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದಲ್ಲಿ ಮದ್ಯ ನಿಷೇಧವಿದ್ದರೂ ಕೂಡ ಯಾವುದೇ ಮೂಲದಿಂದ ಜನರು ಮದ್ಯ ಖರೀದಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದರು.
ದಾರಿ ಮಧ್ಯೆ ವಾಹನದ ಇಂಧನ ಖಾಲಿಯಾಗಿತ್ತು ಹೀಗಾಗಿ ನ್ಯಾಯಾಲಯದವರೆಗೆ ಆರೋಪಿಗಳು ಕಾರನ್ನು ತಳ್ಳಿರುವ ಘಟನೆ ವರದಿಯಾಗಿದೆ.
ವಿಡಿಯೋದಲ್ಲಿ ಕೈದಿಗಳು ತಮ್ಮ ಸೊಂಟಕ್ಕೆ ಹಗ್ಗಗಳನ್ನು ಕಟ್ಟಿಕೊಂಡು, ಪೊಲೀಸ್ ಅಧಿಕಾರಿಯ ಮಾರ್ಗದರ್ಶನದಲ್ಲಿ ವಾಹನವನ್ನು ತಳ್ಳುತ್ತಿರುವುದನ್ನು ತೋರಿಸುತ್ತದೆ.
ಎಲ್ಲಾ ನಾಲ್ವರನ್ನು ಭಾಗಲ್ಪುರದ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು, ಆದರೆ ಮದ್ಯವ್ಯಸನಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನವೇ ಅಬಕಾರಿ ಇಲಾಖೆ ವಾಹನ ಮಧ್ಯದಲ್ಲೇ ನಿಂತಿತ್ತು. ಬಹಳ ಪ್ರಯತ್ನದ ನಂತರ ಆರೋಪಿಗಳು ಮತ್ತು ಪೊಲೀಸ್ ವಾಹನ ಎರಡೂ ಸಿವಿಲ್ ನ್ಯಾಯಾಲಯವನ್ನು ತಲುಪಿದವು.
ಮತ್ತಷ್ಟು ಓದಿ: ಬಿಟ್ ಕಾಯಿನ್ ಪ್ರಕರಣ: ಆರೋಪಿಗಳು ಸಿಐಡಿ ವಶಕ್ಕೆ
ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಷ್ಟರಲ್ಲಿ ಯಾರೋ ದಾರಿಯಲ್ಲಿ ಅವರ ವಿಡಿಯೋ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಕೆಲವರು ಕಮೆಂಟ್ ಮಾಡಿದ್ದಾರೆ ಒಬ್ಬರು ಆರೋಪಿಗಳ ಕೈಲಿ ಇಂತಹ ಕೆಲಸಗಳನ್ನು ಮಾಡಿಸುವುದು ತಪ್ಪು ಎಂದು ಹೇಳಿದ್ದರೆ ಇನ್ನೂ ಕೆಲವರು ಆರೋಪಿಗಳು ತಪ್ಪಿಸಿಕೊಂಡು ಹೋಗಿದ್ದರೆ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದ್ದಾರೆ.
ಕಾರು ತಳ್ಳಿದ ಆರೋಪಿಗಳು
Inmates were pushing the Bihar Police vehicle while being taken to court because it ran out of petrol. 🤣pic.twitter.com/nji0cVAFD0
— Divya Gandotra Tandon (@divya_gandotra) February 4, 2024
ಆದರೆ ಅದಕ್ಕೆಲ್ಲದಕ್ಕೂ ಪೊಲೀಸರು ಉತ್ತರ ನೀಡಿಲ್ಲ ಆದರೆ ಅವರು ಮದ್ಯಪಾನ ಮಾಡಿದ್ದ ಕಾರಣ ಓಡುವ ಸ್ಥಿತಿಯಲ್ಲಿರುವುದಿಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