ಕೊವಿಡ್​ ನಿಯಂತ್ರಣಕ್ಕೆ ಮತ್ತಷ್ಟು ಬಿಗಿಕ್ರಮಗಳನ್ನು ಸೂಚಿಸಿದ ಕೇಂದ್ರ ಗೃಹ ಇಲಾಖೆ

ಜನರು ಗುಂಪುಗೂಡಲು ಅವಕಾಶ ನೀಡಲೇಬಾರದು. ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಧಾರ್ಮಿಕ, ಸಾಂಸ್ಕೃತಿಕ, ಹಬ್ಬ-ಹರಿದಿನ-ಮೊದಲಾದ ಕಾರಣಗಳಿಗೆ ಜನ ಗುಂಪಾಗಿ ಸೇರುವದನ್ನು ತಡೆಯಬೇಕು.

ಕೊವಿಡ್​ ನಿಯಂತ್ರಣಕ್ಕೆ ಮತ್ತಷ್ಟು ಬಿಗಿಕ್ರಮಗಳನ್ನು ಸೂಚಿಸಿದ ಕೇಂದ್ರ ಗೃಹ ಇಲಾಖೆ
ಕೊವಿಡ್​ ಸೋಂಕಿಗೆ ಚಿಕಿತ್ಸೆ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:Apr 30, 2021 | 9:17 AM

ಕೊವಿಡ್-19 ಪ್ರಕರಣಗಳ ಸಂಖ್ಯೆ ಕಡಿಮೆಯಾಗುವ ಲಕ್ಷಣಗಳೇ ಕಾಣದಿರುವ ಹಿನ್ನೆಲೆಯಲ್ಲಿ ಸೋಂಕನ್ನು ತಡೆಯಲು ಗೃಹ ಸಚಿವಾಲಯವು ಮತ್ತಷ್ಟು ಬಿಗಿಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯನ್ನು ಮನಗಂಡು ಕೇಂದ್ರ ಆರೋಗ್ಯ ಇಲಾಖೆಯು ಸೂಚಿಸಿರುವ ಮಾರ್ಗಸೂಚಿಗಳ ಜೊತೆಗೆ ಇನ್ನೂ ಕೆಲ ಕ್ರಮಗಳನ್ನು ಪಾಲಿಸಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನವನ್ನು ನೀಡಿದೆ. ಈ ಎಲ್ಲ ಕ್ರಮಗಳು ಮೇ 31, 2021 ರವರೆಗೆ ಜಾರಿಯಲ್ಲಿರಬೇಕೆಂದು ಸಚಿವಾಲಯ ಹೇಳಿದೆ.

ಕೊವಿಡ್​ ನಿಯಂತ್ರಣಕ್ಕೆ ರೂಪಿಸಿರುವ ರಾಷ್ಟ್ರೀಯ ನಿರ್ದೇಶನಗಳನ್ನು ದೇಶದೆಲ್ಲೆಡೆ ಚಾಚೂ ತಪ್ಪದೆ ಪಾಲಿಸಬೇಕೆಂದು ಇಲಾಖೆ ಬಿಡುಗಡೆ ಮಾಡಿರುವ ಸೂಚನೆಯಲ್ಲಿ ತಿಳಿಸಲಾಗಿದೆ. ಆರೋಗ್ಯ ಇಲಾಖೆಯ ಮಾರ್ಗಸೂಚಿಗಳ ಜೊತೆಗೆ ರಾಷ್ಟ್ರೀಯ ನಿರ್ದೇಶನಗಳು ಕಟ್ಟುನಿಟ್ಟಾಗಿ ಜಾರಿಗೊಳ್ಳುತ್ತಿವೆ ಎನ್ನುವುದನ್ನು ಆಯಾ ಜಿಲ್ಲಾ ಮ್ಯಾಜಿಸ್ಟ್ರೇಟ್​ಗಳು ಖಾತರಿಪಡಿಸಿಕೊಳ್ಳಬೇಕು. ಪ್ರಸಕ್ತ ವಿದ್ಯಮಾನಗಳಲ್ಲಿ ಸೋಂಕನ್ನು ನಿಯಂತ್ರಿಸುವುದು ಅತ್ಯವಶ್ಯಕವಾಗಿದೆ. ಸದರಿ ಮಾರ್ಗಸೂಚಿಗಳನ್ನು ಮತ್ತು ನಿರ್ದೇಶನಗಳನ್ನು ಯಾರಾದರೂ ಉಲ್ಲಂಘಿಸಿದರೆ ವಿಪತ್ತು ನಿರ್ವಹಣೆ ಕಾಯ್ದೆ 2005ರ ಅನುಸಾರ ಕ್ರಮ ತೆಗೆದುಕೊಳ್ಳಬೇಕು.

