ಒಂದೇ ಮ್ಯಾಚ್ನಲ್ಲಿ ಬರೋಬ್ಬರಿ 34 ದಾಖಲೆ ಬರೆದ ಶುಭ್ಮನ್ ಗಿಲ್
Shubman Gill Records: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿರುವ ಶುಭ್ಮನ್ ಗಿಲ್ ಬರೋಬ್ಬರಿ 34 ದಾಖಲೆಗಳನ್ನು ಬರೆದಿದ್ದಾರೆ. ಅದು ಕೂಡ ತನ್ನ 25ನೇ ವಯಸ್ಸಿನಲ್ಲಿ ಎಂಬುದು ವಿಶೇಷ. ಈ ದಾಖಲೆಗಳೊಂದಿಗೆ ಗಿಲ್ ನಾಯಕನಾಗಿ ಶುಭಾರಂಭ ಮಾಡಿರುವುದು ವಿಶೇಷ.

Shubman Gill
ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಗೆಲುವು ದಾಖಲಿಸಿತು. ಈ ಭರ್ಜರಿ ಗೆಲುವಿನ ರೂವಾರಿ ಶುಭ್ಮನ್ ಗಿಲ್. ಏಕೆಂದರೆ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 269 ರನ್ ಬಾರಿಸಿದ್ದ ಗಿಲ್, ದ್ವಿತೀಯ ಇನಿಂಗ್ಸ್ನಲ್ಲಿ 161 ರನ್ ಕಲೆಹಾಕಿದರು. ಈ ಮೂಲಕ ಭಾರತ ತಂಡವು ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಭರ್ಜರಿ ಬ್ಯಾಟಿಂಗ್ನೊಂದಿಗೆ ಗಿಲ್ ಹಲವು ದಾಖಲೆಗಳನ್ನು ಬರೆದಿರುವುದು ವಿಶೇಷ. ಆ ದಾಖಲೆಗಳ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ…
- ಕ್ರಿಕೆಟ್ ಇತಿಹಾಸದಲ್ಲಿ ಟೆಸ್ಟ್ ಪಂದ್ಯದಲ್ಲಿ 400, ಏಕದಿನದಲ್ಲಿ 200, ಟಿ20ಐನಲ್ಲಿ 100 ರನ್ ಗಳಿಸಿದ ಏಕೈಕ ಆಟಗಾರ ಎಂಬ ವಿಶ್ವ ದಾಖಲೆ ಶುಭ್ಮನ್ ಗಿಲ್ ಪಾಲಾಗಿದೆ. (ಟೆಸ್ಟ್ 430, ಏಕದಿನದಲ್ಲಿ 208, ಟಿ20ಐನಲ್ಲಿ 126*)
- ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಧಿಕ ಒಟ್ಟು ಸ್ಕೋರ್ ದಾಖಲೆ ಕೂಡ ಗಿಲ್ ಹೆಸರಿಗೆ ಸೇರ್ಪಡೆಯಾಗಿದೆ. (430 ರನ್ಸ್)
- ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನಲ್ಲಿ ಭಾರತದ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ರೆಕಾರ್ಡ್ ಕೂಡ ಶುಭ್ಮನ್ ಗಿಲ್ ಪಾಲಾಗಿದೆ. (430 ರನ್ಸ್)
- ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟರ್ ಕೂಡ ಶುಭ್ಮನ್ ಗಿಲ್. (430 ರನ್ಸ್)
- ಟೆಸ್ಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಕಲೆಹಾಕಿದ ನಾಯಕನೆಂಬ ಹೆಗ್ಗಳಿಕೆಗೂ ಶುಭ್ಮನ್ ಗಿಲ್ ಪಾತ್ರರಾಗಿದ್ದಾರೆ. (269 ರನ್ಸ್)
- SENA ದೇಶಗಳಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ಭಾರತೀಯನ ದಾಖಲೆ ಕೂಡ ಗಿಲ್ ಪಾಲಾಗಿದೆ. (269 ರನ್ಸ್) (SENA = ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್, ಆಸ್ಟ್ರೇಲಿಯಾ)
- ಟೆಸ್ಟ್ ಪಂದ್ಯವೊಂದರಲ್ಲಿ ನಾಲ್ಕು ಶತಕಗಳ ಭಾಗವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 200+ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 100+ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಗಿಲ್ ತಮ್ಮದಾಗಿಸಿಕೊಂಡಿದ್ದಾರೆ.
- ಎಡ್ಜ್‌ಬಾಸ್ಟನ್‌ನಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ 50+ ಗಳಿಸಿದ ಮೊದಲ ಭಾರತೀಯ ನಾಯಕ ಎಂಬ ಹಿರಿಮೆಗೂ ಗಿಲ್ ಪಾತ್ರರಾಗಿದ್ದಾರೆ.
