Agnipath Protest: ಅಗ್ನಿಪಥ್ ಯೋಜನೆಯಡಿ ನೇಮಕಗೊಳ್ಳುವ ಅಗ್ನಿವೀರರಿಗೆ ಸ್ಪೆಷಲ್ ಆಫರ್ ನೀಡಿದ ಆನಂದ್ ಮಹೀಂದ್ರಾ

Anand Mahindra: ಅಗ್ನಿವೀರ್‌ಗಳಿಗೆ ನೀಡಲಾಗುವ ತರಬೇತಿ ಶಿಸ್ತು ಮತ್ತು ಕೌಶಲ್ಯಗಳು ಅವರನ್ನು ಅತ್ಯುತ್ತಮವಾಗಿ ಉದ್ಯೋಗಿಗಳನ್ನಾಗಿಯೂ ಮಾಡುತ್ತದೆ. ಅಂತಹ ಯುವಕರನ್ನು ನೇಮಿಸಿಕೊಳ್ಳಲು ಮಹೀಂದ್ರಾ ಗ್ರೂಪ್ ಸಿದ್ಧವಿದೆ ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

Agnipath Protest: ಅಗ್ನಿಪಥ್ ಯೋಜನೆಯಡಿ ನೇಮಕಗೊಳ್ಳುವ ಅಗ್ನಿವೀರರಿಗೆ ಸ್ಪೆಷಲ್ ಆಫರ್ ನೀಡಿದ ಆನಂದ್ ಮಹೀಂದ್ರಾ
ಆನಂದ್ ಮಹೀಂದ್ರಾImage Credit source: NDTV
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jun 20, 2022 | 10:52 AM

ನವದೆಹಲಿ: ಕೇಂದ್ರ ಸರ್ಕಾರದ ಹೊಸ ಸೇನಾ ನೇಮಕಾತಿ ಯೋಜನೆಯಾದ ‘ಅಗ್ನಿಪಥ್’ (Agnipath Scheme) ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಈ ಕುರಿತು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ (Anand Mahindra) ಪ್ರತಿಕ್ರಿಯೆ ನೀಡಿದ್ದು, ದೇಶಾದ್ಯಂತ ಉಂಟಾಗಿರುವ ಹಿಂಸಾಚಾರದಿಂದ ದುಃಖವಾಗಿದೆ. ಅಗ್ನಿವೀರ್‌ಗಳ (Agniveer) ಶಿಸ್ತು ಮತ್ತು ಕೌಶಲ್ಯಗಳು ಅವರನ್ನು ಉತ್ತಮ ಉದ್ಯೋಗಿಗಳಾಗಿ ಮಾಡುತ್ತವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಅಗ್ನಿಪಥ್ ಯೋಜನೆಯಡಿಯಲ್ಲಿ ತರಬೇತಿ ಪಡೆದ ಜನರನ್ನು ನೇಮಿಸಿಕೊಳ್ಳಲು ಸಿದ್ಧವಿದ್ದೇವೆ ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ.

ಅಗ್ನಿವೀರ್‌ಗಳಿಗೆ ನೀಡಲಾಗುವ ತರಬೇತಿ ಶಿಸ್ತು ಮತ್ತು ಕೌಶಲ್ಯಗಳು ಅವರನ್ನು ಅತ್ಯುತ್ತಮವಾಗಿ ಉದ್ಯೋಗಿಗಳನ್ನಾಗಿಯೂ ಮಾಡುತ್ತದೆ. ಅಂತಹ ತರಬೇತಿ ಪಡೆದ ಸಮರ್ಥ ಯುವಕರನ್ನು ನೇಮಿಸಿಕೊಳ್ಳಲು ಮಹೀಂದ್ರಾ ಗ್ರೂಪ್ ಸಿದ್ಧವಿದೆ ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಅಗ್ನಿಪಥ್ ಯೋಜನೆಯ ಸುತ್ತ ನಡೆದ ಹಿಂಸಾಚಾರದಿಂದ ನನಗೆ ಬೇಸರವಾಗಿದೆ. ಕಳೆದ ವರ್ಷ ಈ ಯೋಜನೆಯನ್ನು ಪ್ರಸ್ತಾಪಿಸಿದಾಗ ನಾನು ಹೇಳಿದ ಮಾತನ್ನೇ ನಾನು ಪುನರಾವರ್ತಿಸುತ್ತೇನೆ ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ.

ಇದನ್ನೂ ಓದಿ
Image
ಅಗ್ನಿಪಥ್ ಯೋಜನೆ ವಿರೋಧಿಸಿ ಇಂದು ಬೆಳಗಾವಿ ಬಂದ್, ಪ್ರತಿಭಟನೆ ತಡೆಯಲು ಕ್ಷಿಪ್ರ ಕಾರ್ಯಪಡೆ ನಿಯೋಜಿಸಿದ ಪೊಲೀಸರು
Image
Agnipath Protests: ಅಗ್ನಿಪಥ್ ವಿರೋಧಿಸಿ ಪ್ರತಿಭಟನೆ: ದೇಶದ ವಿವಿಧೆಡೆ 1000 ಮಂದಿ ಬಂಧನ
Image
Bharat Bandh: ಅಗ್ನಿಪಥ್​​ ಯೋಜನೆ ವಿರೋಧಿಸಿ ಪ್ರತಿಭಟನಾಕಾರರಿಂದ ಇಂದು ಭಾರತ್ ಬಂದ್​​ಗೆ ಕರೆ; ಯಾವ ರಾಜ್ಯದಲ್ಲಿ ಹೇಗಿದೆ ಬಂದೋಬಸ್ತ್?
Image
Agnipath scheme ಹಳೆಯ ನೇಮಕಾತಿ ನೀತಿ ರದ್ದು; ಅಗ್ನಿಪಥ್ ಯೋಜನೆ ಮೂಲಕ ಮಾತ್ರ ಸೇನೆ, ನೌಕಾಪಡೆ, ವಾಯಪಡೆಗೆ ನೇಮಕಾತಿ

