ದೇಶಕಾಯೋ ಯೋಧರಿಗೂ ಸುತ್ತಿಕೊಂಡ ಹೆಮ್ಮಾರಿ, 45 ITBP ಸಿಬ್ಬಂದಿಗೆ ಕೊರೊನಾ

|

Updated on: May 06, 2020 | 3:52 PM

ದೆಹಲಿ: ಹೆಮ್ಮಾರಿ ವೈರಸ್ ಯಾರನ್ನೂ ಬಿಡ್ತಿಲ್ಲ. ವೃದ್ಧರಿಂದ ಹಿಡಿದು ಹಸುಗೂಸಿನವರೆಗೂ ಕೊರೊನಾ ಅನ್ನೋ ಕ್ರೂರಿ ಸುತ್ತಿಕೊಳ್ತಿದೆ. ದೇಶದ ದಾರಿ ದಾರಿಯಲ್ಲೂ ವಿಷದ ಬಳ್ಳಿ ಬೇರೂರ್ತಿದೆ. ಅಲ್ಲಿ, ಇಲ್ಲಿ ಅಲೆದಾಡ್ತಿದ್ದ ಹೆಮ್ಮಾರಿ ವೈರಸ್ ಇದೀಗ ನಮ್ಮನ್ನ ಕಣ್ಣಲ್ಲಿ ಕಣ್ಣಿಟ್ಟು ಕಾಯೋ, ದೇಶಕ್ಕೆ ಭದ್ರತೆ ನೀಡ್ತಿರೋ ನಮ್ಮ ವೀರ ಸೈನಿಕರಿಗೂ ಸುತ್ತಿಕೊಂಡಿದೆ. ಭಾರಾತಾಂಭೆಯ ವೀರಪುತ್ರರು ರಕ್ಕಸನ ಕೂಪಕ್ಕೆ ಬಿದ್ದಿದ್ದಾರೆ. ದೇಶ ಕಾಯೋ ಯೋಧರಿಗೂ ಸುತ್ತಿಕೊಂಡ ಹೆಮ್ಮಾರಿ! ದೆಹಲಿಯಲ್ಲಿ ಅಟ್ಟಹಾಸ ಮೆರೀತಿರೋ ಕ್ರೂರಿ ಕೊರೊನಾ ವೈರಸ್ ತನ್ನ ಜಾಲವನ್ನ ಮತ್ತಷ್ಟು ವ್ಯಾಪಿಸ್ತಿದೆ. […]

ದೇಶಕಾಯೋ ಯೋಧರಿಗೂ ಸುತ್ತಿಕೊಂಡ ಹೆಮ್ಮಾರಿ, 45 ITBP  ಸಿಬ್ಬಂದಿಗೆ ಕೊರೊನಾ
Follow us on

ದೆಹಲಿ: ಹೆಮ್ಮಾರಿ ವೈರಸ್ ಯಾರನ್ನೂ ಬಿಡ್ತಿಲ್ಲ. ವೃದ್ಧರಿಂದ ಹಿಡಿದು ಹಸುಗೂಸಿನವರೆಗೂ ಕೊರೊನಾ ಅನ್ನೋ ಕ್ರೂರಿ ಸುತ್ತಿಕೊಳ್ತಿದೆ. ದೇಶದ ದಾರಿ ದಾರಿಯಲ್ಲೂ ವಿಷದ ಬಳ್ಳಿ ಬೇರೂರ್ತಿದೆ. ಅಲ್ಲಿ, ಇಲ್ಲಿ ಅಲೆದಾಡ್ತಿದ್ದ ಹೆಮ್ಮಾರಿ ವೈರಸ್ ಇದೀಗ ನಮ್ಮನ್ನ ಕಣ್ಣಲ್ಲಿ ಕಣ್ಣಿಟ್ಟು ಕಾಯೋ, ದೇಶಕ್ಕೆ ಭದ್ರತೆ ನೀಡ್ತಿರೋ ನಮ್ಮ ವೀರ ಸೈನಿಕರಿಗೂ ಸುತ್ತಿಕೊಂಡಿದೆ. ಭಾರಾತಾಂಭೆಯ ವೀರಪುತ್ರರು ರಕ್ಕಸನ ಕೂಪಕ್ಕೆ ಬಿದ್ದಿದ್ದಾರೆ.

