AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವಾದಿ ಬಗ್ಗೆ ನೂಪುರ್ ಶರ್ಮಾ ಹೇಳಿಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಧಕ್ಕೆ ತಂದಿದೆ: ಎನ್‌ಎಸ್‌ಎ ಅಜಿತ್ ದೋವಲ್

ಸರ್ಕಾರದ ಹೊಸ ಸಶಸ್ತ್ರ ಪಡೆಗಳ ನೇಮಕಾತಿ ಯೋಜನೆ 'ಅಗ್ನಿಪಥ್' ವಿರುದ್ಧದ ಪ್ರತಿಭಟನೆಗಳ ಬಗ್ಗೆಯೂ ಮಾತನಾಡಿದ ದೋವಲ್, ಹಿಂಸಾತ್ಮಕ ಮತ್ತು ವ್ಯಾಪಕ ಪ್ರತಿಭಟನೆಗಳ ಹೊರತಾಗಿಯೂ ಯೋಜನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ.

ಪ್ರವಾದಿ ಬಗ್ಗೆ ನೂಪುರ್ ಶರ್ಮಾ ಹೇಳಿಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಧಕ್ಕೆ ತಂದಿದೆ: ಎನ್‌ಎಸ್‌ಎ ಅಜಿತ್ ದೋವಲ್
ಅಜಿತ್ ದೋವಲ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jun 21, 2022 | 7:11 PM

Share

ದೆಹಲಿ: ಬಿಜೆಪಿಯ ನೂಪುರ್ ಶರ್ಮಾ (Nupur Sharma) ಮತ್ತು ನವೀನ್ ಜಿಂದಾಲ್ ಅವರು ಪ್ರವಾದಿ ಮೊಹಮ್ಮದ್ (Prophet Muhammad) ಕುರಿತ ಆಕ್ಷೇಪಾರ್ಹ ಹೇಳಿಕೆ ವಿವಾದವು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಧಕ್ಕೆ ತಂದಿದೆ. ಅವರು ದೇಶವನ್ನು ಸತ್ಯಕ್ಕೆ ದೂರವಾದ ರೀತಿಯಲ್ಲಿ ಬಿಂಬಿಸಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ (Ajit Doval) ಮಂಗಳವಾರ ಹೇಳಿದ್ದಾರೆ. ಇದು ಭಾರತದ ಪ್ರತಿಷ್ಠೆಯನ್ನು ಹಾಳುಮಾಡಿದೆ. ಅಂದರೆ ಭಾರತವನ್ನು ಆ ರೀತಿ ಬಿಂಬಿಸಲಾಗಿದೆ ಅಥವಾ ಭಾರತದ ವಿರುದ್ಧ ಕೆಲವು ತಪ್ಪು ಮಾಹಿತಿಯನ್ನು ಹರಡಲಾಗಿದೆ, ಅದು ವಾಸ್ತವದಿಂದ ದೂರವಿದೆ. ಬಹುಶಃ ನಾವು ಅವರೊಂದಿಗೆ ಮಾತನಾಡುವ ಮತ್ತು ಅವರಿಗೆ ಮನವರಿಕೆ ಮಾಡುವ ಅವಶ್ಯಕತೆಯಿದೆ. ಜನರು ಭಾವನಾತ್ಮಕವಾಗಿ ಉದ್ರೇಕಗೊಂಡಾಗ, ಅವರ ನಡವಳಿಕೆಯು ಸ್ವಲ್ಪಮಟ್ಟಿಗೆ ಅಸಮಂಜಸವಾಗಿರುತ್ತದೆ ಎಂದು ದೋವಲ್ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಪ್ರವಾದಿ ವಿವಾದದ ಬಗ್ಗೆ ಪ್ರತಿಭಟನೆಗಳು ಭಾರತದ ಪ್ರತಿಷ್ಠೆಗೆ ಧಕ್ಕೆ ತಂದಿದೆಯೇ ಎಂದು ಕೇಳಿದಾಗ ಹೇಳಿದ್ದಾರೆ.

