ಅಗ್ನಿವೀರ್ ನೇಮಕಾತಿ ಯೋಜನೆಗೆ ಅಧಿಸೂಚನೆ ಹೊರಡಿಸಿದ ಸೇನೆ, ಜುಲೈನಲ್ಲಿ ನೋಂದಣಿ ಪ್ರಾರಂಭ
ಭಾರತೀಯ ಸೇನೆಯು ಬಿಡುಗಡೆ ಮಾಡಿದ ಅಧಿಸೂಚನೆಯು ಸೇವಾ ನಿಯಮಗಳು ಮತ್ತು ಷರತ್ತುಗಳು, ಅರ್ಹತೆ, ಬಿಡುಗಡೆ ಮತ್ತು ಅಗ್ನಿವೀರ್ ಯೋಜನೆಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಯನ್ನು ವಿವರಸಿದೆ.
ದೆಹಲಿ: ಅಗ್ನಿಪಥ್ ನೇಮಕಾತಿ (Agnipath) ಯೋಜನೆಗಳ ಅಡಿಯಲ್ಲಿ ‘ಅಗ್ನಿವೀರರ’ ನೇಮಕಾತಿಗೆ ಭಾರತೀಯ ಸೇನೆಗೆ (Indian Army )ಸೋಮವಾರ ಅಧಿಸೂಚನೆ ಹೊರಡಿಸಿದೆ. ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಈ ಅಧಿಸೂಚನೆ ಹೊರಡಿಸಲಾಗಿದೆ. ಅಗ್ನಿವೀರ್ (Agniveer) ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟೆಕ್ನಿಕಲ್ (ವಿಮಾನಯಾನ/ಮದ್ದುಗುಂಡು ಪರೀಕ್ಷಕ), ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‌ಮ್ಯಾನ್ (10 ನೇ ಪಾಸ್) ಮತ್ತು ಅಗ್ನಿವೀರ್ ಟ್ರೇಡ್ಸ್‌ಮ್ಯಾನ್ (ಎಆರ್ ಒ ರ್ಯಾಲಿ ವೇಳಾಪಟ್ಟಿಯ ಪ್ರಕಾರ 8 ನೇ ಪಾಸ್) ನೋಂದಣಿಗಳನ್ನು ಜುಲೈನಿಂದ ಆಯಾ ಸೇನಾ ನೇಮಕಾತಿ ಕಚೇರಿಗಳಲ್ಲಿ (ARO) ಆರಂಭವಾಗಲಿದೆ. ಭಾರತೀಯ ಸೇನೆಯು ಬಿಡುಗಡೆ ಮಾಡಿದ ಅಧಿಸೂಚನೆಯು ಸೇವಾ ನಿಯಮಗಳು ಮತ್ತು ಷರತ್ತುಗಳು, ಅರ್ಹತೆ, ಬಿಡುಗಡೆ ಮತ್ತು ಅಗ್ನಿವೀರ್ ಯೋಜನೆಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಯನ್ನು ವಿವರಸಿದೆ. ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ತರಬೇತಿ ಅವಧಿ ಸೇರಿದಂತೆ ನಾಲ್ಕು ವರ್ಷಗಳ ಅವಧಿಯ ಸೇವೆಗಾಗಿ ಸೇನಾ ಕಾಯಿದೆ 1950 ರ ಅಡಿಯಲ್ಲಿ ದಾಖಲಾಗುತ್ತಾರೆ. ಅಗ್ನಿವೀರರು ಭೂಸೇನೆ, ನೌಕಾಪಡೆಅಥವಾ ವಾಯುಸೇನೆ ಮೂಲಕ ಆದೇಶಿಸಿದಲ್ಲೆಲ್ಲಾ ಹೋಗುವುದು ಕಡ್ಡಾಯ. ಅಗ್ನಿವೀರರು ಯಾವುದೇ ರೀತಿಯ ಪಿಂಚಣಿ ಅಥವಾ ಗ್ರಾಚ್ಯುಟಿಗೆ ಅರ್ಹರಾಗಿರುವುದಿಲ್ಲ.
ಅಗ್ನಿವೀರರ ಸೇವೆಯು ದಾಖಲಾತಿ ದಿನಾಂಕದಿಂದ ಪ್ರಾರಂಭವಾಗುತ್ತದೆ. ಅವರು ಸೈನ್ಯದಲ್ಲಿ ವಿಭಿನ್ನ ಶ್ರೇಣಿಯಲ್ಲಿರಲಿದ್ದು ಇದು ಅಸ್ತಿತ್ವದಲ್ಲಿರುವ ಇತರ ಶ್ರೇಣಿಗಳಿಗಿಂತ ಭಿನ್ನವಾಗಿರುತ್ತದೆ. ಕಾಲಕಾಲಕ್ಕೆ ಭಾರತ ಸರ್ಕಾರ ಹೊರಡಿಸಿದ ಆದೇಶಗಳು ಮತ್ತು ಸೂಚನೆಗಳಿಂದ ನಾಲ್ಕು ವರ್ಷಗಳ ಸೇವಾ ಅವಧಿಯಲ್ಲಿ ರಜೆ, ಸಮವಸ್ತ್ರ, ವೇತನ ಮತ್ತು ಭತ್ಯೆಗಳು ನಿಯಂತ್ರಿಸಲ್ಪಡುತ್ತವೆ ಎಂದು ಸೇನೆ ಹೇಳಿದೆ.
ಸಾಂಸ್ಥಿಕ ಹಿತಾಸಕ್ತಿಯಲ್ಲಿ ಯಾವುದೇ ಕರ್ತವ್ಯವನ್ನು ನಿಯೋಜಿಸಲು ‘ಅಗ್ನಿವೀರರು’ ಹೊಣೆಗಾರರಾಗಿರುತ್ತಾರೆ. ಈ ಯೋಜನೆಯಡಿ ದಾಖಲಾದ ಸಿಬ್ಬಂದಿ ಆದೇಶಗಳ ಪ್ರಕಾರ ದೈಹಿಕ/ಲಿಖಿತ/ಕ್ಷೇತ್ರ ಪರೀಕ್ಷೆಗಳೊಂದಿಗೆ ನಿಯತಕಾಲಿಕವಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಹೀಗೆ ಪ್ರದರ್ಶಿಸಿದ ಕಾರ್ಯಕ್ಷಮತೆಯನ್ನು ರೆಗ್ಯುಲರ್ ಕೇಡರ್‌ಗೆ ದಾಖಲಾತಿಗಾಗಿ ಪರಿಗಣಿಸಲಾಗುತ್ತದೆ. ಅಗ್ನಿವೀರರನ್ನು ಯಾವುದೇ ರೆಜಿಮೆಂಟ್/ಯುನಿಟ್‌ಗೆ ಪೋಸ್ಟ್ ಮಾಡಬಹುದು ಮತ್ತು ಸಾಂಸ್ಥಿಕ ಆಸಕ್ತಿ ಪ್ರಕಾರ ವರ್ಗಾವಣೆ ಮಾಡಬಹುದು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 3:30 pm, Mon, 20 June 22