ದೇಶ ಕಾಯೋ ಯೋಧರಿಗೂ ಸುತ್ತಿಕೊಂಡ ಹೆಮ್ಮಾರಿ!
ದೆಹಲಿಯಲ್ಲಿ ಅಟ್ಟಹಾಸ ಮೆರೀತಿರೋ ಕ್ರೂರಿ ಕೊರೊನಾ ವೈರಸ್ ತನ್ನ ಜಾಲವನ್ನ ಮತ್ತಷ್ಟು ವ್ಯಾಪಿಸ್ತಿದೆ. ಇದೀಗ ರಾಷ್ಟ್ರ ರಾಜಧಾನಿಯಲ್ಲಿ ಇಂಡೋ ಟಿಬೆಟಿಯನ್ ಬಾರ್ಡರ್​ ಪೊಲೀಸ್​ನ 45 ಸಿಬ್ಬಂದಿಗೆ ಡೆಡ್ಲಿ ಕೊರೊನಾ ವಕ್ಕರಿಸಿಕೊಂಡಿದೆ. ಆಂತರಿಕ ಭದ್ರತೆ ಕೆಲಸದಲ್ಲಿ ತೊಡಗಿದ್ದ ಟೈಗ್ರಿ ಪ್ರದೇಶದ 43 ಸಿಬ್ಬಂದಿ ಕೊರೊನಾ ಜಾಲಕ್ಕೆ ಬಿದ್ದಿದ್ರೆ, ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದ ಇಬ್ಬರು ಐಟಿಬಿಪಿ ಸಿಬ್ಬಂದಿಗೆ ಕೊರೊನಾ ವಕ್ಕರಿಸಿದೆ.

ಕೊರೊನಾ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ!
ಇನ್ನು ಕೊರೊನಾ ಸೋಂಕಿಗೆ ತುತ್ತಾಗಿರುವ 45 ಐಟಿಬಿಬಿ ಸಿಬ್ಬಂದಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಮದೂತನ ಅಟ್ಟಹಾಸಕ್ಕೆ ಸಿಲುಕಿರೋ 43 ಸಿಬ್ಬಂದಿಯನ್ನ ದೆಹಲಿಯ ಸಿಎಪಿಎಫ್ ರೆಫರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನಿಬ್ಬರನ್ನ ಸಫ್ದರ್​​ಜಂಗ್ ಆಸ್ಪತ್ರೆಗೆ ದಾಖಲಿಸಿ ಟ್ರೀಟ್ಮೆಂಟ್ ಕೊಡ್ತಿದ್ದಾರೆ. ಅಲ್ದೇ, ಸೋಂಕಿತ ಜೊತೆ ಸಂಪರ್ಕದಲ್ಲಿದ್ದ 91ಕ್ಕೂ ಹೆಚ್ಚು ಸಿಬ್ಬಂದಿಯನ್ನ ಕ್ವಾರಂಟೈನ್​​ನಲ್ಲಿಡಲಾಗಿದ್ದು ತೀವ್ರ ನಿಗಾ ವಹಿಸಲಾಗಿದೆ. ಕೊರೊನಾ ಸುಳಿಗಾಳಿಯಂತೆ ಹಬ್ತಿರೋದು ಐಟಿಬಿಪಿ ಬೆಟಾಲಿಯನ್​​ಗಳಲ್ಲಿ ಆತಂಕ ಹೆಚ್ಚಿಸಿದೆ.

