Exit Poll Results 2021: ಚುನಾವಣೋತ್ತರ ಸಮೀಕ್ಷೆ; ಬಂಗಾಳದಲ್ಲಿ ದೀದಿ ಗೆಲುವು; ತಮಿಳುನಾಡಲ್ಲಿ ಡಿಎಂಕೆಗೆ ಜಯಭೇರಿ ಸಾಧ್ಯತೆ
5 States elections’ exit Poll Results 2021 LIVE: ಈ ಐದೂ ರಾಜ್ಯಗಳ ಫಲಿತಾಂಶಕ್ಕಾಗಿ ಮೇ 2ರವರೆಗೆ ಕಾಯಬೇಕಾದರೂ ಟಿವಿ9 ಇಂದೇ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶವನ್ನು ನಿಮ್ಮೆದುರು ತೆರೆದಿಡಲಿದೆ.
ದೇಶದ ಪ್ರಮುಖ ನಾಲ್ಕು ರಾಜ್ಯಗಳ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಅಂತೂ ಸುದೀರ್ಘ ಚುನಾವಣೆ ಇಂದು ಮುಕ್ತಾಯಗೊಂಡಿದೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿಗಳ ಚುನಾವಣೆ ಕೊವಿಡ್ ಸಮಯದಲ್ಲೇ ನಡೆದದ್ದು ಇನ್ನಷ್ಟು ಮಹತ್ವ ಪಡೆದಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆ ಕೇವಲ ಚುನಾವಣೆಯೊಂದಷ್ಟೇ ಆದಂತೆ ಭಾಸವಾಗಲಿಲ್ಲ. ಬಂಗಾಳದಲ್ಲಿ ನಡೆದ ರಾಜಕೀಯ ನಾಟಕೀಯ ತಿರುವುಗಳು ಎಂದೂ ಇಲ್ಲದ ಆಸಕ್ತಿಯಿಂದ ಕತ್ತನ್ನು ಅತ್ತ ತಿರುವುವಂತೆ ಮಾಡಿತು. ಕರ್ನಾಟಕದಂತಹ ದಕ್ಷಿಣ ಭಾರತದ ರಾಜ್ಯವೂ ಸಹ ಪಶ್ಚಿಮ ಬಂಗಾಳದಲ್ಲಿ ಏನಾಗಲಿದೆ ಎಂದು ಪ್ರತಿದಿನ ಕುತೂಹಲದಿಂದ ಕಾಯುತ್ತಿತ್ತು. ಮಮತಾ ಬ್ಯಾನರ್ಜಿ ಮೂರನೇ ಬಾರಿಗೆ ಸಿಎಂ ಆಗಲಿದ್ದಾರಾ? ಎಂಬುದು ಸದ್ಯದ ಮಟ್ಟಿಗಿನ ಮಿಲಿಯನ್ ಡಾಲರ್ ಪ್ರಶ್ನೆ. ಕೇರಳದ ಸುಶಿಕ್ಷಿತ ಮತದಾರರು ಈ ಬಾರಿ ತಮ್ಮನ್ನು ಆಳುವ ಅಧಿಕಾರವನ್ನು ಯಾರಿಗೆ ನೀಡುತ್ತಾರೆ ಎಂಬುದನ್ನು ಉತ್ತರ ಭಾರತೀಯರೂ ಅಷ್ಟೇ ಕುತೂಹಲದಿಂದ ಕಾಯುತ್ತಿದ್ದಾರೆ. ಇದೆ ವೇಳೆ ದಕ್ಷಿಣ ಭಾರತದ ತಮಿಳುನಾಡು, ಕೇರಳ ಮತ್ತು ಪುದುಚೇರಿಗಳಲ್ಲೂ ಚುನಾವಣೆಯ ಭರಾಟೆ ಗಗನಕ್ಕೇರಿತ್ತು. ಕರ್ನಾಟಕದ ಪಕ್ಕದ ತಮಿಳುನಾಡು ವಿಧಾನಸಭಾ ಚುನಾವಣೆ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾರ ನಿಧನದ ನಂತರ ಡಿಎಂಕೆ-ಎಐಎಡಿಎಂಕೆ ನಡುವಿನ ಹಣಾಹಣಿಯಾಗಿ ಮಾರ್ಪಟ್ಟಿತ್ತು. ಪಕ್ಕದ ರಾಜ್ಯ ಎಂಬ ಕಾರಣಕ್ಕೆ ಕರ್ನಾಟಕದ ಪಾಲಿಗೆ ತಮಿಳುನಾಡಿನ ಫಲಿತಾಂಶ ಅತಿ ಮುಖ್ಯವಾದುದು. ಇನ್ನು ಅಸ್ಸಾಂ ಮತ್ತು ಪುದುಚೇರಿಗಳಲ್ಲಿ ರಾಷ್ಟ್ರೀಯ ಪಕ್ಷಗಳು ನಡೆಸಿದ ಪ್ರಚಾರದ ಭರಾಟೆಯೇ ಫಲಿತಾಂಶದ ಮೇಲೆ ಕುತೂಹಲ ಹೆಚ್ಚಿಸುವಂತೆ ಮಾಡಿದೆ. ಈ ಐದೂ ರಾಜ್ಯಗಳ ಫಲಿತಾಂಶಕ್ಕಾಗಿ ಮೇ 2ರವರೆಗೆ ಕಾಯಬೇಕಾದರೂ ಟಿವಿ9 ಇಂದೇ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶವನ್ನು ನಿಮ್ಮೆದುರು ತೆರೆದಿಡಲಿದೆ.
