AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Exit Poll Results 2021: ಅಸ್ಸಾಂನಲ್ಲಿ ಯುಪಿಎ ಮತಗಳಿಕೆ ಹೆಚ್ಚು, ಆದರೆ ಎನ್​ಡಿಎಗೆ ಹೆಚ್ಚು ಸ್ಥಾನ; ಕುತೂಹಲ ಹುಟ್ಟುಹಾಕಿದೆ Tv9-Polstrat ಸಮೀಕ್ಷೆ

Assam Exit Poll Results 2021: ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಹೆಚ್ಚು ಸ್ಥಾನಗಳನ್ನು ಗಳಿಸುತ್ತದೆ ಎಂದು ತಿಳಿಸುವ ಸಮೀಕ್ಷೆ, ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಮತಗಳಿಕೆ ಪ್ರಮಾಣವು ಎನ್​ಡಿಎ ಮೈತ್ರಿಕೂಟಕ್ಕಿಂತಲೂ ಹೆಚ್ಚಾಗಿರುತ್ತದೆ ಎಂದು ಹೇಳಿದೆ.

Exit Poll Results 2021: ಅಸ್ಸಾಂನಲ್ಲಿ ಯುಪಿಎ ಮತಗಳಿಕೆ ಹೆಚ್ಚು, ಆದರೆ ಎನ್​ಡಿಎಗೆ ಹೆಚ್ಚು ಸ್ಥಾನ; ಕುತೂಹಲ ಹುಟ್ಟುಹಾಕಿದೆ Tv9-Polstrat ಸಮೀಕ್ಷೆ
ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್
Ghanashyam D M | ಡಿ.ಎಂ.ಘನಶ್ಯಾಮ
|

Updated on:Apr 29, 2021 | 9:18 PM

Share

ದೆಹಲಿ: ಅಸ್ಸಾಂನಲ್ಲಿ ಈ ಬಾರಿಯೂ ಆಡಳಿತಾರೂಢ ಎನ್​ಡಿಎ ಮುನ್ನಡೆ ಸಾಧಿಸುವ ಸಾಧ್ಯತೆಯಿದೆ ಎಂದು Tv9-Polstrat ಸಮೀಕ್ಷೆ ತಿಳಿಸಿದೆ. ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಹೆಚ್ಚು ಸ್ಥಾನಗಳನ್ನು ಗಳಿಸುತ್ತದೆ ಎಂದು ತಿಳಿಸುವ ಸಮೀಕ್ಷೆ, ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಮತಗಳಿಕೆ ಪ್ರಮಾಣವು ಎನ್​ಡಿಎ ಮೈತ್ರಿಕೂಟಕ್ಕಿಂತಲೂ ಹೆಚ್ಚಾಗಿರುತ್ತದೆ ಎಂದು ಹೇಳಿದೆ.

ಅಸ್ಸಾಂನಲ್ಲಿ ಮಾರ್ಚ್ 27, ಏಪ್ರಿಲ್ 1 ಮತ್ತು ಏಪ್ರಿಲ್ 6ರಂದು ಮೂರು ಹಂತಗಳಲ್ಲಿ ಮತದಾನ ನಡೆದಿತ್ತು. ಒಟಟು 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಬಹುಮತ ಗಳಿಸಲು ಯಾವುದೇ ಪಕ್ಷ ಅಥವಾ ಮೈತ್ರಿಕೂಟವು 64 ಸ್ಥಾನ ಪಡೆಯಬೇಕಿದೆ. ಮೇ 2ರಂದು ಮತಎಣಿಕೆ ನಡೆಯಲಿದ್ದು ಫಲಿತಾಂಶ ಪ್ರಕಟವಾಗಲಿದೆ.

