Agnipath recruitment scheme ಅಗ್ನಿಪಥ್ ಯೋಜನೆಯು ಸೇನೆ ಮತ್ತು ರಾಷ್ಟ್ರಕ್ಕೆ ಪ್ರಯೋಜನವನ್ನು ನೀಡುತ್ತದೆ: ತ್ರಿ-ಸೇವಾ ಮುಖ್ಯಸ್ಥರು

ವಾಯುಪಡೆ ಮತ್ತು ನೌಕಾಪಡೆ ಯುದ್ಧ ಸನ್ನದ್ಧತೆಯಲ್ಲಿ ರಾಜಿ ಮಾಡುವುದಿಲ್ಲ. ಅಗ್ನಿಪಥ್ ಯೋಜನೆಯಡಿ ನೇಮಕಾತಿಯನ್ನು ವಸ್ತುನಿಷ್ಠ ಮತ್ತು ಪಾರದರ್ಶಕ ಆಯ್ಕೆ ಪ್ರಕ್ರಿಯೆಯ ಅಡಿಯಲ್ಲಿ ಕೈಗೊಳ್ಳಲಾಗುತ್ತದೆ

Agnipath recruitment scheme ಅಗ್ನಿಪಥ್ ಯೋಜನೆಯು ಸೇನೆ ಮತ್ತು ರಾಷ್ಟ್ರಕ್ಕೆ ಪ್ರಯೋಜನವನ್ನು ನೀಡುತ್ತದೆ: ತ್ರಿ-ಸೇವಾ ಮುಖ್ಯಸ್ಥರು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 21, 2022 | 4:46 PM

ಅಗ್ನಿಪಥ್ ನೇಮಕಾತಿ ಯೋಜನೆ (Agnipath) ಕುರಿತು ತ್ರಿ-ಸೇವಾ ಮುಖ್ಯಸ್ಥರು ಸುದ್ದಿಗೋಷ್ಠಿ ನಡೆಸಿ ಯೋಜನೆಯ ಪ್ರಯೋಜನಗಳ ಬಗ್ಗೆ ವಿವರಿಸಿದ್ದಾರೆ. ಅಗ್ನಿಪಥ್ ಯೋಜನೆಯು ಮೂರು ವಿಷಯಗಳನ್ನು ಸಮತೋಲನಗೊಳಿಸುತ್ತದೆ. ಮೊದಲನೆಯದ್ದು ಸಶಸ್ತ್ರ ಪಡೆಗಳಲ್ಲಿ (Indian  Army) ಯುವಕರ ನೇಮಕ, ತಂತ್ರಜ್ಞಾನದ ಅರಿವುಳ್ಳವರು ಮತ್ತು ಹೊಂದಿಕೊಳ್ಳಬಲ್ಲ ಜನರು ಸೈನ್ಯಕ್ಕೆ ಸೇರುವುದು, ಮೂರನೆಯದು ವೈಯಕ್ತಿಕ ಭವಿಷ್ಯವನ್ನು ಸಿದ್ಧಗೊಳಿಸುತ್ತದೆ ಎಂದು  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಲಿಟರಿ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ (Lieutenant General Anil Puri) ಹೇಳಿದ್ದಾರೆ. ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುವುದು ಕೇವಲ ಕೆಲಸವಲ್ಲ, ಇದು ದೇಶಭಕ್ತಿಯ ಕಾರ್ಯ ಎಂದು ಪುರಿ ಹೇಳಿದ್ದಾರೆ.ಸೇನಾಪಡೆಗಳಿಗೆ ರೆಜಿಮೆಂಟೇಶನ್ ಪ್ರಕ್ರಿಯೆಯು ಬದಲಾಗುವುದಿಲ್ಲ. ತಾತ್ತ್ವಿಕವಾಗಿ, ಈ ಸುಧಾರಣೆಗಳನ್ನು 1990 ರ ದಶಕದಲ್ಲಿಯೇ ಜಾರಿಗೆ ತರಬೇಕಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಮಾತ್ರ ಸರಿಯಾದ ಶ್ರದ್ಧೆಯಿಂದ ಪ್ರಾರಂಭಿಸಲು ಸಾಧ್ಯವಾಯಿತು. ಇಸ್ರೇಲ್, ರಷ್ಯಾದಲ್ಲಿನ ನೇಮಕಾತಿ ಮಾದರಿಗಳನ್ನು ಉಲ್ಲೇಖಿಸಿದ ರಕ್ಷಣಾ ಸಚಿವಾಲಯ ಅಗ್ನಿಪಥ್ ಯೋಜನೆ ಕಡ್ಡಾಯ ಮತ್ತು ಗುತ್ತಿಗೆ ಮೂಲಕ ಸೈನಿಕರ ನೇಮಕವನ್ನು ಒಳಗೊಂಡಿರುತ್ತದೆ ಎಂದು ಹೇಳಿದೆ. ನಮ್ಮ ಪಡೆಗಳ ಸರಾಸರಿ ವಯಸ್ಸನ್ನು 26 ವರ್ಷಕ್ಕೆ ತರುವ ಗುರಿಯನ್ನು ನಾವು ಹೊಂದಿದ್ದೇವೆ. ನಮ್ಮ ಪಡೆಗಳ ವಯಸ್ಸಿನ ಮಿತಿಯನ್ನು ಕಡಿಮೆ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಸೇನೆಯಲ್ಲಿರುವ ಹಳೇ ಯೋಧರನ್ನು ಕೂಡಾ ಅಗ್ನಿವೀರ್ ಯೋಜನೆಗೆ ಕಳುಹಿಸಲಾಗುವುದು ಎಂಬ ವದಂತಿಯನ್ನು ಯಾರೋ ಹಬ್ಬಿಸಿದರು. ಇದು ನಕಲಿ ಮಾಹಿತಿ ಎಂದು ಸಾಬೀತಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಹೇಳಿದ್ದಾರೆ. ಅಗ್ನಿಪಥ್ ಯೋಜನೆಯನ್ನು ಅಂತಿಮಗೊಳಿಸುವಲ್ಲಿ ಎಲ್ಲಾ ಮುಖ್ಯಸ್ಥರು ತೊಡಗಿಸಿಕೊಂಡಿದ್ದಾರೆ. ಸೇನೆಯಲ್ಲಿ ತಮ್ಮ 4 ವರ್ಷಗಳ ಅವಧಿಯ ನಂತರ ಅಗ್ನಿವೀರ್‌ಗಳು ಎಲ್ಲಿ ಉದ್ಯೋಗವನ್ನು ಕಂಡುಕೊಳ್ಳಬಹುದು ಎಂದು ಡಿಜಿ ಶಿಪ್ಪಿಂಗ್ ಹೇಳಿದ್ದಾರೆ.