- ಬರ್ಮಿಂಗ್ಹ್ಯಾಮ್ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ 10ನೇ ಆಟಗಾರ ಶುಭ್ಮನ್ ಗಿಲ್. (269 ರನ್ಸ್)
- ಎಡ್ಜ್‌ಬಾಸ್ಟನ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಗರಿಷ್ಠ ಸ್ಕೋರ್ ದಾಖಲೆ ಸಹ ಗಿಲ್ ಪಾಲಾಗಿದೆ. (269 ರನ್ಸ್)
- ಮೊದಲ ಎರಡು ಟೆಸ್ಟ್‌ಗಳಲ್ಲಿ ಅತ್ಯಧಿಕ ರನ್ ಗಳಿಸಿದ ನಾಯಕ ಶುಭ್ಮನ್ ಗಿಲ್. (585 ರನ್ಸ್)
- ಟೆಸ್ಟ್ ಪಂದ್ಯವೊಂದರಲ್ಲಿ 400-ರನ್‌ಗಳನ್ನು ಕಲೆಹಾಕಿದ ಮೊದಲ ಭಾರತೀಯ ಗಿಲ್. (269 & 161 ರನ್ಸ್)
- ಎಡ್ಜ್‌ಬಾಸ್ಟನ್‌ನಲ್ಲಿ ಟೆಸ್ಟ್ ಪಂದ್ಯ ಗೆದ್ದ ಮೊದಲ ಭಾರತೀಯ ನಾಯಕ ಶುಭ್ಮನ್ ಗಿಲ್.
- ನಾಯಕತ್ವದ ಚೊಚ್ಚಲ ಸರಣಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಭಾರತೀಯ ಬ್ಯಾಟರ್ ಶುಭ್ಮನ್ ಗಿಲ್. (585 ರನ್ಸ್)
- ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ನಾಯಕನೆಂಬ ದಾಖಲೆ ಕೂಡ ಗಿಲ್ ಪಾಲಾಗಿದೆ. (8 ಸಿಕ್ಸರ್‌ಗಳು)
- ವಿದೇಶದಲ್ಲಿ ಟೆಸ್ಟ್ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ ಮೊದಲ ಭಾರತೀಯ ನಾಯಕ ಶುಭ್ಮನ್ ಗಿಲ್.
- ಇಂಗ್ಲೆಂಡ್‌ನಲ್ಲಿ ಟೆಸ್ಟ್ ಪಂದ್ಯದಲ್ಲಿ ಅತ್ಯಧಿಕ ರನ್‌ಗಳಿಸಿದ ಎರಡನೇ ಬ್ಯಾಟರ್ ಗಿಲ್. (430)
- ಟೆಸ್ಟ್ ಪಂದ್ಯದಲ್ಲಿ ನಾಯಕನಾಗಿ ಎರಡನೇ ಅತಿ ಹೆಚ್ಚು ಬೌಂಡರಿ ಬಾರಿಸಿದ ವಿಶ್ವ ದಾಖಲೆ ಶುಭ್ಮನ್ ಗಿಲ್ ಹೆಸರಿಗೆ ಸೇರ್ಪಡೆಯಾಗಿದೆ. (54 ಫೋರ್)
- ಒಂದೇ ಟೆಸ್ಟ್‌ನಲ್ಲಿ ಎರಡು ಬಾರಿ 150+ ಸ್ಕೋರ್‌ಗಳನ್ನು ಗಳಿಸಿದ ವಿಶ್ವ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಯನ್ನು ಗಿಲ್ ತಮ್ಮದಾಗಿಸಿಕೊಂಡಿದ್ದಾರೆ.
- ಇಂಗ್ಲೆಂಡ್‌ನಲ್ಲಿ ಅವಳಿ ಶತಕಗಳನ್ನು ಗಳಿಸಿದ ಎರಡನೇ ಭಾರತೀಯ ಎಂಬ ಹಿರಿಮೆಗೂ ಗಿಲ್ ಪಾತ್ರರಾಗಿದ್ದಾರೆ.
- ಇಂಗ್ಲೆಂಡ್‌ನಲ್ಲಿ 3 ಶತಕ ಸಿಡಿಸಿದ 3ನೇ ಕ್ಯಾಪ್ಟನ್ ಎಂಬ ಹೆಗ್ಗಳಿಕೆಯನ್ನು ಗಿಲ್ ತಮ್ಮದಾಗಿಸಿಕೊಂಡಿದ್ದಾರೆ. (4 ಇನ್ನಿಂಗ್ಸ್‌ಗಳಲ್ಲಿ 3*)
- ಟೆಸ್ಟ್ ಪಂದ್ಯದಲ್ಲಿ 250+ & 100+ ಗಳಿಸಿದ ವಿಶ್ವದ 3ನೇ ಬ್ಯಾಟರ್ ಎಂಬ ದಾಖಲೆಯನ್ನು ಗಿಲ್ ನಿರ್ಮಿಸಿದ್ದಾರೆ.
