ಸರ್ಕಾರಿ ಕೆಲಸ ಸಿಗಲು ಕಾದಿದ್ದು ಬರೋಬ್ಬರಿ 24 ವರ್ಷ; ಅಂತೂ 57ರ ಹರೆಯದಲ್ಲಿ ಶಿಕ್ಷಕರ ನೇಮಕಾತಿ ಆದೇಶ ಬಂತು

| Updated By: ರಶ್ಮಿ ಕಲ್ಲಕಟ್ಟ

Updated on: Jun 21, 2022 | 8:56 PM

1998ರ ಡಿಎಸ್‌ಸಿ ಬ್ಯಾಚ್‌ನ ನೇಮಕಾತಿ ಕಡತಕ್ಕೆ ಮುಖ್ಯಮಂತ್ರಿಗಳು ಕಳೆದ ವಾರ ಸಹಿ ಹಾಕಿದ್ದಾರೆ. ಈ ಕ್ರಮದಿಂದ ಸುಮಾರು 4,500 ಅಭ್ಯರ್ಥಿಗಳ ಶಿಕ್ಷಕರಾಗುವ ಕನಸು ನನಸಾಯಿತು.

ಸರ್ಕಾರಿ ಕೆಲಸ ಸಿಗಲು ಕಾದಿದ್ದು ಬರೋಬ್ಬರಿ 24 ವರ್ಷ; ಅಂತೂ 57ರ ಹರೆಯದಲ್ಲಿ ಶಿಕ್ಷಕರ ನೇಮಕಾತಿ ಆದೇಶ ಬಂತು
ಅಲ್ಲಕ ಕೇದಾರೇಶ್ವರ ರಾವ್
Image Credit source: abplive
Follow us on

ದೆಹಲಿ: ಆಂಧ್ರಪ್ರದೇಶದ (Andhra Pradesh) ಶ್ರೀಕಾಕುಳಂನಲ್ಲಿನ (Srikakulam) ಅಲ್ಲಕ ಕೇದಾರೇಶ್ವರ ರಾವ್ ಅವರಿಗೆ ಶಿಕ್ಷಕರಾಗಿ (Teacher) ಉದ್ಯೋಗ ಸಿಕ್ಕಿದೆ. ಈ ಉದ್ಯೋಗ ಸಿಗಲು ಅವರು ಕಾದಿದ್ದು ಬರೋಬ್ಬರಿ 24 ವರ್ಷ. ಈ ಸುದೀರ್ಘವಾದ ಕಾಯುವಿಕೆಯ ನಂತರ ಅವರಿಗೆ ಉದ್ಯೋಗ ಸಿಕ್ಕಿದ್ದು, ಇನ್ನೇನು ಕೆಲವೇ ವರ್ಷಗಳಲ್ಲಿ ನಿವೃತ್ತರಾಗಲಿದ್ದಾರೆ. ಅಂದರೆ ರಾವ್ ಅವರಿಗೆ ಈಗ 57 ವರ್ಷ! . ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ಅಂತಿಮವಾಗಿ 1998 ರ ಜಿಲ್ಲಾ ಆಯ್ಕೆ ಸಮಿತಿ (DSC) ಬ್ಯಾಚ್‌ನಿಂದ ಶಿಕ್ಷಕರನ್ನು ನೇಮಿಸಿಕೊಳ್ಳಲು ನಿರ್ಧರಿಸಿದ್ದರಿಂದ ಇದು ಸಂಭವಿಸಿದೆ. 1998ರ ಡಿಎಸ್‌ಸಿ ಬ್ಯಾಚ್‌ನ ನೇಮಕಾತಿ ಕಡತಕ್ಕೆ ಮುಖ್ಯಮಂತ್ರಿಗಳು ಕಳೆದ ವಾರ ಸಹಿ ಹಾಕಿದ್ದಾರೆ. ಈ ಕ್ರಮದಿಂದ ಸುಮಾರು 4,500 ಅಭ್ಯರ್ಥಿಗಳ ಶಿಕ್ಷಕರಾಗುವ ಕನಸು ನನಸಾಯಿತು. ಅವರಲ್ಲಿ ಒಬ್ಬರು ಶ್ರೀಕಾಕುಳಂ ನಿವಾಸಿ ಅಲ್ಲಕ ಕೇದಾರೇಶ್ವರ ರಾವ್. ಈಗ 57 ವರ್ಷ ವಯಸ್ಸಿನ ರಾವ್ ಅವರು 1998 ರಲ್ಲಿ ಡಿಎಸ್ಸಿ ಪರೀಕ್ಷೆಗೆ ಹಾಜರಾಗಿ 24 ವರ್ಷಗಳ ನಂತರ ನೇಮಕಾತಿ ಪತ್ರವನ್ನು ಸ್ವೀಕರಿಸಲಿದ್ದಾರೆ.
ರಾವ್ ಅವರಿಗೆ ಬಾಲ್ಯದಿಂದಲೂ ಓದುವ ಹವ್ಯಾಸವಿತ್ತು. ಅವರು ಶಿಕ್ಷಕರಾಗಲು ಬಯಸಿದ್ದರು. ಅದೇ ಕನಸಿನಿಂದ ಅವರು ಇಂಗ್ಲಿಷ್‌ನಲ್ಲಿ ಎಂಎ ಪೂರ್ಣಗೊಳಿಸಿ ಬಿಎಡ್ ಕೂಡ ಮಾಡಿದರು.

1994 ಮತ್ತು 1996 ರಲ್ಲಿ ವಿಫಲ ಪ್ರಯತ್ನಗಳ ನಂತರ, ರಾವ್ ಅವರು 1998 ರಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆದರೆ ಪ್ರಕ್ರಿಯೆಯು ವಿವಾದಗಳಿಗೆ ಒಳಗಾಯಿತು ಮತ್ತು ನೇಮಕಾತಿಯನ್ನು ಸ್ಥಗಿತಗೊಳಿಸಲಾಯಿತು.

ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ರಾವ್ ಅವರು ಕಳೆದ ಎರಡು ದಶಕಗಳಿಂದ ಪಾತಪಟ್ಟಣ, ಕೋರಸವಾಡ, ಕಾಗುವಾಡ ಗ್ರಾಮಗಳಲ್ಲಿ ಸೈಕಲ್ ಮೇಲೆ ಒಳ ಉಡುಪು, ಶರ್ಟ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಮಾರಾಟ ಇಲ್ಲದ ದಿನಗಳಲ್ಲಿ ಖಾಲಿ ಹೊಟ್ಟೆಯಲ್ಲೇ ಮಲಗುವ ಪರಿಸ್ಥಿತಿ. ತಂದೆ-ತಾಯಿಯ ಮರಣದ ನಂತರ ಉದ್ಯೋಗವಿಲ್ಲದ ಕಾರಣ ಮದುವೆಯೂ ಆಗಿಲ್ಲ .ಈ ಎಲ್ಲ ಕಷ್ಟಗಳ ನಡುವೆ ರಾವ್ ಅವರ ಶಿಕ್ಷಕನಾಗುವ ಕನಸು ಕೊನೆಗೂ ನನಸಾಗಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