ಆರ್​ಆರ್ ಸೇನಾಸ್ಪತ್ರೆಯಲ್ಲಿ 24 ಮಂದಿಗೆ ಕೊರೊನಾ!
ಇನ್ನೊಂದು ಶಾಕಿಂಗ್ ವಿಷ್ಯ ಅಂದ್ರೆ, ದೆಹಲಿಯಲ್ಲಿರುವ ರಿಸರ್ಚ್​ ಅಂಡ್ ರೆಫರಲ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 24 ಮಂದಿ ಸಿಬ್ಬಂದಿಗೂ ಕೊರೊನಾ ತಗ್ಲಾಕೊಂಡಿದೆ. ಎಲ್ಲರನ್ನೂ ಆರ್ಮಿ ಬೇಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗ್ತಿದೆ. ಒಂದೇ ಕ್ಯಾಂಪ್​​ನಲ್ಲಿ ಕೆಲಸ ಮಾಡ್ತಿದ್ದ ಸಿಬ್ಬಂದಿ, ಕುಟುಂಬದ ಸದ್ಯರಿಗೂ ಕೊರೊನಾ ಸುಳಿಗಾಳಿ ಸುತ್ತಿಕೊಂಡಿದೆ. ಇದ್ರಿಂದ ಆರ್​ಆರ್​​ ಸೇನಾಸ್ಪತ್ರೆಯಲ್ಲಿ ಕೊರೊನಾ ಭೀತಿ ಮತ್ತಷ್ಟು ಹೆಚ್ಚಾಗಿದೆ.

ನಿವೃತ್ತ ಯೋಧರಿಗೂ ಕೊರೊನಾ ದೃಢ!
ಇಷ್ಟೆ ಅಲ್ಲ, ರಾಷ್ಟ್ರ ರಾಜಧಾನಿ ದೆಹಲಿಯ ಆರ್​ಆರ್​​ ಆಸ್ಪತ್ರೆಗೆ ದಾಖಲಾಗಿದ್ದ ನಿವೃತ್ತ ಯೋಧರಿಗೂ ಹೆಮ್ಮಾರಿ ವೈರಸ್ ಅಟ್ಯಾಕ್ ಮಾಡಿದೆ. ಇದ್ರಿಂದ ನಿವೃತ್ತ ಯೋಧರು ಸುತ್ತಾಡಿದ ಕಡೆ ಎಲ್ಲಾ ಸೋಂಕಿನ ಸುನಾಮಿ ಅಪ್ಪಳಿಸಿರೋ ಆತಂಕ ಹೆಚ್ಚಾಗ್ತಿದೆ. ರಿಟೈರ್ ಆಗಿರೋ ಯೋಧರ ಕುಟುಂಬಸ್ಥರು, ಸಂಬಂಧಿಕರು, ಮಕ್ಕಳ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ ಜೊತೆಗೆ ಹಲವರನ್ನು ಕ್ವಾರಂಟೈನ್ ಕೂಡ ಮಾಡಲಾಗಿದೆ ಅಂತ ಸೇನಾ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಒಟ್ನಲ್ಲಿ, ಯಮದೂತ ವೈರಸ್ ಸಿಕ್ಕವರೆನ್ನೆಲ್ಲಾ ತೆಕ್ಕೆಗೆ ಬಾಚಿಕೊಳ್ತಿರೋದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಐಟಿಬಿಪಿ ಸಿಬ್ಬಂದಿ, ಆರ್ಮಿ ರೆಫರಲ್ ಆಸ್ಪತ್ರೆಯಲ್ಲಿ ಕೊರೊನಾ ಕೊಲಾಹಲ ಎಬ್ಬಿಸಿದ್ದು ಎಲ್ಲರನ್ನೂ ನಡುಗಿಸಿದೆ. ಇನ್ನೂ ಯಾಱರಿಗೆ ಹೆಮ್ಮಾರಿ ಸುತ್ತಿಕೊಂಡಿದ್ಯೋ ಅನ್ನೋ ಆತಂಕ ಮತ್ತಷ್ಟು ಹೆಚ್ಚಾಗ್ತಿದೆ.

Published On - 2:19 pm, Wed, 6 May 20