ಕೊವಿಡ್​ ವೈರಸ್ ಕೇವಲ ಮಾನವನಿಂದ ಹರಡುತ್ತದೆ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಸಬೇಕು. ಮಾನವನ ದೇಹದಲ್ಲಿ ಮಾತ್ರ ಅದು ಮನೆ ಮಾಡುತ್ತದೆ. ಹಾಗಾಗಿ ವೈರಸನ್ನು ನಿಯಂತ್ರಿಸಬೇಕು ಅಂದರೆ ಮಾನವರನ್ನು ನಿಯಂತ್ರಿಸಬೇಕು. ಮಾನವನನ್ನು ನಿಯಂತ್ರಸಿದಾಗ ಮಾತ್ರ ವೈರಸ್ ಹತೋಟಿಯಲ್ಲಿರುತ್ತದೆ. ಮತ್ತೂ ಸ್ಪಷ್ಟವಾಗಿ ಹೇಳಬೇಕೆಂದರೆ, ಜನರು ಮಾಸ್ಕ್ ಧರಿಸುವುದನ್ನು, ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನು, ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುವುದನ್ನು ಮುಂದುವರೆಸಿ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಬೇಕು.

ರೋಗ ಲಕ್ಷಣ ಇರುವವರು, ಸೋಂಕು ತಾಕಿಸಿಕೊಂಡವರು (ಪಾಸಿಟಿವ್ ರಿಪೋರ್ಟ್​ ಹೊಂದಿರುವವರು) ಸ್ವೇಚ್ಛೆಯಿಂದ ತಿರುಗಾಡುವುದನ್ನು ತಡೆಯಬೇಕು. ಏರಿಯಾವೊಂದರಲ್ಲಿ ಸೋಂಕು ಕ್ಲಸ್ಟರ್​​ಗಳಲ್ಲಿ ಕಾಣಿಸಿಕೊಂಡಿದ್ದರೆ, ಅಲ್ಲಿನ ಒಂದಷ್ಟು ಕುಟುಂಬಗಳನ್ನು ಐಸೋಲೇಟ್​​ ಮಾಡಿದರೆ ಸಾಲದು. ಆ ಇಡೀ ಏರಿಯಾದ ಸುತ್ತ ಒಂದು  ಸ್ಪಷ್ಟವಾದ ಬೌಂಡರಿ ನಿಗದಿಪಡಿಸಿ ಅಲ್ಲಿ ವಾಸಿಸುವ ಜನ ಈಚೆ ಬಾರದಂತೆ ನೋಡಿಕೊಳ್ಳಬೇಕು. ಅರೋಗ್ಯ ಇಲಾಖೆ ಸೂಚಿಸಿರುವ ಎಸ್​ಒಪಿ ಇದೇ ಆಗಿದೆ. ಕಂಟೇನ್​ಮೆಂಟ್​ ವಲಯವನ್ನು ಸ್ಥಾಪಿಸಲು ಸಾಕ್ಷ್ಯ ಆಧಾರಿತ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅಂಥ ನಿರ್ದಿಷ್ಟ ಏರಿಯಾದಲ್ಲಿನ ಪ್ರಕರಣಗಳು, ಸೋಂಕಿನ ಪ್ರಮಾಣ, ವೈದ್ಯಕೀಯ ಸೌಲಭ್ಯದ ಲಭ್ಯತೆ ಮೊದಲಾದವುಗಳನ್ನು ಪರಿಶೀಲಿಸಬೇಕು.

ಕಂಟೇನ್​ಮೆಂಟ್ ವಲಯಗಳನ್ನು ಸ್ಥಾಪಿಸುವ ಹಿಂದಿನ ಉದ್ದೇಶ ಸೋಂಕಿನ ನಾಗಾಲೋಟವನ್ನು ತಡೆಯುವುದಾಗಿದೆ . ಅದಕ್ಕಾಗಿ ಕೆಲವು ಕ್ರಮಗಳನ್ನು ಸ್ಥಳೀಯ ಆಡಳಿತ ತೆಗೆದುಕೊಳ್ಳಬೇಕು. ಅವುಗಳಲ್ಲಿ ಪ್ರಮುಖವಾದವು ಅಂದರೆ, ರಾತ್ರಿ ಕರ್ಫ್ಯೂ ಹೇರವುದು ಮತ್ತು ಹಗಲಿನಲ್ಲಿ ಸೆಕ್ಷನ್ 144 ಜಾರಿಗೊಳಿಸುವುದು. ಜನರು ಗುಂಪುಗೂಡಲು ಅವಕಾಶ ನೀಡಲೇಬಾರದು. ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಧಾರ್ಮಿಕ, ಸಾಂಸ್ಕೃತಿಕ, ಹಬ್ಬ-ಹರಿದಿನ-ಮೊದಲಾದ ಕಾರಣಗಳಿಗೆ ಜನ ಗುಂಪಾಗಿ ಸೇರುವದನ್ನು ತಡೆಯಬೇಕು.

ಮದುವೆ ಸಮಾರಂಭಗಳಲ್ಲಿ 50 ಕ್ಕಿಂತ ಜಾಸ್ತಿ ಜನ ಸೇರುವುದಕ್ಕೆ ಅವಕಾಶ ನೀಡಬಾರದು. ಶವಸಂಸ್ಕಾರಗಳಿಗೆ ಕೇವಲ 20 ಜನರಿಗೆ ಮಾತ್ರ ಅವಕಾಶ ನೀಡಬೇಕು.