LIVE NEWS & UPDATES
-
ಅಸ್ಸಾಂನಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ 64 ಸ್ಥಾನಗಳನ್ನು ಗೆಲ್ಲುವವರಾರು?
ಅಸ್ಸಾಂನಲ್ಲಿ ಈ ಬಾರಿಯೂ ಆಡಳಿತಾರೂಢ ಎನ್ಡಿಎ ಮುನ್ನಡೆ ಸಾಧಿಸುವ ಸಾಧ್ಯತೆಯಿದೆ ಎಂದು Tv9-Polstrat ಸಮೀಕ್ಷೆ ತಿಳಿಸಿದೆ. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಹೆಚ್ಚು ಸ್ಥಾನಗಳನ್ನು ಗಳಿಸುತ್ತದೆ ಎಂದು ತಿಳಿಸುವ ಸಮೀಕ್ಷೆ, ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಮತಗಳಿಕೆ ಪ್ರಮಾಣವು ಎನ್ಡಿಎ ಮೈತ್ರಿಕೂಟಕ್ಕಿಂತಲೂ ಹೆಚ್ಚಾಗಿರುತ್ತದೆ ಎಂದು ಹೇಳಿದೆ.
ಅಸ್ಸಾಂನಲ್ಲಿ ಮಾರ್ಚ್ 27, ಏಪ್ರಿಲ್ 1 ಮತ್ತು ಏಪ್ರಿಲ್ 6ರಂದು ಮೂರು ಹಂತಗಳಲ್ಲಿ ಮತದಾನ ನಡೆದಿತ್ತು. ಒಟ್ಟು 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಬಹುಮತ ಗಳಿಸಲು ಯಾವುದೇ ಪಕ್ಷ ಅಥವಾ ಮೈತ್ರಿಕೂಟವು 64 ಸ್ಥಾನ ಪಡೆಯಬೇಕಿದೆ. ಮೇ 2ರಂದು ಮತಎಣಿಕೆ ನಡೆಯಲಿದ್ದು ಫಲಿತಾಂಶ ಪ್ರಕಟವಾಗಲಿದೆ.
-
ತಮಿಳುನಾಡು ಸರ್ಕಾರ ರಚಿಸುವ ಅವಕಾಶ ಯಾರಿಗೆ ದೊರೆಯಲಿದೆ?
ಈಬಾರಿಯ ತಮಿಳುನಾಡು ವಿಧಾನಸಭೆಗೆ ನಡೆದ ಚುನಾವಣೆ ಮಾಜಿ ಸಿಎಂ ದಿವಂಗತ ಜಯಲಲಿತಾರ ಮರಣದ ನಂತರ ನಡೆದ ಮೊದಲ ವಿಧಾನಸಭಾ ಚುನಾವಣೆ. ಹೀಗಾಗಿ ಈ ಚುನಾವಣಾ ಫಲಿತಾಂಶ ಬಹುಮುಖ್ಯವಾಗಿದೆ.
-
ಕೇರಳ ಚುನಾವಣೋತ್ತರ ಸಮೀಕ್ಷೆಯ ಸಂಪೂರ್ಣ ದತ್ತಾಂಶ ಇಲ್ಲಿದೆ
ಕೇರಳದ ಸುಶಿಕ್ಷಿತ ಮತದಾರರ ಮನದಾಳದಲ್ಲಿ ಏನಿದೆ ಎಂಬ ಪ್ರಯತ್ನದಲ್ಲಿ ಟಿವಿ9ಗೆ ದೊರಕಿದ ವಿವರಗಳಿವು.
ಪಶ್ಚಿಮ ಬಂಗಾಳದ ಸಮೀಕ್ಷೆಯ ಸಂಪೂರ್ಣ ವಿವರ ಇಲ್ಲಿದೆ
ಪಶ್ಚಿಮ ಬಂಗಾಳದ ಮತದಾರರ ಮನದಾಳ ಅರಿವ ಸಮೀಕ್ಷೆ ನಡೆಸಿದ ಟಿವಿ9ಗೆ ಮತದಾರರು ತಿಳಿಸಿದ್ದಿಷ್ಟು.
ಕಾರ್ತಿಕ್ ಸಿಕ್ಸರ್
ದಿನೇಶ್ ಕಾರ್ತಿಕ್ ಅಕ್ಷರ್ ಪಟೇಲ್ ಅವರ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದಾರೆ. ಕಾರ್ತಿಕ್ ತಮ್ಮ ಟ್ರೇಡ್‌ಮಾರ್ಕ್ ಸ್ವೀಪ್ ಶಾಟ್‌ನಲ್ಲಿ ಮಿಡ್‌ವಿಕೆಟ್ ಬೌಂಡರಿಗೆ ಅಡ್ಡಲಾಗಿ ಸಿಕ್ಸರ್ ಬಾರಿಸಿದರು. ಕನಿಷ್ಠ ಗೌರವಾನ್ವಿತ ಸ್ಕೋರ್ ಪಡೆಯಲು ಕೆಕೆಆರ್‌ಗೆ ಇನ್ನೂ ಕೆಲವು ಹೊಡೆತಗಳು ಬೇಕಾಗುತ್ತವೆ.
