ಮುಂಬೈ: ಕಳೆದ 15 ವರ್ಷಗಳಿಂದ ಬಂದ್ ಆಗಿರುವ ಆಸ್ಪತ್ರೆಯೊಂದರಲ್ಲಿ 4 ಶವಗಳು ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಮುಂಬೈನ ಕಂಡಿವಾಲಿ ಪ್ರದೇಶದಲ್ಲಿರುವ ಈ ಆಸ್ಪತ್ರೆಯನ್ನು 15 ವರ್ಷಗಳ ಹಿಂದೆಯೇ ಮುಚ್ಚಲಾಗಿದ್ದು, ಒಂದೇ ಕುಟುಂಬದ ಮೂವರು ಸೇರಿ ಒಟ್ಟು ನಾಲ್ಕು ಮಂದಿಯ ಶವ ಪತ್ತೆಯಾಗಿದೆ.
ಕಳೆದ 15 ವರ್ಷಗಳಿಂದ ಆ ಆಸ್ಪತ್ರೆಯ ಕಡೆ ಯಾರೂ ಬರುತ್ತಿರಲಿಲ್ಲ, ಅಲ್ಲಿಯೇ ಕುಟುಂಬ ಒಂದು ವಾಸಿಸುತ್ತಿತ್ತು.
ಮುಚ್ಚಿದ್ದ ಆಸ್ಪತ್ರೆಯ ಕಟ್ಟಡದೊಳಗೆ ಕುಟುಂಬವೊಂದು ನೆಲೆಸಿತ್ತು, ಆಸ್ಪತ್ರೆಯಲ್ಲಿ ನಾಲ್ಕು ಸೂಸೈಡ್ ನೋಟ್ ಪತ್ತೆಯಾಗಿದೆ. ಇಬ್ಬರು ಮಹಿಳೆಯರ ಶವ ಎರಡನೇ ಮಹಡಿಯಲ್ಲಿ ರಕ್ತಸಿಕ್ತ ರೀತಿಯಲ್ಲಿ ಪತ್ತೆಯಾಗಿವೆ.
ಮೊದಲೇ ಮಹಡಿಯಲ್ಲಿ ಇಬ್ಬರು ಪುರುಷರು ನೇಣುಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತಪಟ್ಟವರನ್ನು ಕಿರಣ್ ದಾಲ್ವಿ, ಅವರ ಇಬ್ಬರು ಹೆಣ್ಣುಮಕ್ಕಳಾದ ಮುಸ್ಕಾನ್, ಭೂಮಿ ಹಾಗೂ ಮತ್ತೊಬ್ಬರು ಶಿವದಯಾಲ್ ಸೇನೆ ಎಂಬುದು ತಿಳಿದುಬಂದಿದೆ.
ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ, ತನಿಖೆಯನ್ನು ಮುಂದುವರೆಸಿದ್ದಾರೆ, ನಿಜವಾಗಿಯೂ ಇದು ಆತ್ಮಹತ್ಯೆಯೇ ಅಥವಾ ಕೊಲೆ ಮಾಡಿರಬಹುದೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಸಾವಿನ ಬಗ್ಗೆ ಏನಾದರೂ ಕುರುಹು ಸಿಗಬಹುದು ಎಂದು ಇಡೀ ಆಸ್ಪತ್ರೆಯನ್ನು ಪೊಲೀಸರು ಹುಡುಕುತ್ತಿದ್ದಾರೆ.