ಅಸ್ಸಾಂನಲ್ಲಿ Tv9-Polstrat ಸಮೀಕ್ಷೆ ವೇಳೆ ಪ್ರತಿಕ್ರಿಯಿಸಿದ್ದ ಪುರುಷ ಮತದಾರರ ಪೈಕಿ ಶೇ 41.30 ಮಂದಿ ಎನ್​ಡಿಎಗೆ, ಶೇ 44.60 ಮಂದಿ ಯುಪಿಎ ಪರ ಮತ ಚಲಾಯಿಸಿದ್ದಾಗಿ ಹೇಳಿದ್ದರು. ಮಹಿಳೆಯರ ಪೈಕಿ ಶೇ 42.10 ಮಂದಿ ಎನ್​ಡಿಎಗೆ, ಶೇ 46.20 ಮಂದಿ ಯುಪಿಎಗೆ ಮತ ಚಲಾಯಿಸಿದ್ದಾಗಿ ತಿಳಿಸಿದ್ದರು. ಒಟ್ಟಾರೆ ಮತಗಳಿಕೆಯಲ್ಲಿ ಎನ್​ಡಿಎ ಶೇ 41.70, ಯುಪಿಎ ಶೇ 45.40, ಇತರರು ಶೇ 12.90 ಪಾಲು ಪಡೆಯುವ ಸಾಧ್ಯತೆಯಿದೆ.

ಸಮುದಾಯವಾರು ವಿಶ್ಲೇಷಣೆಯಲ್ಲಿ ಎಸ್​ಸಿ/ಎಸ್​ಟಿಗೆ ಸೇರಿದವರಲ್ಲಿ ಎನ್​ಡಿಎಗೆ ಶೇ 53.90, ಯುಪಿಗೆ ಶೇ 31.90, ಇತರರಿಗೆ ಶೇ 14.20 ಮತ ಚಲಾಯಿಸಿದ್ದಾರೆ. ಮುಸ್ಲಿಮರ ಮತಗಳು ಯುಪಿಎಗೆ ಶೇ 79.90 ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೆಯಾಗಿದೆ. ಎನ್​ಡಿಎಗೆ ಶೇ 13.90ರಷ್ಟು ಮತ ಸಿಕ್ಕಿದೆ. ಹಿಂದೂಗಳಲ್ಲಿ ಇತರ ಸಮುದಾಯದ ಮತಗಳು ಎನ್​ಡಿಎಗೆ ಶೇ 57.90 ಹೆಚ್ಚಾಗಿ ಬಿದ್ದಿವೆ. ಯುಪಿಎಗೆ ಶೇ 24.90 ಮತಗಳು ಸಿಕ್ಕಿವೆ.

Assam Poll

ಅಸ್ಸಾಂ ಚುನಾವಣಾ ಸಮೀಕ್ಷೆ

ಒಟ್ಟಾರೆ ಮತಗಳಿಕೆಯಲ್ಲಿ ಯುಪಿಎ ಶೇ 45.40 ಮುಂದಿದೆ. ಎನ್​ಡಿಎ ಶೇ 41.70 ಮತಗಳಿಕೆ ಕಡಿಮೆಯಿದೆ. ಆದರೆ ಸ್ಥಾನಗಳಿಕೆ ವಿಚಾರದಲ್ಲಿ ಯುಪಿಎ 55-65 ಸ್ಥಾನ ಗೆಲ್ಲಬಹುದು ಎಂಬ ನಿರೀಕ್ಷೆಯಿದೆ. ಆದರೆ ಎನ್​ಡಿಎ 59-69 ಸ್ಥಾನಗಳೊಂದಿಗೆ ಅಧಿಕಾರ ಉಳಿಸಿಕೊಳ್ಳಬಹುದು ಎಂದು ಸಮೀಕ್ಷೆಯು ಭವಿಷ್ಯ ನುಡಿದಿದೆ.

(Tv9 Bharatvarsh exit poll results 2021 polstrat Assam assembly elections exit poll updates in Kannada)

ಇದನ್ನೂ ಓದಿ: Exit Poll Results 2021: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್ ಸಾಧ್ಯತೆ; Tv9-Polstrat ಸಮೀಕ್ಷೆ

ಇದನ್ನೂ ಓದಿ: Exit Poll Results 2021: ತಮಿಳುನಾಡಿನಲ್ಲಿ ಎಐಎಡಿಎಂಕೆಗೆ ಹಿನ್ನಡೆ, ಡಿಎಂಕೆ ಗದ್ದುಗೇರುವ ಸಾಧ್ಯತೆ; Tv9-Polstrat ಸಮೀಕ್ಷೆ

Published On - 9:17 pm, Thu, 29 April 21

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