ಪುದುಚೇರಿ ಫಲಿತಾಂಶದ ಟಿವಿ9 ಸಮೀಕ್ಷೆಯ ವಿವರಗಳು
ಪುದುಚೇರಿಯ ವಿಧಾನಸಭಾ ಚುನಾವಣಾ ಫಲಿತಾಂಶದ ಟಿವಿ9 ಸಮಿಕ್ಷೆಯ ವಿವರಗಳು ಇಂತಿವೆ
ತಮಿಳುನಾಡಿನ ಪುರುಷ- ಮಹಿಳಾ ಮತದಾರರಿಗೆ ಡಿಎಂಕೆ ಮೇಲೆ ಒಲವು
ಮತದಾರರು ಯಾವ ಪಕ್ಷಗಳು ಅಧಿಕಾರಕ್ಕೇರಲಿವೆ ಎಂಬುದರ ಬಗ್ಗೆ ಸಮೀಕ್ಷೆಗಳು ಭವಿಷ್ಯ ನುಡಿದಿದ್ದು, ಈ ಪೈಕಿ ಪುರುಷರಲ್ಲಿ ಶೇ 45.10 ಮಂದಿ ಡಿಎಂಕೆ, ಶೇ 36.70 ಮಂದಿ ಎಐಎಡಿಎಂಕೆ, ಶೇ 18.20 ಇತರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಮಹಿಳೆಯರಲ್ಲಿ ಶೇ44.90 ಮಂದಿ ಡಿಎಂಕೆ, ಶೇ36.80 ಮಂದಿ ಎಐಎಡಿಎಂಕೆ, ಶೇ 18.30 ಇತರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮತದಾರರ ಲಿಂಗ ಪ್ರಕಾರ ಡಿಎಂಕೆ ಪರ ಶೇ 44.90, ಎಐಎಡಿಎಂಕೆ ಪರ ಶೇ 36.80,ಇತರೆ ಶೇ 18.30 ಒಲವು ತೋರಿದ್ದಾರೆ.
ತಮಿಳುನಾಡು; ಜಿದ್ದಾಜಿದ್ದಿನಲ್ಲಿ ಗೆಲ್ಲಲಿದೆಯೇ ಡಿಎಂಕೆ?
ತಮಿಳುನಾಡಿನಲ್ಲಿ ಡಿಎಂಕೆ- ಎಐಎಡಿಎಂಕೆ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇಂದು ನಿನ್ನೆಯದಲ್ಲ. ಒಂದು ಬಾರಿ ಡಿಎಂಕೆ ಮತ್ತೊಮ್ಮೆ ಎಐಎಡಿಎಂಕೆ ಎಂಬ ರೀತಿಯಲ್ಲಿ ಅಧಿಕಾರ ನಡೆಸಿದ ಪ್ರಮುಖ ಪಕ್ಷಗಳಿವು. ಈ ಬಾರಿ ಎಐಎಡಿಎಂಕೆ – ಬಿಜೆಪಿ ಮೈತ್ರಿಕೂಟವು ಗದ್ದುಗೇರಲು ಶತಾಯಗತಾಯ ಪ್ರಯತ್ನ ಪಡುತ್ತಿದೆ. Tv9-Polstrat ಸಮೀಕ್ಷೆಯ ಪ್ರಕಾರ ಡಿಎಂಕೆ ಪರ ತಮಿಳುನಾಡಿನ ಜನ ಹೆಚ್ಚಿನ ಒಲವು ತೋರಿಸಿದ್ದಾರೆ. Tv9 ಮತಗಟ್ಟೆ ಸಮೀಕ್ಷೆಗಳಲ್ಲಿ (ಎಕ್ಸಿಟ್ ಪೋಲ್) ಸಂಗ್ರಹಿಸಿದ ಅಭಿಪ್ರಾಯ ಮತ್ತು ಅಂಶಗಳ ಪ್ರಕಾರ ಡಿಎಂಕೆ ಪಕ್ಷ 143ರ ರಿಂದ 153ಸೀಟುಗಳನ್ನು ಗಳಿಸುವ ಸಾಧ್ಯತೆ ಇದೆ. ಅದೇ ವೇಳೆ ಎಐಎಡಿಎಂಕೆ 75-80, ಇತರೆ ಪಕ್ಷಗಳು 20-12 ಸೀಟುಗಳಿಸುವ ಸಾಧ್ಯತೆ ಇದೆ. ತಮಿಳುನಾಡು ವಿಧಾನಸಭೆಯಲ್ಲಿ ಒಟ್ಟು 243 ಸೀಟುಗಳಿವೆ.
ಪುದುಚೇರಿ: ರಿಪಬ್ಲಿಕ್-ಸಿಎನ್ಎಕ್ಸ್ ಸಮೀಕ್ಷೆ ಪ್ರಕಾರ ಬಿಜೆಪಿಗೆ ಬಲ
ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭೆಯಲ್ಲಿ ಈ ಬಾರಿ ಬಿಜೆಪಿ ಮುನ್ನಡೆ ಪಡೆಯುವ ಸಾಧ್ಯತೆಯಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಮತ್ತೊಂದು ರಾಜ್ಯದಲ್ಲಿ ಕಮಲ ಅರಳಿಸುವ ಬಿಜೆಪಿ ನಾಯಕರ ಪ್ರಯತ್ನಕ್ಕೆ ತಕ್ಕಮಟ್ಟಿಗೆ ಯಶಸ್ಸು ಸಿಗುವ ಸಾಧ್ಯತೆ ಕಾಣಿಸುತ್ತಿದೆ.