ಆನಂದ್ ಮಹೀಂದ್ರಾ ಅವರು ಅಗ್ನಿವೀರ್‌ಗಳನ್ನು ಯಾವ ಹುದ್ದೆಗಳಲ್ಲಿ ನೇಮಿಸಿಕೊಳ್ಳುತ್ತಾರೆ ಎಂದು ಬಳಕೆದಾರರು ಅವರನ್ನು ಕೇಳಿದಾಗ ಉತ್ತರಿಸಿರುವ ಆನಂದ್ ಮಹೀಂದ್ರಾ,”ಕಾರ್ಪೊರೇಟ್ ವಲಯದಲ್ಲಿ ಅಗ್ನಿವೀರ್‌ಗಳ ಉದ್ಯೋಗಕ್ಕೆ ದೊಡ್ಡ ಅವಕಾಶ ಮತ್ತು ಆಯ್ಕೆಯಿದೆ. ಲೀಡರ್​​ಶಿಪ್, ಟೀಮ್‌ವರ್ಕ್ ಮತ್ತು ದೈಹಿಕ ತರಬೇತಿಯೊಂದಿಗೆ ಅಗ್ನಿವೀರ್‌ಗಳಿಗೆ ಅನೇಕ ಉದ್ಯೋಗಾವಕಾಶಗಳನ್ನು ಒದಗಿಸಲಾಗುವುದು. ಆಪರೇಷನ್​ನಿಂದ ಅಡ್ಮಿನಿಸ್ಟ್ರೇಷನ್, ಸಪ್ಲೈ ಮ್ಯಾನೇಜ್​ಮೆಂಟ್ ಮುಂತಾದ ಎಲ್ಲ ವಿಭಾಗಗಳಲ್ಲೂ ಉದ್ಯೋಗಕ್ಕೆ ಅವಕಾಶ ನೀಡಲಾಗುವುದು ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ.

ಇದನ್ನೂ ಓದಿ: Agnipath Scheme Protest ಅಗ್ನಿಪಥ್ ಆಕ್ರೋಶ ತೀವ್ರ: ಸಿಕಂದರಾಬಾದ್​​​ನಲ್ಲಿ 1 ಸಾವು, 8 ಮಂದಿಗೆ ಗಾಯ; 200 ರೈಲುಗಳಿಗೆ ಹಾನಿ

17.5 ರಿಂದ 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳವರೆಗೆ ನೇಮಕ ಮಾಡಿಕೊಳ್ಳುವ ಅಗ್ನಿಪಥ್ ಎಂಬ ಹೊಸ ಸೇನಾ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದ ನಂತರ ದೇಶಾದ್ಯಂತ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿವೆ. ನಾಲ್ಕು ವರ್ಷಗಳ ನಂತರ ಸುಮಾರು 12 ಲಕ್ಷ ರೂ. ಮೊತ್ತದೊಂದಿಗೆ ಶೇ. 75ರಷ್ಟು ನೇಮಕಾತಿಗಳನ್ನು ರದ್ದುಗೊಳಿಸಲಾಗುವುದ. ಅವರಿಗೆ ಯಾವುದೇ ಪಿಂಚಣಿ ಪ್ರಯೋಜನಗಳಿಲ್ಲ. ಅಗ್ನಿಪಥ್​ ಯೋಜನೆಯಡಿ ನೇಮಕಗೊಂಡ ಶೇ. 25ರಷ್ಟು ಅಗ್ನಿವೀರರು ಮಾತ್ರ 15 ವರ್ಷಗಳ ಅಧಿಕಾರಾವಧಿಯನ್ನು ಪೂರೈಸುತ್ತಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಆದರೆ, ಕೇವಲ 4 ವರ್ಷಗಳ ಅವಧಿಯು ಸೈನಿಕರಿಗೆ ಮುಂದೆ ಉದ್ಯೋಗದಲ್ಲಿ ಸಮಸ್ಯೆ ಉಂಟುಮಾಡುತ್ತದೆ ಎಂಬುದು ಅನೇಕ ಜನರ ವಾದ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯುತ್ತದೆ. ಪ್ರತಿಭಟನಾಕಾರರು ಅಧಿಕಾರಾವಧಿ ಮುಗಿದ ನಂತರ ಏನು ಮಾಡಬೇಕು ಎಂಬುದರ ಕುರಿತು ಅನಿಶ್ಚಿತತೆಯನ್ನು ಹೊಂದುತ್ತಾರೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಆದರೆ, ಅರೆಸೇನಾ ಪಡೆಗಳು ಮತ್ತು ಸರ್ಕಾರಿ ಹುದ್ದೆಗಳಲ್ಲಿ ಅಗ್ನಿವೀರರಿಗೆ ಆದ್ಯತೆ ಸೇರಿದಂತೆ ಕೇಂದ್ರ ಸರ್ಕಾರವು ಈಗಾಗಲೇ ಹಲವಾರು ಭರವಸೆಗಳನ್ನು ನೀಡಿದೆ. ಪ್ರತಿಭಟನೆ ಹೆಚ್ಚಾಗುತ್ತಿದ್ದರೂ ಕೆಲವು ನಿಯಮಗಳ ಸಡಿಲಿಕೆ ಮಾಡಬಹುದೇ ವಿನಃ ಈ ಯೋಜನೆಯನ್ನು ಹಿಂತೆಗೆದುಕೊಳ್ಳುವ ಯಾವುದೇ ಉದ್ದೇಶವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:50 am, Mon, 20 June 22