ಪಾಕಿಸ್ತಾನ  ಜತೆಗಿನ ಸಂಬಂಧ ಬಗ್ಗೆ ಮಾತನಾಡಿದ  ದೋವಲ್, ಭಾರತವು ಸಾಮಾನ್ಯ ಸಂಬಂಧದಲ್ಲಿ ಉತ್ಸುಕವಾಗಿದೆ ಆದರೆ ಭಯೋತ್ಪಾದನೆ ಬಗ್ಗೆ ಸಹಿಷ್ಣುತೆಯ ಮಿತಿ ತುಂಬಾ ಕಡಿಮೆಯಾಗಿದೆ’ ಎಂದು ಪಾಕ್​​ಗೆ ಎಚ್ಚರಿಕೆ ನೀಡಿದ್ದಾರೆ. 2019 ರ ನಂತರ ಕಾಶ್ಮೀರದ ಮೂಡ್ ಬದಲಾಗಿದೆ ಎಂದು ಹೇಳಿದ್ದಾರೆ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ ಅವರು ಈ ಮಾತನ್ನು ಹೇಳಿದ್ದಾರೆ. ಪುಲ್ವಾಮಾದಲ್ಲಿ ಪಾಕ್ ಮೂಲದ ಉಗ್ರ ಸಂಘಟನೆ ಜೈಷೆ ಮೊಹಮ್ಮದ್​​ ಆತ್ಮಾಹುತಿ ಬಾಂಬರ್ ನಡೆಸಿದ ದಾಳಿಯಲ್ಲಿ 40 ಭಾರತೀಯ ಯೋಧರು ಹುತಾತ್ಮರಾಗಿದ್ದರು.

2019 ರ ನಂತರ ಕಾಶ್ಮೀರದ ಜನರ ಮನಸ್ಥಿತಿ ಮತ್ತು ಮನೋಭಾವವು ಸಂಪೂರ್ಣವಾಗಿ ಬದಲಾಗಿದೆ. ಜನರು ಪಾಕಿಸ್ತಾನ ಮತ್ತು ಭಯೋತ್ಪಾದನೆಯ ಪರವಾಗಿಲ್ಲ. ಈಗ ಬಂದ್ ಗೆ ನೀಡುತ್ತಿರುವ ಕರೆಗಳೆಲ್ಲಿ? ಆ ಶುಕ್ರವಾರದ ಹರತಾಳಗಳು, ಎಲ್ಲ ಹೋಗಿವೆ. ಕೆಲವು ಯುವಕರು ತಪ್ಪುದಾರಿಗೆಳೆಯುತ್ತಿದ್ದಾರೆ ಆದರೆ ಅವರ ಮನವೊಲಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಕೆಲವು ಸೇನಾ ಸಂಘಟನೆಗಳು ಅಲ್ಲಿವೆ. ಆದರೆ ನಾವು ಸಂಪೂರ್ಣ ಸಂಕಲ್ಪದಿಂದ ಅವರ ವಿರುದ್ಧ ಹೋರಾಡುತ್ತಿದ್ದೇವೆ ಎಂದು ದೋವಲ್ ಹೇಳಿದ್ದಾರೆ.

ಇದನ್ನೂ ಓದಿ
Image
ನೂಪುರ್ ಶರ್ಮಾ ಹೇಳಿಕೆಗೆ ಹಲವು ದೇಶಗಳ ಆಕ್ಷೇಪ: ಸರ್ಕಾರದ ನಿಲುವು ಮತ್ತೊಮ್ಮೆ ಸ್ಪಷ್ಟಪಡಿಸಿದ ವಿದೇಶಾಂಗ ಸಚಿವ ಜೈಶಂಕರ್
Image
ದೆಹಲಿಯಲ್ಲಿ ನೂಪುರ್ ಶರ್ಮಾಗಾಗಿ ಮುಂಬೈ ಪೊಲೀಸ್ ಹುಡುಕಾಡಿದರೂ ಆಕೆಯನ್ನು ಪತ್ತೆ ಹಚ್ಚಲಾಗಲಿಲ್ಲ: ಮೂಲಗಳು
Image
Fact Check ನೂಪುರ್ ಶರ್ಮಾಗೆ 34 ದೇಶಗಳು ಬೆಂಬಲ ನೀಡಿವೆ ಎಂಬ ವೈರಲ್ ಟ್ವೀಟ್ ಸುಳ್ಳು