ರಿಪಬ್ಲಿಕ್-ಸಿಎನ್ಎಕ್ಸ್ ಸಮೀಕ್ಷೆಯ ಪ್ರಕಾರ ಪುದುಚೇರಿಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 18, ಕಾಂಗ್ರೆಸ್ ನೇತೃತ್ವದ ಯುಪಿಎ 12 ಸ್ಥಾನ ಪಡೆಯಬಹುದು.
ಎಬಿಪಿ-ಸಿ ವೋಟರ್ ಸಮೀಕ್ಷೆಯ ಪ್ರಕಾರ ಪುದುಚೇರಿಯಲ್ಲಿ ಎನ್ಡಿಎ 19-23, ಎಸ್ಡಿಎ 6-10, ಇತರರು 1-2 ಸ್ಥಾನ ಪಡೆಯಬಹುದು.
ಕೇರಳದಲ್ಲಿ ಈ ಬಾರಿಯೂ ಎಲ್ಡಿಎಫ್ ಆಡಳಿತ ಸಾಧ್ಯತೆ
ಕೇರಳದಲ್ಲಿ ಈ ಬಾರಿಯೂ ಎಡಪಕ್ಷಗಳ ಮೈತ್ರಿಕೂಟ ಎಲ್ಡಿಎಫ್ ಅಧಿಕಾರಕ್ಕೆ ಮರಳುವ ಸಾಧ್ಯತೆಯನ್ನು ಮತಗಟ್ಟೆ ಸಮೀಕ್ಷೆಗಳು ಸಾರಿಹೇಳಿವೆ.
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ ಫಲಿತಾಂಶದ ಸಾಧ್ಯತೆ ಹೀಗಿದೆ.. ಎಲ್ಡಿಎಫ್: 104-120 ಯುಡಿಎಫ್: 20-36 ಎನ್ಡಿಎ: 0-2
ರಿಪಬ್ಲಿಕ್-ಸಿಎನ್ಎಕ್ಸ್ ಎಲ್ಡಿಎಫ್: 72-80 ಯುಡಿಎಫ್: 58-64 ಎನ್ಡಿಎ: 1-5
ಅಸ್ಸಾಂ: ರಿಪಬ್ಲಿಕ್ ಟಿವಿ-ಸಿಎನ್ಎಕ್ಸ್
ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಮುನ್ನಡೆ ಸಾಧ್ಯತೆಯನ್ನು ರಿಪಬ್ಲಿಕ್ ಟಿವಿ-ಸಿಎನ್ಎಕ್ಸ್ ಸಮೀಕ್ಷೆಯೂ ತೆರೆದಿಟ್ಟಿದೆ.
ಬಿಜೆಪಿ ಮೈತ್ರಿಕೂಟ: 74-84 ಕಾಂಗ್ರೆಸ್ ಮೈತ್ರಿಕೂಟ: 40-50 ಇತರರು: 1-3
ಪಶ್ಚಿಮ ಬಂಗಾಳದ ಎಸ್ಸಿ ಎಸ್ಟಿ ಮತದಾರರು ಬಿಜೆಪಿಗೆ ಮತ ಹಾಕುವ ಸಾಧ್ಯತೆ
ಪಶ್ಚಿಮ ಬಂಗಾಳದ ಸಮುದಾಯವಾರು ಮತಚಲಾವಣೆ ಮಾಹಿತಿ ದತ್ತಾಂಶದ ವಿಶ್ಲೇಷಿಸಿದಾಗ ಎಸ್ಸಿ / ಎಸ್ಸಿ ಸಮುದಾಯದ ಅತಿಹೆಚ್ಚು ಮಂದಿ, ಅಂದರೆ ಶೇ 58.10 ಬಿಜೆಪಿ ಪರವಾಗಿ ಮತ ಚಲಾಯಿಸಿರುವುದು ಅರಿವಿಗೆ ಬಂದಿದೆ. ಇದೇ ಸಮುದಾಯದ ಮತದಾರರು ಟಿಎಂಸಿ ಪರವಾಗಿ ಶೇ 29.40, ಕಾಂಗ್ರೆಸ್+ಎಡಪಕ್ಷಗಳ ಪರವಾಗಿ ಶೇ 7.90 ಮಂದಿ ಮತ ಹಾಕಿದ್ದಾರೆ. ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಟಿಎಂಸಿ ಪರವಾಗಿ ನಿಂತಿರುವುದನ್ನು ಈ ದತ್ತಾಂಶಗಳು ತಿಳಿಸುತ್ತವೆ. ಶೇ 70ರಷ್ಟು ಮುಸ್ಲಿಮರು ಟಿಎಂಸಿ ಪರವಾಗಿ ಮತಚಲಾಯಿಸಿದ್ದಾರೆ. ಶೇ 14ರಷ್ಟು ಮಂದಿ ಬಿಜೆಪಿ ಪರವಾಗಿ, ಶೇ 14.10 ಮಂದಿ ಕಾಂಗ್ರೆಸ್+ಎಡಪಕ್ಷಗಳಿಗೆ ಮತದಾನ ಮಾಡಿದ್ದಾರೆ. ಇತರ ಜಾತಿಗಳ ಮತದಾನದ ಒಲವು ವಿಶ್ಲೇಷಿಸಿದಾಗ ಶೇ 40.50 ಮಂದಿ ಬಿಜೆಪಿಗೆ, ಶೇ 32.40 ಮಂದಿ ಟಿಎಂಸಿಗೆ ಮತ್ತು ಶೇ 10ರಷ್ಟು ಜನರು ಕಾಂಗ್ರೆಸ್+ಎಡಪಕ್ಷಗಳಿಗೆ ಮತ ನೀಡಿದ್ದಾರೆ.