ಇದನ್ನೂ ಓದಿ
Image
Agnipath Scheme ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಲು ಅರ್ಹತೆ ಏನು? ವೇತನ ಎಷ್ಟಿರುತ್ತದೆ?
Image
Agniveer Recruitment 2022: ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿಯ ಅಧಿಸೂಚನೆ ಪ್ರಕಟ
Image
ಅಗ್ನಿವೀರ್ ನೇಮಕಾತಿ ಯೋಜನೆಗೆ ಅಧಿಸೂಚನೆ ಹೊರಡಿಸಿದ ಸೇನೆ, ಜುಲೈನಲ್ಲಿ ನೋಂದಣಿ ಪ್ರಾರಂಭ

ವಾಯುಪಡೆ ಮತ್ತು ನೌಕಾಪಡೆ ಯುದ್ಧ ಸನ್ನದ್ಧತೆಯಲ್ಲಿ ರಾಜಿ ಮಾಡುವುದಿಲ್ಲ. ಅಗ್ನಿಪಥ್ ಯೋಜನೆಯಡಿ ನೇಮಕಾತಿಯನ್ನು ವಸ್ತುನಿಷ್ಠ ಮತ್ತು ಪಾರದರ್ಶಕ ಆಯ್ಕೆ ಪ್ರಕ್ರಿಯೆಯ ಅಡಿಯಲ್ಲಿ ಕೈಗೊಳ್ಳಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ಸಶಸ್ತ್ರ ಪಡೆಗಳು ಅತ್ಯುತ್ತಮ ಪ್ರತಿಭೆಯನ್ನು ಪಡೆಯಲು ಅಗ್ನಿಪಥ್ ಯೋಜನೆಯನ್ನು ಹೊರತರಲಾಗುತ್ತಿದೆ. ಮುಂದಿನ ವರ್ಷದ ಜುಲೈ ವೇಳೆಗೆ ಅಗ್ನಿವೀರ್‌ಗಳ ಮೊದಲ ಬ್ಯಾಚ್ ತರಬೇತಿ ಮತ್ತು ಘಟಕಗಳಿಗೆ ನಿಯೋಜಿಸಲಾಗುವುದು. ಅಗ್ನಿವೀರ್‌ಗಳು ಶೌರ್ಯ ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ಅಗ್ನಿವೀರ್‌ಗಳನ್ನು ಮೊದಲ ವರ್ಷದಲ್ಲಿ ಶೇ2 ರಿಂದ ಕ್ರಮೇಣವಾಗಿ ಸೇರಿಸಲಾಗುತ್ತಿದೆ. ಐದನೇ ವರ್ಷದಲ್ಲಿ ಸಂಖ್ಯೆಗಳು ಸುಮಾರು 6,000 ಆಗುತ್ತವೆ ಮತ್ತು 10 ನೇ ವರ್ಷದಲ್ಲಿ ಸುಮಾರು 9,000-10,000 ಆಗುತ್ತವೆ. ಭಾರತೀಯ ವಾಯುಪಡೆಯಲ್ಲಿನ ಪ್ರತಿ ದಾಖಲಾತಿಯು ಈಗ ‘ಅಗ್ನಿವೀರ್ ವಾಯು’ ಮೂಲಕ ಮಾತ್ರ ನಡೆಯುತ್ತದೆ ಎಂದು ಏರ್ ಮಾರ್ಷಲ್ ಎಸ್.ಕೆ ಝಾ ಹೇಳಿದ್ದಾರೆ.

ಇಂಡಕ್ಷನ್, ಪ್ರವೇಶ ಮಟ್ಟದ ಅರ್ಹತೆ, ಪರೀಕ್ಷೆಯ ಪಠ್ಯಕ್ರಮ ಅಥವಾ ವೈದ್ಯಕೀಯ ಮಾನದಂಡಗಳ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಝಾ ಹೇಳಿದ್ದಾರೆ. ಅಗ್ನಿಪಥ್ ಯೋಜನೆಯು ಸೇನೆಯ ಯುದ್ಧ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುವುದಿಲ್ಲ, ಇದು  ಸಾಮರ್ಥ್ಯವನ್ನು ಸುಧಾರಿಸುತ್ತದೆ ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 3:20 pm, Tue, 21 June 22

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