ಭಾರತದಲ್ಲಿ ನಿರುದ್ಯೋಗದ ದರ ಎಷ್ಟು? CMIE ಬಿಚ್ಚಿಟ್ಟ ವರದಿ ಇಲ್ಲಿದೆ
ದೆಹಲಿ: ಮಹಾಮಾರಿ ಕೊರೊನಾ ಹೊಡೆತಕ್ಕೆ ಕಾರ್ಮಿಕರ ಬದುಕು ಛಿದ್ರ ಛಿದ್ರವಾಗಿದೆ. ಕೊರೊನಾ ಬಿಕ್ಕಟ್ಟಿನಿಂದ ಭಾರತದಲ್ಲಿ ಭಾರಿ ಉದ್ಯೋಗ ನಷ್ಟವಾಗಿದೆ. ಮೇ 3ಕ್ಕೆ ನಿರುದ್ಯೋಗದ ದರ ಶೇಕಡಾ 27.11ಕ್ಕೆ ಏರಿಕೆಯಾಗಿದೆ ಎಂದು ಸೆಂಟ್ರಲ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(CMIE) ವರದಿ ಮಾಡಿದೆ. ಏಪ್ರಿಲ್ 26ರಂದು ನಿರುದ್ಯೋಗದ ದರ ಶೇ. 26.19ರಷ್ಟಿತ್ತು. ರಾಜ್ಯವಾರು ಅಂಕಿಅಂಶದ ಪ್ರಕಾರ ಏಪ್ರಿಲ್ ಅಂತ್ಯದ ವೇಳೆಗೆ ಪುದುಚೆರಿಯಲ್ಲಿ ಅತಿ ಹೆಚ್ಚು ನಿರುದ್ಯೋಗ ಅಂದ್ರೆ ಶೇ. 75.8ರಷ್ಟಿದೆ. ತಮಿಳುನಾಡು ಶೇಕಡಾ 49.8, ಜಾರ್ಖಂಡ್ ಶೇಕಡಾ 47.1, ಬಿಹಾರ ಶೇಕಡಾ […]
ದೆಹಲಿ: ಮಹಾಮಾರಿ ಕೊರೊನಾ ಹೊಡೆತಕ್ಕೆ ಕಾರ್ಮಿಕರ ಬದುಕು ಛಿದ್ರ ಛಿದ್ರವಾಗಿದೆ. ಕೊರೊನಾ ಬಿಕ್ಕಟ್ಟಿನಿಂದ ಭಾರತದಲ್ಲಿ ಭಾರಿ ಉದ್ಯೋಗ ನಷ್ಟವಾಗಿದೆ. ಮೇ 3ಕ್ಕೆ ನಿರುದ್ಯೋಗದ ದರ ಶೇಕಡಾ 27.11ಕ್ಕೆ ಏರಿಕೆಯಾಗಿದೆ ಎಂದು ಸೆಂಟ್ರಲ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(CMIE) ವರದಿ ಮಾಡಿದೆ.
ಏಪ್ರಿಲ್ 26ರಂದು ನಿರುದ್ಯೋಗದ ದರ ಶೇ. 26.19ರಷ್ಟಿತ್ತು. ರಾಜ್ಯವಾರು ಅಂಕಿಅಂಶದ ಪ್ರಕಾರ ಏಪ್ರಿಲ್ ಅಂತ್ಯದ ವೇಳೆಗೆ ಪುದುಚೆರಿಯಲ್ಲಿ ಅತಿ ಹೆಚ್ಚು ನಿರುದ್ಯೋಗ ಅಂದ್ರೆ ಶೇ. 75.8ರಷ್ಟಿದೆ. ತಮಿಳುನಾಡು ಶೇಕಡಾ 49.8, ಜಾರ್ಖಂಡ್ ಶೇಕಡಾ 47.1, ಬಿಹಾರ ಶೇಕಡಾ 46.6, ಮಹಾರಾಷ್ಟ್ರ ಶೇಕಡಾ 20.9, ಹರಿಯಾಣ ಶೇಕಡಾ 43.2, ಉತ್ತರಪ್ರದೇಶ ಶೇಕಡಾ 21.5, ಕರ್ನಾಟಕದಲ್ಲಿ ನಿರುದ್ಯೋಗದ ದರ ಶೇಕಡಾ 29.8ರಷ್ಟಿದೆ.
ಹಾಗೂ ಗುಡ್ಡಗಾಡು ರಾಜ್ಯಗಳಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆ ಇದೆ. ಹಿಮಾಚಲಪ್ರದೇಶ ಶೇಕಡಾ 2.2, ಸಿಕ್ಕಿಂ ಶೇಕಡಾ 2.3, ಉತ್ತರಾಖಂಡ್‌ನಲ್ಲಿ ಶೇಕಡಾ 6.5ರಷ್ಟಿದೆ ಎಂದು CMIE ವರದಿ ಮಾಡಿದೆ.