ಅಸ್ಸಾಂ: ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟ ನಿಚ್ಚಳ ಮೇಲುಗೈ ಸಾಧಿಸಲಿದೆ.
ಬಿಜೆಪಿ ಮೈತ್ರಿಕೂಟ: 75-85 ಕಾಂಗ್ರೆಸ್ ಮೈತ್ರಿಕೂಟ: 40-50 ಇತರರು: 1-4
ಅಸ್ಸಾಂ: ಪಿ-ಮಾರ್ಕ್ ಸಮೀಕ್ಷೆ
ಪಿ-ಮಾರ್ಕ್ ಸಮೀಕ್ಷೆಯೂ ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟವೇ ಮೇಲುಗೈ ಸಾಧಿಸಲಿದೆ ಎಂದು ಹೇಳಿದೆ.
ಬಿಜೆಪಿ ಮೈತ್ರಿಕೂಟ: 62-70 ಕಾಂಗ್ರೆಸ್ ಮೈತ್ರಿಕೂಟ: 56-64 ಇತರರು: 0-4
ಪಶ್ಚಿಮ ಬಂಗಾಳ: ಯಾರು ಯಾರಿಗೆ ಮತ ಚಲಾಯಿಸಿದ್ದಾರೆ?
ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದ ಪುರುಷರ ಪೈಕಿ ಶೇ 42.90 ಮಂದಿ ಬಿಜೆಪಿಗೆ, ಶೇ 42.60 ಮಂದಿ ಟಿಎಂಸಿಗೆ ಮತ್ತು ಶೇ 11.50 ಮಂದಿ ಕಾಂಗ್ರೆಸ್+ಎಡಪಕ್ಷಗಳಿಗೆ ಮತ ಚಲಾಯಿಸಿದ್ದಾಗಿ ಹೇಳಿದ್ದಾರೆ. ಮಹಿಳೆಯರ ಪೈಕಿ ಶೇ 45.20 ಮಂದಿ ಟಿಎಂಸಿಗೆ ಶೇ 38.10 ಮಂದಿ ಬಿಜೆಪಿಗೆ ಮತ್ತು ಶೇ 9.90 ಮಂದಿ ಕಾಂಗ್ರೆಸ್+ಎಡಪಕ್ಷಗಳಿಗೆ ಮತ ಚಲಾಯಿಸಿದ್ದಾಗಿ ಹೇಳಿದ್ದಾರೆ. ಒಟ್ಟಾರೆ ಮತ ಗಳಿಕೆಯಲ್ಲಿ ಟಿಎಂಸಿ ಮುಂದಿರುವುದು ಗೋಚರಿಸುತ್ತದೆ. ಟಿಎಂಸಿ ಪರವಾಗಿ ಶೇ 43.90, ಬಿಜೆಪಿ ಪರವಾಗಿ ಶೇ 40.50, ಕಾಂಗ್ರೆಸ್+ಎಡಪಕ್ಷಗಳ ಪರವಾಗಿ ಶೇ 10.70 ಮಂದಿ ಮತಚಲಾಯಿಸಿದ್ದಾರೆ.
ಅಸ್ಸಾಂ: ಎಬಿಪಿ-ಸಿ ವೋಟರ್ ಸಮೀಕ್ಷೆ
ಎಬಿಪಿ-ಸಿ ವೋಟರ್ ಸಮೀಕ್ಷೆ ಪ್ರಕಾರ ಅಸ್ಸಾಂನಲ್ಲಿ ಎನ್ಡಿಎ ಮೈತ್ರಿಕೂಟ ಮೇಲುಗೈ ಸಾಧಿಸಲಿದೆ.
ಎನ್ಡಿಎ: 58-71 ಕಾಂಗ್ರೆಸ್ ಮೈತ್ರಿ: 53-66 ಇತರರು: 0-5
ಇತರ ಸಮೀಕ್ಷೆಗಳು ಏನನ್ನಲಿವೆ?
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ರಿಪಬ್ಲಿಕ್ ಟಿವಿ-ಸಿಎನ್ಎಕ್ಸ್ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಡಿಎಂಕೆ ಮೈತ್ರಿಕೂಟ 160-170 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಎಐಎಡಿಎಂಕೆ ಮೈತ್ರಿಕೂಟ 58-68 ಕ್ಷೇತ್ರಗಳಲ್ಲಿ, ಎಎಂಎಂಕೆ ಮೈತ್ರಿಕೂಟ 4-6 ಕ್ಷೇತ್ರಗಳಲ್ಲಿ ಗೆಲ್ಲಲಿದೆ.
ಅಸ್ಸಾಂ ವಿಧಾನಸಭೆಯಲ್ಲಿ ಈ ಬಾರಿಯೂ ಎನ್ಡಿಎ ಮುನ್ನಡೆ ಎನ್ನುತ್ತಿವೆ ಸಮೀಕ್ಷೆಗಳು
ಅಸ್ಸಾಂ ವಿಧಾನಸಭೆಗೆ ಸಂಬಂಧಿಸಿದಂತೆ ವಿವಿಧ ಸಂಸ್ಥೆಗಳು ನಡೆಸಿದ ಮತಗಟ್ಟೆ ಸಮೀಕ್ಷೆಗಳ ವಿವರಗಳನ್ನು ಗಮನಿಸಿದರೆ ಈ ಬಾರಿಯೂ ಮತದಾರರ ಒಲವು ಎನ್ಡಿಎ ಪರವಾಗಿಯೇ ವ್ಯಕ್ತವಾಗಿರುವುದು ತಿಳಿಯುತ್ತದೆ. 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಅಧಿಕಾರಕ್ಕೆ ಬರಲು 64 ಸ್ಥಾನ ಗೆಲ್ಲಬೇಕಿದೆ.
