ಉತ್ತರಾಖಂಡದ ನೈನಿತಾಲ್‌ನಲ್ಲಿ ಆಳವಾದ ಕಂದಕಕ್ಕೆ ಬಸ್ ಬಿದ್ದು 4 ಜನ ಸಾವು, 24 ಮಂದಿಗೆ ಗಾಯ

|

Updated on: Dec 25, 2024 | 4:55 PM

ಉತ್ತರಾಖಂಡದ ನೈನಿತಾಲ್‌ನಲ್ಲಿ ಬಸ್ ಕಂದಕಕ್ಕೆ ಬಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ, 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಉತ್ತರಾಖಂಡದ ಭೀಮತಾಲ್ ಪಟ್ಟಣದ ಬಳಿ ಇಂದು ಬಸ್ ಕಮರಿಗೆ ಬಿದ್ದ ಪರಿಣಾಮ ಈ ದುರ್ಘಟನೆ ನಡೆದಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಅಲ್ಮೋರಾದಿಂದ ಹಲ್ದ್ವಾನಿಗೆ ತೆರಳುತ್ತಿದ್ದ ಬಸ್ ಭೀಮತಾಲ್ ಬಳಿ ನಿಯಂತ್ರಣ ತಪ್ಪಿ 1,500 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಇದರಿಂದ ಅನೇಕ ಪ್ರಯಾಣಿಕರು ಬಸ್‌ನಿಂದ ಕೆಳಕ್ಕೆ ಹಾರಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಉತ್ತರಾಖಂಡದ ನೈನಿತಾಲ್‌ನಲ್ಲಿ ಆಳವಾದ ಕಂದಕಕ್ಕೆ ಬಸ್ ಬಿದ್ದು 4 ಜನ ಸಾವು, 24 ಮಂದಿಗೆ ಗಾಯ
Uttarakhand Accident
Follow us on

ನೈನಿತಾಲ್: ಉತ್ತರಾಖಂಡದ ನೈನಿತಾಲ್‌ನಲ್ಲಿ ಇಂದು ಬಸ್ ಸುಮಾರು 1,500 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮದಿಂದ 24 ಜನರು ಗಾಯಗೊಂಡಿದ್ದಾರೆ. ಉತ್ತರಾಖಂಡ ರಾಜ್ಯದ ಭೀಮತಾಲ್ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ಈ ಘಟನೆಯ ನಂತರ, ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಪರಿಹಾರ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಸಂತ್ರಸ್ತರಿಗೆ ಸಹಾಯ ಮಾಡಲು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡವು ಸ್ಥಳೀಯ ಪೋಲೀಸ್, ಅಗ್ನಿಶಾಮಕ ದಳ ಮತ್ತು ಸ್ಥಳೀಯ ನಿವಾಸಿಗಳು ಧಾವಿಸಿದ್ದಾರೆ.

ನೈನಿತಾಲ್ ಜಿಲ್ಲೆಯ ಭೀಮತಾಲ್‌ನಲ್ಲಿ ರಸ್ತೆ ಮಾರ್ಗದ ಬಸ್ ಹಳ್ಳಕ್ಕೆ ಬಿದ್ದಿದೆ. ಸ್ಥಳಕ್ಕಾಗಮಿಸಿದ ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಗಾಯಾಳುಗಳನ್ನು ಕಂದಕದಿಂದ ಹೊರತೆಗೆದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಪ್ರಕಾರ ಬಸ್ ನಲ್ಲಿ 20ರಿಂದ 25 ಮಂದಿ ಇದ್ದರು.


ಇದನ್ನೂ ಓದಿ: ಗುಜರಾತ್: ಕಂಬಕ್ಕೆ ಡಿಕ್ಕಿ ಹೊಡೆದು ಕಣಿವೆಗೆ ಉರುಳಿದ ಬಸ್, ಮೂವರು ಸಾವು, 25 ಜನರಿಗೆ ಗಾಯ

ಈ ಅಪಘಾತದ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ. “ಭೀಮತಾಲ್ ಬಳಿ ಬಸ್ ಅಪಘಾತದ ಸುದ್ದಿ ತುಂಬಾ ದುಃಖಕರವಾಗಿದೆ. ತಕ್ಷಣದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸ್ಥಳೀಯ ಆಡಳಿತಕ್ಕೆ ನಿರ್ದೇಶನ ನೀಡಲಾಗಿದೆ. ಎಲ್ಲಾ ಪ್ರಯಾಣಿಕರ ಸುರಕ್ಷತೆಗಾಗಿ ನಾನು ಬಾಬಾ ಕೇದಾರ್‌ನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಸಿಎಂ ಎಕ್ಸ್‌ನಲ್ಲಿ ಬರೆದಿದ್ದಾರೆ.


ಬಸ್ ಪಿಥೋರಗಢದಿಂದ ಹಲ್ದ್ವಾನಿಗೆ ಹೋಗುತ್ತಿದ್ದಾಗ ಭೀಮತಾಲ್ ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರಲ್ಲಿ ಒಬ್ಬ ಮಹಿಳೆ ಮತ್ತು ಇಬ್ಬರು ಪುರುಷರು ಇದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: 2 ಕಾರುಗಳ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರು ದುರ್ಮರಣ

ಇದು ಇಂದಿನ ಎರಡನೇ ದೊಡ್ಡ ಅಪಘಾತವಾಗಿದೆ. ಬೆಳಗ್ಗೆ ಬಾಗೇಶ್ವರದಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದ ಬಸ್ಸೊಂದು ರಿಷಿಕೇಶ-ಡೆಹ್ರಾಡೂನ್ ರಸ್ತೆಯ ಸಾತ್ ಮೋರ್ ಬಳಿ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಬಸ್ಸಿನಲ್ಲಿ ಒಟ್ಟು 45 ಶಾಲಾ ಬಾಲಕಿಯರಿದ್ದರು. ಎಲ್ಲಾ ಹುಡುಗಿಯರು ಖೇಲ್ ಮಹಾಕುಂಭದಲ್ಲಿ ಭಾಗವಹಿಸಲು ಡೆಹ್ರಾಡೂನ್‌ಗೆ ಹೋಗುತ್ತಿದ್ದರು.

ಹಾಗೇ, ನವೆಂಬರ್ 4ರಂದು ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿ ಒಂದು ದೊಡ್ಡ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ 38 ಮಂದಿ ಸಾವನ್ನಪ್ಪಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