ಶಾಪಿಂಗ್ ಮಾಲ್​ಗಳು, ಸಿನಿಮಾ ಹಾಲ್​, ಕ್ರೀಡಾ ಸಂಕೀರ್ಣ, ಜಿಮ್, ಸ್ಪಾ, ಈಜುಕೊಳ ಮೊದಲಾದವುಗಳನ್ನು ತೆರೆಯುವ ಅವಕಾಶ ನೀಡಲೇಬಾರದು.

ಮೇ 31ರವರೆಗಿನ ಎಲ್ಲ ನಿಬಂಧನೆಗಳ ನಡುವೆ ಅಗತ್ಯ ಸೇವೆಗಳು ಜಾರಿಯಲ್ಲಿರುತ್ತವೆ. ಈ ಸೇವೆಗಳ ಅಂತರರಾಜ್ಯ ಓಡಾಟದ ಮೇಲೂ ಯಾವುದೇ ನಿರ್ಬಂಧ ಇರುವುದಿಲ್ಲ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಶೇಕಡಾ 50 ರಷ್ಟು ಜನ ಮಾತ್ರ ಪ್ರಯಾಣಿಸಬಹುದು.

ಉದ್ದಿಮೆ, ವೈಜ್ಞಾನಿಕ ಸಂಸ್ಥೆ ಮೊದಲಾದ ಕಡೆಗಳಲ್ಲಿ ಕೆಲಸ ಮಾಡುವವರು ತಾವು ಕೆಲಸ ಮಾಡುವ ಸ್ಥಳಗಳಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಯಾರಲ್ಲಾದರೂ ಜ್ವರ ಕಂಡುಬಂದರೆ ಅವರನ್ನು ಕೂಡಲೇ ಟೆಸ್ಟಿಂಗ್​ಗೆ ಕರೆದೊಯ್ಯಬೇಕು.

ಆಫೀಸ್​ಗಳಲ್ಲಿ ಉದ್ಯೋಗಿಗಳ ಹಾಜರಾತಿ ಕೇವಲ ಶೇಕಡಾ 50 ರಷ್ಟಿರಬೇಕು.

ಕಂಟೇನ್​ಮೆಂಟ್​ ಏರಿಯಾಗಳನ್ನು ಘೋಷಿಸುವ ಮೊದಲು ಅದನ್ನು ಮಾಡುತ್ತಿರುವ ಬಗ್ಗೆ ಉದ್ಘೋಷಣೆ ಮಾಡಬೇಕು.

ಸಮುದಾಯಗಳ ಸ್ವಯಂ ಸೇವಕರು, ಮಾಜಿ ಯೋಧರು, ಎನ್​ವೈಕೆ/ಎನ್​ಎಸ್​ಎಸ್​ ಸದಸ್ಯರ ಸೇವೆಯನ್ನು ಬಳಸಿಕೊಳ್ಳಬೇಕು.

ಸೋಂಕನ್ನು ನಿಯಂತ್ರಣಕ್ಕೆ ತರಬೇಕಾದರೆ ಟೆಸ್ಟ್-ಟ್ರ್ಯಾಕ್-ಟ್ರೀಟ್ ಮತ್ತು ವ್ಯಾಕ್ಸಿನೇಟ್ ಸೂತ್ರವನ್ನು ಪಾಲಿಸುವುದು ಅತ್ಯವಶ್ಯಕವಾಗಿದೆ. ಇದರರ್ಥ ಶಂಕಿತರನ್ನು ಅಂದರೆ ಜ್ವರದಿಂದ ಬಳಲುತ್ತಿರುವವರನ್ನು ಕರದೊಯ್ದು ಟೆಸ್ಟ್​ ಮಾಡಿಸಬೇಕು, ಅವರಲ್ಲಿ ಸೋಂಕು ಇರೋದು ಪತ್ತೆಯಾದರೆ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿಸಬೇಕು. ಅವರು ಪೂರ್ಣ ಪ್ರಮಾಣದ ಚಿಕಿತ್ಸೆ ಪಡೆಯುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಕೊನೆಯದಾಗಿ, ಲಸಿಕಾ ಅಭಿಯಾನವನ್ನು ಚುರುಕುಗೊಳಿಸಬೇಕು.

ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಸೋಂಕು ಮಾರಕವಾಗಿದೆ, ಅದನ್ನು ಆರಂಭಿಕ ಹಂತದಲ್ಲೇ ಗುರುತಿಸಿದರೆ, ಬಹಳಷ್ಟು ಜನರ ಪ್ರಾಣ ಉಳಿಸಬಹುದು ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಗೃಹ ಇಲಾಖೆ ಗುರುವಾರದಂದು ಬಿಡುಗಡೆ ಮಾಡಿರುವ ನಿರ್ದೇಶನದಲ್ಲಿ ಹೇಳಿದೆ.

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಇಂದು 35,024 ಮಂದಿಗೆ ಕೊರೊನಾ ಸೋಂಕು, 270 ಸಾವು

Published On - 1:33 am, Fri, 30 April 21

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