ಕೇರಳದಲ್ಲಿ ಮತ್ತೊಮ್ಮೆ ಎಲ್ಡಿಎಫ್: Tv9-Polstrat ಸಮೀಕ್ಷೆ
ಆಡಳಿತಾರೂಢ ಎಲ್ಡಿಎಫ್ ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎಂದು Tv9-Polstrat ಸಮೀಕ್ಷೆ ಹೇಳಿದೆ
ಕೇರಳದಲ್ಲಿ ಮತೊಮ್ಮೆ ಎಲ್ಡಿಎಫ್ ಸರ್ಕಾರವೇ ಅಧಿಕಾರಕ್ಕೇರಲಿದೆ ಎಂಬ ಅಭಿಪ್ರಾಯ Tv9-Polstrat ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.https://t.co/JjiWOkFWlW#TV9ExitPoll #ElectionResultWithTv9 #Assemblyelections2021 #Assemblyelections
— TV9 Kannada (@tv9kannada) April 29, 2021
ಪಶ್ಚಿಮ ಬಂಗಾಳ Tv9-Polstrat ಸಮೀಕ್ಷೆ: ಟಿಎಂಸಿ ಪರ ಜನರ ಒಲವು
ಪಶ್ಚಿಮ ಬಂಗಾಳದಲ್ಲಿ ನಡೆಸಿದ Tv9-Polstrat ಸಮೀಕ್ಷೆಯಲ್ಲಿ ಜನರ ಒಲವು ಟಿಎಂಸಿ ಪರವಾಗಿರುವ ಅಂಶ ಎದ್ದು ಕಾಣುತ್ತದೆ.
ಪಶ್ಚಿಮ ಬಂಗಾಳದಲ್ಲಿ ನಡೆಸಿದ Tv9-Polstrat ಸಮೀಕ್ಷೆಯಲ್ಲಿ ಜನರ ಒಲವು ಟಿಎಂಸಿ ಪರವಾಗಿರುವ ಅಂಶ ಎದ್ದು ಕಾಣುತ್ತದೆ.
Link: https://t.co/8beBQi5KPh#TV9ExitPoll #ElectionResultWithTv9 #WestBengalAssemblyElections #TMC #BJP
— TV9 Kannada (@tv9kannada) April 29, 2021
ತಮಿಳುನಾಡು: ಪಿ-ಮಾರ್ಕ್ ಸಮೀಕ್ಷೆ
ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ ಮೈತ್ರಿ ಕೂಟಕ್ಕೆ ಮುನ್ನಡೆ ಎಂದು ಪಿ-ಮಾರ್ಕ್ ಸಮೀಕ್ಷೆಯೂ ಹೇಳಿದೆ.
ಡಿಎಂಕೆ ಮೈತ್ರಿ: 165-190 ಎಐಎಡಿಎಂಕೆ ಮೈತ್ರಿ: 165-190 ಎಎಂಎಂಕೆ ಮೈತ್ರಿ: 1-3
ಪಶ್ಚಿಮ ಬಂಗಾಳ: ಎಬಿಪಿ ಸಿ-ವೋಟರ್ ಸಮೀಕ್ಷೆಯಲ್ಲೂ ಟಿಎಂಸಿ ಮುನ್ನಡೆ ಸಾಧ್ಯತೆ
ಎಬಿಪಿ ಸಿ-ವೋಟರ್ ಸಮೀಕ್ಷೆಯಲ್ಲೂ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಮತಗಳಿಕೆ ಮತ್ತು ಸ್ಥಾನ ಗೆಲ್ಲುವ ಸಾಧ್ಯತೆಯು ಬಿಜೆಪಿಗಿಂತಲೂ ಹೆಚ್ಚಿದೆ. ಟಿಎಂಸಿ ಶೇ 42.1 ಮತ, 152-165 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಬಿಜೆಪಿ ಶೇಕಡಾ 39 ಮತ, 109-121 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಶೇ 15.4 ಮತ, 14-25 ಸ್ಥಾನಗಳನ್ನು ಗೆಲ್ಲಲಿವೆ ಎಂದು ಎಬಿಪಿ ಸಿ-ವೋಟರ್ ಸಮೀಕ್ಷೆ ತಿಳಿಸುತ್ತದೆ.