- ಟೆಸ್ಟ್ ಪಂದ್ಯದಲ್ಲಿ ಅವಳಿ ಶತಕಗಳನ್ನು ಬಾರಿಸಿದ 3ನೇ ಭಾರತೀಯ ನಾಯಕ ಎಂಬ ಹಿರಿಮೆಗೂ ಗಿಲ್ ಪಾತ್ರರಾಗಿದ್ದಾರೆ.
- ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ 3ನೇ ಕಿರಿಯ ನಾಯಕ ಶುಭ್ಮನ್ ಗಿಲ್. (25 ವರ್ಷ 291 ದಿನ)
- ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅವಳಿ ಶತಕಗಳನ್ನು ಬಾರಿಸಿದ ವಿಶ್ವದ 3ನೇ ಕ್ಯಾಪ್ಟನ್ ಶುಭ್ಮನ್ ಗಿಲ್.
- ಟೆಸ್ಟ್ ಮತ್ತು ಏಕದಿನ ಪಂದ್ಯಗಳೆರಡರಲ್ಲೂ ದ್ವಿಶತಕಗಳನ್ನು ಬಾರಿಸಿದ ವಿಶ್ವದ 5ನೇ ಆಟಗಾರ ಗಿಲ್. (ಟೆಸ್ಟ್‌ಗಳಲ್ಲಿ 269, ODIನಲ್ಲಿ 208)
- ಟೆಸ್ಟ್ ಪಂದ್ಯವೊಂದರಲ್ಲಿ ಅವಳಿ ಶತಕಗಳನ್ನು ಬಾರಿಸಿದ 3ನೇ ಭಾರತೀಯ ನಾಯಕನೆಂಬ ದಾಖಲೆ ಗಿಲ್ ಪಾಲಾಗಿದೆ.
- ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ಗಳಿಸಿದ 5ನೇ ಬ್ಯಾಟರ್ ಶುಭ್ಮನ್ ಗಿಲ್. (269 ರನ್ಸ್)
- ಟೆಸ್ಟ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ನಿಂದ ಗಳಿಸಿದ 7ನೇ ಅತ್ಯಧಿಕ ವೈಯಕ್ತಿಕ ಸ್ಕೋರ್ನ ದಾಖಲೆ ಕೂಡ ಗಿಲ್ ಪಾಲಾಗಿದೆ. (269 ರನ್ಸ್)
- ಇಂಗ್ಲೆಂಡ್‌ನಲ್ಲಿ ಪ್ರವಾಸಿ ಬ್ಯಾಟ್ಸ್‌ಮನ್ ಗಳಿಸಿದ 8ನೇ ಅತ್ಯಧಿಕ ವೈಯಕ್ತಿಕ ಸ್ಕೋರ್ ಶುಭ್ಮನ್ ಗಿಲ್ ಬ್ಯಾಟ್ನಿಂದ ಮೂಡಿಬಂದಿದೆ. (269 ರನ್ಸ್)
- ಒಂದೇ ಪಂದ್ಯದಲ್ಲಿ 200 ಮತ್ತು 100 ರನ್‌ಗಳಿಸಿದ ವಿಶ್ವ 9ನೇ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್.
- ಟೆಸ್ಟ್ ಪಂದ್ಯವೊಂದರಲ್ಲಿ ಅವಳಿ ಶತಕಗಳನ್ನು ಬಾರಿಸಿದ 9ನೇ ಭಾರತೀಯ ಬ್ಯಾಟ್ಸ್‌ಮನ್ ಗಿಲ್.
- ವಿದೇಶಿ ಟೆಸ್ಟ್ ಪಂದ್ಯವನ್ನು ಗೆದ್ದ ಅತ್ಯಂತ ಕಿರಿಯ ಭಾರತೀಯ ನಾಯಕನೆಂಬ (25 ವರ್ಷ 301 ದಿನ) ದಾಖಲೆ ಶುಭ್ಮನ್ ಗಿಲ್ ಪಾಲಾಗಿದೆ.
- 34. SENA ಟೆಸ್ಟ್‌ಗಳಲ್ಲಿ POTM ಗೆದ್ದ 8ನೇ ಭಾರತೀಯ ನಾಯಕನೆಂಬ ಹಿರಿಮೆಗೂ ಶುಭ್ಮನ್ ಗಿಲ್ ಪಾತ್ರರಾಗಿದ್ದಾರೆ.
