ದೆಹಲಿ: ದೇಶದಲ್ಲಿ ದಿನೇದಿನೆ ಕೊವಿಡ್ ಸೋಂಕಿತರ ಸಂಖ್ಯೆ ಏರುತ್ತಿದೆ. ಅದರೊಂದಿಗೆ ಸೋಂಕಿನಿಂದ ಸಾಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದೀಗ ಕಳೆದ 24ಗಂಟೆಯಲ್ಲಿ 4187 ಮಂದಿ ಕೊವಿಡ್ 19 ಸೋಂಕಿನಿಂದ ಸಾವನ್ನಪ್ಪಿದ್ದು, ಒಂದು ಹೊಸ ದಾಖಲೆಯೇ ಆಗಿದೆ. ಜೂನ್ ಮೊದಲವಾರದಲ್ಲಿ ಕೊರೊನಾದಿಂದ ಒಂದು ದಿನದಲ್ಲಿ ಸಾಯುವವರ ಸಂಖ್ಯೆ 3 ಸಾವಿರಕ್ಕೆ ಏರಬಹುದು ಎಂದು ತಜ್ಞರು ಅಂದಾಜಿಸಿದ್ದರು. ಆದರೆ ಮೇ ಮೊದಲವಾರದ ಕೊನೆಯಲ್ಲೇ ಸಾವಿನ ಸಂಖ್ಯೆ 4 ಸಾವಿರ ದಾಟಿರುವುದು ಆತಂಕ ಮೂಡಿಸಿದೆ. ಹಾಗೇ ದೇಶದಲ್ಲಿ ಕೊರೊನಾದಿಂದ ಪ್ರಾಣ ಕಳೆದುಕೊಂಡವರ ಒಟ್ಟು ಸಂಖ್ಯೆ 2,38,270ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಕೊವಿಡ್ 19 ನಿಂದ ಸಾಯುವವರ ಪ್ರಮಾಣ ಶೇ. 1.09ರಷ್ಟಿದೆ.
ಕಳೆದ 24 ಗಂಟೆಯಲ್ಲಿ ದೇಶದಲ್ಲಿ 4,01,078 ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,18,92,676ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇನ್ನು ಒಂದೇ ದಿನದಲ್ಲಿ 3,18,609 ಮಂದಿ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಕೊರೊನಾದಿಂದ ಚೇತರಿಸಿಕೊಂಡವರು ಒಟ್ಟು 1,79,30,960. ಆದರೆ ಒಂದು ಬ್ಯಾಡ್ ನ್ಯೂಸ್ ಎಂದರೆ ದೇಶದಲ್ಲಿ ಕೊವಿಡ್ನಿಂದ ಚೇತರಿಸಿಕೊಳ್ಳುವವರ ಪ್ರಮಾಣ ಶೇ. 81.90ಕ್ಕೆ ಕುಸಿದಿದೆ. ಇದು ಮೊದಲ ಅಲೆಯಲ್ಲಿ ಶೇ.96ರವರೆಗೂ ಏರಿಕೆಯಾಗಿತ್ತು.
ಸದ್ಯ ಭಾರತದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು 37,23,446 ಇದ್ದು, ಸೋಂಕಿನ ವಿರುದ್ಧ ಹೋರಾಟ ದಿನೇದಿನೇ ಕಷ್ಟವೇ ಆಗುತ್ತಿದೆ. ಒಂದೊಂದೇ ರಾಜ್ಯಗಳು ಲಾಕ್ಡೌನ್ ಮೊರೆ ಹೋಗುತ್ತಿವೆ. ದೇಶಾದ್ಯಂತ ಆಕ್ಸಿಜನ್, ಬೆಡ್, ವೆಂಟಿಲೇಟರ್, ಲಸಿಕೆ ಅಭಾವ ಬಹುದೊಡ್ಡ ಸವಾಲಾಗಿ ಕಾಡುತ್ತಿದೆ.
ಇದನ್ನೂ ಓದಿ: ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೇ ಕೊವಿಡ್ ಆಸ್ಪತ್ರೆಗೆ ಅಳವಡಿಸಿದ್ದ ಜಂಬೋ ಆಕ್ಸಿಜನ್ ಸಿಲಿಂಡರ್‌ಗಳ ಕಳ್ಳತನ
ಎಚ್ಚರಾ! ಭಾರತದಲ್ಲಿ ಆಗಸ್ಟ್ 1ರೊಳಗೆ ಕೊರೊನಾ ಸೋಂಕಿಗೆ 10 ಲಕ್ಷ ಜನ ಸಾವು -ಇದು ಬ್ರಿಟಿಷ್ ಮೆಡಿಕಲ್ ಜರ್ನಲ್ ವರದಿ
4,187 deaths by covid 19 is new record in India
Published On - 11:18 am, Sat, 8 May 21