ಮೂರನೇ ಬಾರಿ ದೀದಿ ಸಿಎಂ ಆಗಲಿದ್ದಾರೆ ಎನ್ನುತ್ತಿವೆ ಸಮೀಕ್ಷೆಗಳು
ಪಶ್ಚಿಮ ಬಂಗಾಳದ ಮತದಾರರು ತಿಳಿಸಿರುವ ಸಮೀಕ್ಷೆಯ ದತ್ತಾಂಶಗಳನ್ನು ವಿಶ್ಲೇಷಿಸಿದಾಗ ಟಿಎಂಸಿ 152ರಿಂದ 162, ಬಿಜೆಪಿ 115-125 ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್-ಎಡಪಕ್ಷಗಳು ರಚಿಸಿಕೊಂಡಿರುವ ತೃತೀಯ ರಂಗ 16ರಿಂದ 26 ಕ್ಷೇತ್ರಗಳಲ್ಲಿ ಗೆದ್ದು ಬೀಗುವ ಸಾಧ್ಯತೆಯಿರುವ ಅಂಶ ವ್ಯಕ್ತವಾಗಿದೆ. ಒಟ್ಟು ಮತಗಳಿಕೆಯ ಪ್ರಮಾಣದಲ್ಲಿ ಟಿಎಂಸಿ ಶೇ 43.90, ಬಿಜೆಪಿ ಶೇ 40.50, ಕಾಂಗ್ರೆಸ್+ಎಡಪಕ್ಷಗಳು ಶೇ 10.70ರಷ್ಟು ಮತ ಪಡೆಯಲಿವೆ ಎಂದು ಸಮೀಕ್ಷೆ ಹೇಳಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ
ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಿದೆ. ಸಮೀಕ್ಷೆಗಳ ಪ್ರಕಾರೆ ಈ ಬಾರಿಯೂ ಅವರು ಗೆದ್ದರೆ ಮೂರನೇ ಬಾರಿ ಸಿಎಂ ಆಗುವ ಅವಕಾಶ ಅವರ ಮುಂದೆ ತೆರೆದುಕೊಳ್ಳಲಿದೆ. ಸರ್ಕಾರ ರಚಿಸುವ ಎಲ್ಲ ಕಸರತ್ತುಗಳ ನಡುವೆಯೂ ಬಿಜೆಪಿ 100ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಸರ್ಕಾರ ರಚಿಸಲು ಆಗದಿದ್ದರೂ 100 ಕ್ಷೇತ್ರಗಳನ್ನು ಗೆದ್ದದ್ದೇ ಆದಲ್ಲಿ ಅದು ಬಿಜೆಪಿಯ ಬಹುದೊಡ್ಡ ಸಾಧನೆಯೇ ಆಗಲಿದೆ.
ಪುದುಚೇರಿಯಲ್ಲಿ ಗೆಲ್ಲಲಿದೆಯೇ ಎಐಎಡಿಎಂಕೆ?
Tv9-Polstrat ಸಮೀಕ್ಷೆ ಪ್ರಕಾರ ಪುದುಚೆರಿಯಲ್ಲಿ ಎಐಎಡಿಎಂಕೆ ಮುನ್ನಡೆ ಗಳಿಸುವ ಸಾಧ್ಯತೆಯಿದೆ. ಕಾಂಗ್ರೆಸ್ 11-13 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಯಿದ್ದು, ಎಐಎಡಿಎಂಕೆ 17-19 ಕ್ಷೇತ್ರಗಳಲ್ಲಿ ಜಯ ಗಳಿಸುವ ಸಾಧ್ಯತೆಯಿದೆ. ತಮಿಳುನಾಡಿನಲ್ಲಿ ಹಿನ್ನಡೆ ಗಳಿಸುವ ಸಾಧ್ಯತೆಯಿದ್ದರೂ ಪುದುಚೇರಿಯಲ್ಲಿ ಎಐಎಡಿಎಂಕೆ ಮುನ್ನಡೆ ಗಳಿಸುವ ಕುರಿತು ಸಮೀಕ್ಷೆ ಹೇಳುತ್ತದೆ.
ಅಸ್ಸಾಂನಲ್ಲಿ ಎನ್ಡಿಎಗೆ ಮುನ್ನಡೆ ಸಾಧ್ಯತೆ
Tv9-Polstrat ಸಮೀಕ್ಷೆ ಪ್ರಕಾರ ಅಸ್ಸಾಂ ರಾಜ್ಯದಲ್ಲಿ ಎನ್ಡಿಎ ಮುನ್ನಡೆ ಗಳಿಸುವ ಸಾಧ್ಯತೆಯಿದೆ. ಎನ್ಡಿಎ 59-69 ಕ್ಷೇತ್ರಗಳಲ್ಲಿ ಜಯಗಳಿಸುವ ಸಾಧ್ಯತೆಯಿದ್ದು, ಯುಪಿಎ 55-65 ಕ್ಷೇತ್ರಗಳಲ್ಲಿ ಜಯಭೇರಿ ಗಳಿಸುವ ಸಾಧ್ಯತೆಯಿದೆ. ಇತರರು 0-3 ಕ್ಷೇತ್ರಗಳಲ್ಲಿ ಜಯ ಗಳಿಸುವ ಸಾಧ್ಯತೆ ಹೆಚ್ಚಿದೆ.
ತಮಿಳುನಾಡಿನಲ್ಲಿ ಡಿಎಂಕೆಗೆ ಮುನ್ನಡೆ ಸಾಧ್ಯತೆ
Tv9-Polstrat ಸಮೀಕ್ಷೆ ಪ್ರಕಾರ ತಮಿಳುನಾಡಿನಲ್ಲಿ ಎಐಎಡಿಎಂಕೆಗೆ ಹಿನ್ನಡೆ ಸಾಧ್ಯತೆ ವ್ಯಕ್ತವಾಗಿದೆ. ಡಿಎಂಕೆಗೆ ಗೆಲುವು ಸಾಧ್ಯತೆ ಹೆಚ್ಚಿದೆ. ಎಐಎಡಿಎಂಕೆ 75-85 ಸ್ಥಾನದಲ್ಲಿ ಗೆಲುವು ಸಾಧಿಸುವ ಸಾಧ್ಯತೆಯಿದ್ದು, ಡಿಎಂಕೆ 143-153 ಕ್ಷೇತ್ರಗಳಲ್ಲಿ ಜಯಭೇರಿ ಗಳಿಸುವ ಸಾಧ್ಯತೆಯಿದೆ. ಎಂಎನ್ಎಂ ಪಕ್ಷ 2 ಕ್ಷೇತ್ರಗಳಲ್ಲಿ ಗೆಲುವು ಸಾಧ್ಯತೆಯಿದ್ದು, 8-10 ಕ್ಷೇತ್ರಗಳಲ್ಲಿ ಇರರರು ಗೆದ್ದು ಬೀಗುವ ಸಾಧ್ಯತೆಯಿದೆ.
