ದೆಹಲಿ: ಕಳೆದ 24 ಗಂಟೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಕೊವಿಡ್ ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಪ್ರತಿದಿನ 3 ಲಕ್ಷಕ್ಕಿಂತ ಕಡಿಮೆ ಕೊವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಮಾರ್ಚ್ ಮಧ್ಯಭಾಗದಲ್ಲಿ 7 ಲಕ್ಷ ಕೊವಿಡ್ ಟೆಸ್ಟ್ ಮಾಡಲಾಗುತ್ತಿತ್ತು. ಆದರೆ ಈಗ ಪ್ರತಿದಿನ 18 ಲಕ್ಷಕ್ಕೂ ಹೆಚ್ಚು ಟೆಸ್ಟ್ ಮಾಡಲಾಗುತ್ತಿದೆ. ಕಳೆದ ಒಂದು ವಾರದಿಂದ ದೇಶದಲ್ಲಿ ಕೊವಿಡ್ ಪಾಸಿಟಿವಿಟಿ ದರ ಕುಸಿದಿದೆ. ಕೊವಿಡ್ ಸೋಂಕಿನ ಹರಡುವಿಕೆಯಲ್ಲಿ ಇಳಿಮುಖವಾಗುವ ಇದೇ ಟ್ರೆಂಟ್ ಮುಂದುವರೆಯಬೇಕು ಎಂದು ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದರು.
ಭಾರತದ ಒಟ್ಟಾರೆ ಕೊವಿಡ್ ಚೇತರಿಕೆ ಪ್ರಕರಣಗಳ ಸಂಖ್ಯೆ ಇಂದು 2,15,96,512 ಕ್ಕೆ ತಲುಪಿದೆ. ರಾಷ್ಟ್ರೀಯ ಚೇತರಿಕೆ ದರವು ಮತ್ತಷ್ಟು ಸುಧಾರಿಸಿ ಶೇಕಡಾ 85. 60ಕ್ಕೆ ತಲುಪಿದೆ. ಕೊವಿಡ್ ಸೋಂಕಿನ ಹೊಸ ಚೇತರಿಕೆ ಪ್ರಕರಣಗಳಲ್ಲಿ ಹತ್ತು ರಾಜ್ಯಗಳು ಶೇಕಡಾ75.77 ರಷ್ಟು ಪಾಲು ಹೊಂದಿವೆ. ರಾಷ್ಟ್ರವ್ಯಾಪಿ 3ನೇ ಹಂತದ ಲಸಿಕೆ ಅಭಿಯಾನದ ಅಡಿಯಲ್ಲಿ ದೇಶದಲ್ಲಿ ನೀಡಲಾದ ಕೊವಿಡ್-19 ಲಸಿಕೆ ಡೋಸ್‌ಗಳ ಸಂಖ್ಯೆ ಇಂದು ಸುಮಾರು 18.44 ಕೋಟಿಗೆ ತಲುಪಿದೆ. ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರತಿಯೊಂದು ಹಳ್ಳಿಯಲ್ಲಿಯೂ ಜನಸಾಮಾನ್ಯರಿಗೆ ದೊರೆಯುವಂತೆ ಪಲ್ಸ್ ಆಕ್ಸಿಮೀಟರ್ನ ವ್ಯವಸ್ಥೆ ಇರಬೇಕು. ಶೇಕಡಾ 94ಕ್ಕಿಂತ ಕಡಿಮೆ ಸ್ಯಾಚುರೇಷನ್ ಇದ್ದರೆ ತಕ್ಷಣವೇ ಆಸ್ಪತ್ರೆಗೆ ಸೇರಿಸಬೇಕು ಎಂದು ಅವರು ಸೂಚಿಸಿದರು.
ಸದ್ಯ ಮಕ್ಕಳಲ್ಲಿ ಕೊರೊನಾ ಸೋಂಕಿನ ಲಕ್ಷಣ ಗಂಭೀರವಾಗಿರಲ್ಲ. ಮಕ್ಕಳಲ್ಲಿ ಕೊವಿಡ್ ಕಂಡುಬಂದರೂ ಸಾವು ಆಗದಿದ್ದರೆ ಗುರುತಿಸಲು ಸವಾಲು ಉಂಟಾಗಲಿದೆ. ಸಾವು ಉಂಟಾದಲ್ಲಿ ಸಾವು ವರದಿ ಯಾವುದೇ ಕಾರಣಕ್ಕೂ ಮುಚ್ಚಿಡದೇ ವರದಿ ಮಾಡಲು ರಾಜ್ಯಗಳಿಗೆ ಸೂಚನೆ ನೀಡಿದ್ದೇವೆ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 4,329 ಸಾವುಗಳು ವರದಿಯಾಗಿವೆ. ಸದ್ಯ ರಾಷ್ಟ್ರೀಯ ಮರಣ ದರವು ಶೇಕಡಾ1.10 ರಷ್ಟಿದೆ. ಹೊಸ ಸಾವುಗಳಲ್ಲಿ ಹತ್ತು ರಾಜ್ಯಗಳ ಪಾಲು ಶೇಕಡಾ 75.98ರಷ್ಟಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಸಾವುನೋವುಗಳು ಸಂಭವಿಸಿವೆ. ಕರ್ನಾಟಕವು 476 ದೈನಂದಿನ ಸಾವುಗಳೊಂದಿಗೆ ನಂತರದ ಸ್ಥಾನದಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ಕೊವಿಡ್ ಸಾವಿನ ಸಂಖ್ಯೆಯಲ್ಲಿ ವ್ಯತ್ಯಾಸ; ಬಿಹಾರ ಸರ್ಕಾರಕ್ಕೆ ಪಾಟ್ನಾ ಹೈಕೋರ್ಟ್ ತರಾಟೆ
ಕೊವಿಡ್-19 ಮಹಾಮಾರಿ ವಯಸ್ಕರಲ್ಲಿ ಖಿನ್ನತೆ, ಹತಾಶೆ, ಒಂಟಿತನದಂಥ ಮಾನಸಿಕ ಅಸ್ವಸ್ಥತೆಗಳನ್ನು ಸೃಷ್ಟಿಸುತ್ತಿದೆ
(4 lakh covid patients recovered in last 24 hours this trend must continue says union health ministry Luv Agarwal)
Published On - 5:26 pm, Tue, 18 May 21