ಪಾಕ್‌ನೊಂದಿಗಿನ ಸಂಬಂಧಗಳ ಕುರಿತು ಮಾತನಾಡಿದ ಅವರು ನಾವು ಸಾಮಾನ್ಯ ಸಂಬಂಧವನ್ನು ಹೊಂದಲು ಬಯಸುತ್ತೇವೆ. ಆದರೆ ಭಯೋತ್ಪಾದನೆಗೆ ಸಹಿಷ್ಣುತೆಯ ಮಿತಿ ತುಂಬಾ ಕಡಿಮೆಯಾಗಿದೆ. ನಮ್ಮ ಎದುರಾಳಿಯ ಆಯ್ಕೆಯಲ್ಲಿ ಶಾಂತಿ ಮತ್ತು ಯುದ್ಧವನ್ನು ಹೊಂದಲು ಸಾಧ್ಯವಿಲ್ಲ. ಯಾವಾಗ, ಯಾರೊಂದಿಗೆ ಮತ್ತು ಏನನ್ನು ಎಂಬುದನ್ನು ನಾವು ನಿರ್ಧರಿಸುತ್ತೇವೆ ಎಂದಿದ್ದಾರೆ.

ಕಾಶ್ಮೀರಿ ಪಂಡಿತರು ಮತ್ತು ಸ್ಥಳೀಯರಲ್ಲದವರ ವಿರುದ್ಧದ ಉಗ್ರರು ನಡೆಸುತ್ತಿರುವ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು ಸರ್ಕಾರವು ಹಿಂದೆ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಭವಿಷ್ಯದಲ್ಲಿ ಖಂಡಿತವಾಗಿಯೂ ದುರ್ಬಲ ವಿಭಾಗಗಳನ್ನು ರಕ್ಷಿಸಲು ಹೆಚ್ಚಿನದನ್ನು ಮಾಡುತ್ತದೆ ಎಂದು ಹೇಳಿದರು. “ಉತ್ತಮ ವಿಷಯವೆಂದರೆ ಭಯೋತ್ಪಾದಕರ ವಿರುದ್ಧ ಆಕ್ರಮಣಕಾರಿ ಕ್ರಮದಲ್ಲಿ ಹೋಗುವುದು ಮತ್ತು ಆ ರೀತಿಯಲ್ಲಿ ಅವರನ್ನು ಮಟ್ಟ ಹಾಕುವುದು ಎಂದು ಅವರು ಹೇಳಿದರು.

ಚೀನಾದೊಂದಿಗಿನ ಗಡಿ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾವು ಚೀನಾದೊಂದಿಗೆ ದೀರ್ಘಾವಧಿಯ ಪ್ರಾದೇಶಿಕ ವಿವಾದವನ್ನು ಹೊಂದಿದ್ದೇವೆ. ನಮ್ಮ ಉದ್ದೇಶಗಳನ್ನು ಸ್ಪಷ್ಟವಾಗಿ ಹೇಳಿದ್ದೇವೆ. ನಾವು ಯಾವುದೇ ಉಲ್ಲಂಘನೆಯನ್ನು ಸಹಿಸುವುದಿಲ್ಲ ಎಂಬ ಸತ್ಯದ ಬಗ್ಗೆ ಅವರಿಗೆ ತಿಳಿದಿದೆ ಎಂದಿದ್ದಾರೆ. ಸರ್ಕಾರದ ಹೊಸ ಸಶಸ್ತ್ರ ಪಡೆಗಳ ನೇಮಕಾತಿ ಯೋಜನೆ ‘ಅಗ್ನಿಪಥ್’ ವಿರುದ್ಧದ ಪ್ರತಿಭಟನೆಗಳ ಬಗ್ಗೆಯೂ ಮಾತನಾಡಿದ ದೋವಲ್, ಹಿಂಸಾತ್ಮಕ ಮತ್ತು ವ್ಯಾಪಕ ಪ್ರತಿಭಟನೆಗಳ ಹೊರತಾಗಿಯೂ ಯೋಜನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ. ಈ ಯೋಜನೆಯು ‘ಸುರಕ್ಷಿತ ಮತ್ತು ಬಲಿಷ್ಠ’ ಭಾರತಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಭಾಗವಾಗಿದೆ. ದೇಶದ ಸಶಸ್ತ್ರ ಪಡೆಗಳು ಭವಿಷ್ಯದ ಯುದ್ಧಗಳು ಮತ್ತು ಸಂಘರ್ಷಗಳಿಗೆ ಸಿದ್ಧವಾಗಲು ಇದು ಅತ್ಯಗತ್ಯ ಎಂದು ಹೇಳಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 7:01 pm, Tue, 21 June 22

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!