ಪಶ್ಚಿಮ ಬಂಗಾಳ; ಟಿಎಂಸಿಯೇ ಮತ್ತೆ ಗೆಲ್ಲುವ ಸಾಧ್ಯತೆ
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸ್ಪಷ್ಟ ಬಹುಮತ ಪಡೆಯಲಿದೆ. ಟಿಎಂಸಿ 152ರಿಂದ 162 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಬಿಜೆಪಿ 115ರಿಂದ 125 ಕ್ಷೇತ್ರಗಳಲ್ಲಿ ಜಯಗಳಿಸುವ ಸಾಧ್ಯತೆ ದಟ್ಟವಾಗಿದೆ. ಎಡಪಕ್ಷಗಳು 16ರಿಂದ 26 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂದು ಟಿವಿ9 ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ. ಟಿಎಂಸಿಯೇ ಮತ್ತೊಮ್ಮೆ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಿದೆ.
ಕೊವಿಡ್ ನಡುವೆಯೇ ನಡೆದ ಚುನಾವಣೆ
ಈ ಎಲ್ಲ ಚುನಾವಣೆಗಳು ನಡೆಯುವ ಸಂದರ್ಭದಲ್ಲೇ ದೇಶದಲ್ಲಿ ಕೊವಿಡ್ ಸೋಂಕು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗತೊಡಗಿತು. ಒಂದೆಡೆ ಗಣತಂತ್ರದ ಹಬ್ಬ. ಇನ್ನೊಂದೆಡೆ ಕೊವಿಡ್ ಸೋಂಕಿನಿಂದ ಜನರ ಪರದಾಟ. ರಾಜಕೀಯ ನಾಯಕರ ಎಗ್ಗಿಲ್ಲದ ಚುನಾವಣಾ ಪ್ರಚಾರ ಮೆರವಣಿಗೆ, ಸಭೆ, ರೋಡ್ ಶೋ. ಈ ಎಲ್ಲವುಗಲ ನಡುವೆಯೇ ಪಶ್ಚಿಮ ಬಂಗಾಳದಲ್ಲಿ ಕೊವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ, ಪ್ರದಾನಿ ನರೇಂದ್ರ ಮೋದಿ ಕೊನೆಯ ಘಳಿಗೆಯಲ್ಲಿ ಕೆಲವು ಚುನಾವಣಾ ಪ್ರಚಾರ ಸಭೆಯನ್ನು ರದ್ದುಗೊಳಿಸಿದರು.
ದುಪ್ಪಟ್ಟಾಗಿದೆ ಫಲಿತಾಂಶದ ಮೇಲಿನ ಕುತೂಹಲ
ಈ ಎಲ್ಲ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳು ಫಲಿತಾಂಶವನ್ನು ಅತ್ಯಂತ ಕುತೂಹಲದಿಂದ ಕಾಯುವಂತೆ ಮಾಡಿವೆ. ಮಿಕ್ಕೆಲ್ಲ ರಾಜ್ಯಗಳಿಗಿಂತ ಅಸ್ಸಾಂನಲ್ಲಿ ಕಾಂಗ್ರೆಸ್ನ ಪ್ರಚಾರದ ಅಬ್ಬರ ತೀವ್ರವಾಗಿತ್ತು. ಕೇರಳ, ಪುದುಚೇರಿಗಳಲ್ಲೂ ಯಾರು ಗೆಲ್ಲುತ್ತಾರೆ ಎಂಬುದು ಅತಿ ಕುತೂಹಲಕಾರಿ ವಿಷಯ. ಪುದುಚೇರಿಯಲ್ಲಂತೂ ಚುನಾವಣೆಯ ಹೊಸ್ತಿಲಲ್ಲೇ ಹಾಲಿ ಮುಖ್ಯಮಂತ್ರಿ ಕುರ್ಚಿ ಬಿಟ್ಟಿಳಿಯಬೇಕಾಯಿತು. ಪಶ್ಚಿಮ ಬಂಗಾಳವನ್ನೂ ಸೇರಿ ಈ ಎಲ್ಲ ರಾಜ್ಯಗಳಲ್ಲಿ ರಾಷ್ಟ್ರ ರಾಜಕೀಯದ ನಾಯಕರೇ ಈ ಎಲ್ಲ ಚುನಾವಣೆಗಳಲ್ಲೂ ಪ್ರಚಾರದ ಕಣಕ್ಕಿಳಿದಿದ್ದರು. ಹೀಗಾಗಿ ಫಲಿತಾಂಶದ ಮೇಲಿನ ಕುತೂಹಲ ದುಪ್ಪಟ್ಟಾಗಿದೆ.
Published On - Apr 29,2021 11:18 PM